ತುಮಕೂರು : ಆತ ಸರ್ಕಾರಿ ಕಚೇರಿಗೆ ಅಲೆ ಅಲೆದು ಸುಸ್ತಾಗಿದ್ದ. ತಾನು ಅಂದುಕೊಂಡ ಕೆಲಸ ಇವತ್ತೋ ನಾಳೆಯೋ ಆಗುತ್ತದೆ ಎಂದು  ಆಸೆಗಣ್ಣಿನಿಂದ ಎದುರು ನೋಡುತ್ತಿದ್ದ ವ್ಯಕ್ತಿ ಇದೀಗ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ವಾಸಣ್ಣ ನವರಿಗೆ ನನ್ನ ವಿನಂತಿ. ನನಗೇನಾದರೂ ತೊಂದರೆಯಾಗಿ ಸತ್ತರೆ ನಮ್ಮ ಮನೆಯರಿಗೆ ಸಹಾಯ ಮಾಡಿ. ನಾನು ರೈತನಾಗಬೇಕು ಎಂದು ಆಸೆ ಇತ್ತು. ಆದರೆ ಅಲ್ಲಿ ತೊಂದರೆಯಾಗುತ್ತಿದೆ.  ಆ ಜಾಗ ಬಿಟ್ಟರೆ ನಮಗೆ ಬೇರೆ ಏನೂ ಇಲ್ಲ. ನಾವು ತುಂಬಾ ನೋವಿನಲ್ಲಿದ್ದೇವೆ. ನೀವೇ ಸಹಾಯ ಮಾಡಬೇಕು. ನನಗೆ ತೊಂದರೆಯಾಗಿ ಸತ್ತರೆ ನನ್ನ ಮಣ್ಣಿಗೆ ನೀವು ಬರಬೇಕು ವಾಸಣ್ಣನವರೇ. ನಿಮ್ಮನ್ನ ಬಿಟ್ಟರೆ ನಮಗೆ ಯಾರೂ ಇಲ್ಲ. ನಿಮಗೆ ಹುಟ್ಟು ಹಬ್ಬದ ಶುಭಾಷಯಗಳು.. ಇಂತಿ ನಿಮ್ಮ ಪ್ರೀತಿಯ ಅಭಿಮಾನಿ ರೇಣುಕಾ ಸೌಮ್ಯ.  ಪುಟ್ಟ ಡೈರಿಯಲ್ಲಿ ಅಗಡಿದ್ದ ಭಾವುಕ ಬರಹದ ಮಾತುಗಳಿವು. ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ವಾಸಿ ಜಯಪ್ರಕಾಶ್ ಬರೆದಿರುವ ಬರಹ ಇದು. ಗೋಮಾಳ ಜಮೀನಿಗೆ ಸಾಗುವಳಿ ಚೀಟಿ ನೀಡಲು ಸಹಾಯ ಮಾಡಿದ್ದ ಶಾಸಕ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಬಗ್ಗೆ ಬರೆದಿರುವ ಪತ್ರ ಇದು. 


ಇದನ್ನೂ ಓದಿ : "ನರೇಂದ್ರ ಮೋದಿ ಅವರು ವಾಸ ಮಾಡುವ ದೆಹಲಿಯಲ್ಲೇ ಅವರ ಹವಾ ಇಲ್ಲ"-ಸಿದ್ದರಾಮಯ್ಯ


ತನ್ನ ಹೆಸರಿಗೆ ಪಹಣಿ ಬರಲಿಲ್ಲ ಎಂದು ಮನನೊಂದು ಡಾಬಸ್ ಪೇಟೆಯ ದೇವರಹೊಸಹಳ್ಳಿ ಕೆರೆಗೆ ಹಾರಿ ಜಯಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಜಯಪ್ರಕಾಶ್ ಜೇಬಿನಲ್ಲಿ ಸಿಕ್ಕ ಪತ್ರದಲ್ಲಿ ತನ್ನ ನೋವಿನ ಕಥೆಯನ್ನು ಬರೆದುಕೊಂಡಿದ್ದಾರೆ. ಕೆರೆಗೆ ಬಿದ್ದ ಬಳಿಕ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ  ಮೃತದೇಹವನ್ನು  ಮೇಲೆತ್ತಿದ್ದಾರೆ. 


ಜಯಪ್ರಕಾಶ್ ಸಾವಿನಿಂದ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಡೆತ್ ನೋಟ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರ ಹೆಸರು ಪ್ರಸ್ತಾಪ ಮಾಡಿ ತಮ್ಮ ಕುಟುಂಬಕ್ಕೆ ಪಹಣಿ ಮಾಡಿಸಿಕೊಳ್ಳುವಂತೆ  ಕೇಳಿಕೊಂಡಿದ್ದಾನೆ ಎನ್ನಲಾಗಿದೆ.  ಶಾಸಕರು ಜನರಿಗೆ ಸಹಾಯ ಮಾಡಿದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಮಾಯಕ ಜೀವೊಂದು ಬಲಿಯಾಗಿದೆ.


ಇದನ್ನೂ ಓದಿ : Minister Halappa Achar : 'ದೇವದಾಸಿ ಪದ್ದತಿಯ ನಿರ್ಮೂಲನಗೆ ಕಟ್ಟುನಿಟ್ಟಿನ ಕಾನೂನು'


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.