Viral News: ‘ನಾನು ತಂದೆಯಾಗಬೇಕು 2 ತಿಂಗಳು ರಜೆ ಕೊಡಿ’ ಎಂದ ನೌಕರನ ಅರ್ಜಿ ವೈರಲ್!

'ನಾನು ನನ್ನ ಕುಟುಂಬನ್ನು ಭೇಟಿ ಮಾಡಬೇಕು. ನಾನು ತಂದೆಯಾಗಬೇಕು ಹೀಗಾಗಿ ನನಗೆ ಒಟ್ಟು 60 ದಿನಗಳ ರಜೆ ಬೇಕು' ಎಂದು ಸ್ಪಷ್ಟವಾಗಿ ಬರೆದಿದ್ದಾನೆ.

Written by - Puttaraj K Alur | Last Updated : Aug 15, 2022, 01:09 PM IST
  • ಉದ್ಯೋಗಿಯೊಬ್ಬನ ರಜೆಯ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
  • ನಾನು ತಂದೆಯಾಗಬೇಕು 2 ತಿಂಗಳು ರಜೆ ಕೊಡಿ ಎಂದು ಕಾರಣ ನೀಡಿರುವ ಉದ್ಯೋಗಿ
  • ಉದ್ಯೋಗಿಯ ವಿಚಿತ್ರ ಕಾರಣದ ರಜೆಯ ಅರ್ಜಿ ಕಂಡು ಬಿದ್ದು ಬಿದ್ದು ನಗುತ್ತಿರುವ ನೆಟಿಜನ್‍ಗಳು
Viral News: ‘ನಾನು ತಂದೆಯಾಗಬೇಕು 2 ತಿಂಗಳು ರಜೆ ಕೊಡಿ’ ಎಂದ ನೌಕರನ ಅರ್ಜಿ ವೈರಲ್!  title=
ರಜೆಯ ಅರ್ಜಿ ಸಖತ್ ವೈರಲ್

ನವದೆಹಲಿ: ಉದ್ಯೋಗ ಮಾಡುತ್ತಿರುವ ಅನೇಕರು ತಮಗೆ ಸರಿಯಾಗಿ ರಜೆ ಸಿಗುತ್ತಿಲ್ಲವೆಂದು ದೂರುತ್ತಾರೆ. ಕೆಲವರು ರಜೆ ಪಡೆಯಲು ವಿಚಿತ್ರವಾದ ಕಾರಣ ನೀಡುತ್ತಾರೆ. ಆದರೆ ವ್ಯಕ್ತಿಯೊಬ್ಬನ ರಜೆಯ ಅರ್ಜಿಯು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದ್ದು, ರಜೆಗಾಗಿ ಆತ ಕೊಟ್ಟಿರುವ ಕಾರಣ ಕೇಳಿ ಪ್ರತಿಯೊಬ್ಬರೂ ಬಿದ್ದು ಬಿದ್ದು ನಗುವಂತಾಗಿದೆ.

ಹೌದು, ವೈರಲ್ ಆಗಿರುವ ರಜೆಯ ಅರ್ಜಿಯಲ್ಲಿ ಉದ್ಯೋಗಿ ತನಗೆ ರಜೆ ಏಕೆ ಬೇಕೆಂದು ಸ್ಪಷ್ಟವಾಗಿ ಹೇಳಿದ್ದಾನೆ. ಏತಕ್ಕಾಗಿ ರಜೆ ಬೇಕು ಅನ್ನೋದರ ಬಗ್ಗೆ ತಿಳಿಸಿರುವ ಆತನ ಕಾರಣ ಕೇಳಿದ್ರೆ ನೀವು ಸಹ ಹೊಟ್ಟೆಹುಣ್ಣಾಗುವಂತೆ ನಗುವುದು ಗ್ಯಾರಂಟಿ. ‘ನಾನು ನನ್ನ ಕುಟುಂಬವನ್ನು ಭೇಟಿ ಮಾಡಬೇಕು ಮತ್ತು ತಂದೆಯಾಗಬೇಕು. ಹೀಗಾಗಿ ನನಗೆ 2 ತಿಂಗಳು ರಜೆ ಬೇಕು’ ಎಂದು ಆತ ತನ್ನ ಅರ್ಜಿಯಲ್ಲಿ ಬರೆದಿದ್ದಾನೆ. ಈ ರಜಾ ಅರ್ಜಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ಕಂಡ ನೆಟಿಜನ್‌ಗಳು ವಿವಿಧ ರೀತಿ ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Viral News: ಪುಟ್ಟ ಬಾಲಕಿಯ ಕಡಿತದಿಂದ ಹಾವು ಸಾವು, ಬಾಲಕಿ ಸೇಫ್! ಎಂದಾದರೂ ಕೇಳಿದ್ದೀರಾ?

ಉದ್ಯೋಗಿ ರಜೆ ತೆಗೆದುಕೊಳ್ಳಲು ಕಾರಣವೇನು?

ಸದ್ಯ ವೈರಲ್ ಆಗುತ್ತಿರುವ ಈ ರಜೆಯ ಅರ್ಜಿಯಲ್ಲಿ ಬಾಂಗ್ಲಾದೇಶದ ವಿಳಾಸ ಬರೆಯಲಾಗಿದೆ. ತಂದೆಯಾಗಲು ಬಯಸಿದ ಉದ್ಯೋಗಿ ತನ್ನ ಬಾಸ್‍ಗೆ 1-2 ವಾರಗಳಲ್ಲ ಬರೋಬ್ಬರಿ 2 ತಿಂಗಳ ರಜೆ ಕೇಳಿದ್ದಾನೆ. ನಾನು ನನ್ನ ಕುಟುಂಬನ್ನು ಭೇಟಿ ಮಾಡಬೇಕು. ನಾನು ತಂದೆಯಾಗಬೇಕು ಹೀಗಾಗಿ ನನಗೆ ಒಟ್ಟು 60 ದಿನಗಳ ರಜೆ ಬೇಕು ಎಂದು ಸ್ಪಷ್ಟವಾಗಿ ಬರೆದಿದ್ದಾನೆ. ಈ ರಜಾ ಅರ್ಜಿಯನ್ನು 2017ರಲ್ಲಿ ಬರೆಯಲಾಗಿದೆ. ಅರ್ಜಿಯ ಪ್ರಕಾರ ಉದ್ಯೋಗಿ ನವೆಂಬರ್ 15, 2017 ರಿಂದ ಜನವರಿ 15, 2018ರವರೆಗೆ ತನಗೆ ರಜೆ ಬೇಕೆಂದು ಕೋರಿದ್ದಾನೆ. ಈ ಸಮಯದಲ್ಲಿ ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿ ತನ್ನ ಕುಟುಂಬವಿದೆ ಎಂದು ಆತ ತಿಳಿಸಿದ್ದ. ಅಂದು ಬರೆದ ಅರ್ಜಿ ಇಂದು ವೈರಲ್ ಆಗುತ್ತಿದೆ.

ಇನ್ನು ಕೇಳಲು ಫನ್ನಿಯಾಗಿರೋ ಈ ರಜಾ ಅರ್ಜಿಗೆ ನೆಟಿಜನ್‍ಗಳು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ‘ಯಾರೂ ಸಹ ಈ ರೀತಿ ಸತ್ಯವನ್ನು ಹೇಳಬಾರದು’ ಎಂದು ಒಬ್ಬಾತ ಬರೆದರೆ, ‘ನಾನು ಈಗ ಇದೇ ರೀತಿ ರಜೆಗೆ ಅರ್ಜಿ ಸಲ್ಲಿಸುತ್ತೇನೆ’ ಎಂದು ಮತ್ತೊಬ್ಬ ಕಾಮೆಂಟ್ ಮಾಡಿದ್ದಾನೆ.

ಇದನ್ನೂ ಓದಿ: ಬಿಜೆಪಿ ವಿರುದ್ಧ ಕಾಂಗ್ರೆಸ್ ಸೇರಿ 11 ವಿಪಕ್ಷಗಳಿಂದ ಮಾಸ್ಟರ್ ಪ್ಲಾನ್! ಏನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News