6 ಗಂಟೆ ತಡವಾಗಿ ವಿಮಾನ ಹಾರಾಡಲು ಕಾರಣವಾಗಿದ್ದು ಜೋಡಿಯ ಮೊಬೈಲ್ ಚಾಟ್!
ಮಾಹಿತಿ ಪಡೆದ ನಂತರ, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ಹೇಳಲಾಯಿತು. ಅವರ ಲಗೇಜ್‌ಗಳನ್ನು ವ್ಯಾಪಕವಾಗಿ ಪರಿಶೀಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ ಮಂಗಳೂರು-ಮುಂಬೈ ವಿಮಾನದಲ್ಲಿ ಹೈವೋಲ್ಟೇಜ್ ಡ್ರಾಮವೊಂದು ನಡೆದಿದೆ. ಇದರಿಂದಾಗಿ ವಿಮಾನವು ನಿಗದಿತ ಸಮಯಕ್ಕಿಂತ 6 ಗಂಟೆ ತಡವಾಗಿ ಹಾರಾಟ ನಡೆಸಿದೆ.
ಈ ವಿಮಾನದಲ್ಲಿ ಹೋಗುತ್ತಿದ್ದ ಮಹಿಳಾ ಪ್ರಯಾಣಿಕರು ತನ್ನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಮೊಬೈಲ್ ಫೋನ್‌ನಲ್ಲಿ ಅನುಮಾನಾಸ್ಪದ ಸಂದೇಶ ಬರುತ್ತಿರುವ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯ ನಂತರ, ಪೊಲೀಸರು ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರವು ಕಾರ್ಯಾಚರಣೆಗೆ ಇಳಿದಿತ್ತು. ಬಳಿಕ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಗಿತ್ತು. ತಪಾಸಣೆ ಪ್ರಕ್ರಿಯೆಯು ದೀರ್ಘಕಾಲದವರೆಗೆ ಮುಂದುವರೆಯಿತು.
ಇದನ್ನೂ ಓದಿ: ಅಂಬಾನಿ ಕುಟುಂಬಕ್ಕೆ ಬೆದರಿಕೆ: ರಿಲಯನ್ಸ್ ಆಸ್ಪತ್ರೆಗೆ ಬಂತು ಎಂಟು ಬೆದರಿಕೆ ಕರೆಗಳು!
ಮಾಹಿತಿ ಪಡೆದ ನಂತರ, ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲು ಹೇಳಲಾಯಿತು. ಅವರ ಲಗೇಜ್‌ಗಳನ್ನು ವ್ಯಾಪಕವಾಗಿ ಪರಿಶೀಲಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ನಂತರವೇ ಇಂಡಿಗೋ ವಿಮಾನವನ್ನು ಭಾನುವಾರ ಸಂಜೆ ಮುಂಬೈಗೆ ಹಾರಲು ಅನುಮತಿಸಲಾಗಿದೆ.
ವರದಿಯ ಪ್ರಕಾರ, ಮಹಿಳಾ ಪ್ರಯಾಣಿಕರು ವಿಮಾನದಲ್ಲಿದ್ದ ವ್ಯಕ್ತಿಯ ಮೊಬೈಲ್ ಫೋನ್‌ನಲ್ಲಿ ಸಂದೇಶವನ್ನು ನೋಡಿದ್ದರು. ಸಂದೇಶವು ಅನುಮಾನಾಸ್ಪದವಾಗಿ ಕಂಡು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿಬ್ಬಂದಿ ಇದನ್ನು ಏರ್ ಕಂಟ್ರೋಲ್ ರೂಂಗೆ ವರದಿ ಮಾಡಿದ್ದಾರೆ. ನಂತರ ವಿಮಾನವನ್ನು ಟೇಕಾಫ್ ಮಾಡಬೇಕಾಯಿತು.
ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸುತ್ತಾ ಮಾತನಾಡುತ್ತಿದ್ದ ಎನ್ನಲಾಗಿದೆ. ಅವನ ಗೆಳತಿ ಅದೇ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಹೋಗಬೇಕಾಗಿತ್ತು. ಆದರೆ ಈ ಸಂದೇಶವನ್ನು ಇನ್ನೊಬ್ಬ ಮಹಿಳೆ ನೋಡಿದ್ದು, ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇನ್ನು ವಿಚಾರಣೆಯಿಂದಾಗಿ ಈ ವ್ಯಕ್ತಿಯನ್ನು ವಿಮಾನ ಹತ್ತಲು ಬಿಡಲಿಲ್ಲ. ಬಳಿಕ ಸಂಪೂರ್ಣ ತನಿಖೆ ವೇಳೆ ಸತ್ಯ ಸಂಗತಿ ತಿಳಿದುಬಂದಿದೆ. ಆ ಬಳಿಕವೇ ಎಲ್ಲಾ 185 ಪ್ರಯಾಣಿಕರನ್ನು ಮತ್ತೆ ಮುಂಬೈ ವಿಮಾನ ಹತ್ತಲು ಅನುಮತಿಸಲಾಯಿತು.
ಇದನ್ನೂ ಓದಿ: ಬಂದಿದೆ ಅತ್ಯಂತ ಅಗ್ಗದ ಬೆಲೆಯ 65 ಇಂಚಿನ Smart TV!
ಭದ್ರತೆಗೆ ಸಂಬಂಧಿಸಿದಂತೆ ಇಬ್ಬರು ಸ್ನೇಹಿತರ ನಡುವೆ ಸೌಹಾರ್ದ ಮಾತುಕತೆ ನಡೆದಿದ್ದರಿಂದ ತಡರಾತ್ರಿವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಮಂಗಳೂರು ನಗರ ಆಯುಕ್ತ ಎನ್. ಶಶಿಕುಮಾರ್ ಹೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.