ಬೆಂಗಳೂರು: 1 ಕಿ.ಮೀ ಆಚೆಗೂ ದುರ್ನಾತ ಬೀರುತ್ತಿರುವ ಒಳಚರಂಡಿಯ ವಾಸನೆ, ಕಟ್ಟಿಕೊಂಡ ಸೀವೇಜ್ ನೀರನ್ನು ಬಿಡಿಸುತ್ತಿರುವ ಕಾರ್ಮಿಕರು, ಕೈಗೆ ಗ್ಲೌಸ್ ಮತ್ತು ಮುಖಕ್ಕೆ ಮಾಸ್ಕ್ ಇಲ್ಲದೆ ಒಳಚರಂಡಿಗೆ ಇಳಿದು ಬಕೆಟ್ ಮೂಲಕ ಶೌಚಾಲಯದ ನೀರನ್ನು ಎತ್ತಿಹಾಕುತ್ತಿರುವ ಕಾರ್ಮಿಕರು. ಈ ದೃಶ್ಯಗಳು ಕಂಡುಬಂದಿದ್ದು ಮಹಾನಗರಿ ಬೆಂಗಳೂರಲ್ಲಿ. ಅದೂ ಸಹ ಸ್ಮಾರ್ಟ್ ಸಿಟಿ ಕಾಮಗಾರಿ ನಿರ್ವಹಣೆಯಲ್ಲಿ.


COMMERCIAL BREAK
SCROLL TO CONTINUE READING

ಹೌದು, ದೇಶದಲ್ಲಿ ಮಲಹೊರುವ ಪದ್ಧತಿ ನಿಷಿದ್ಧವಾಗಿದ್ರೂ ಅತ್ಯಂತ ಮುಂದುವರಿದ ಸಿಟಿ ರಾಜಧಾನಿ ಬೆಂಗಳೂರಲ್ಲೇ ಇದು ಇನ್ನೂ ಜಾರಿಯಲ್ಲಿದೆ. ಅದೂ ಸಹ ಕೇಂದ್ರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ. ಶಿವಾಜಿನಗರದ ಇನ್ಫಾಂಟ್ರಿ ರಸ್ತೆಯಲ್ಲಿ ಒಳಚರಂಡಿ ಬ್ಲಾಕ್ ಆಗಿದೆ ಎಂಬ ದೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ಗೆ ಬಂದಿದೆ. ಸ್ಮಾರ್ಟ್ ಸಿಟಿಯು ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಬೇಕಿತ್ತು. ಆದರೆ ಒಬ್ಬರು ಕಾರ್ಮಿಕರು ಹಾಗೂ ಮತ್ತೊಬ್ಬರು ವೃದ್ಧರನ್ನು ಬಳಸಿಕೊಂಡು ಯಾವುದೇ ಸುರಕ್ಷತಾ ಮಾರ್ಗಗಳಿಲ್ಲದೆ ಅತ್ಯಂತ ಕನಿಷ್ಠವಾಗಿ ನಡೆಸಿಕೊಳ್ಳಲಾಗಿದೆ.


ಇದನ್ನೂ ಓದಿ: KPTCL Recruitment Scam: ಅಭ್ಯರ್ಥಿಗಳಿಗೆ ಎಲೆಕ್ಟ್ರಾನಿಕ್ ಡಿವೈಸ್ ಪೂರೈಸಿದ್ದ ಆರೋಪಿ ಬಂಧನ!


ಸ್ಥಳಕ್ಕೆ ಬಂದ ವಕೀಲರಾದ ವಿನಯ್ ಶ್ರೀನಿವಾಸ್ ಇದನ್ನು ತಡೆದಿದ್ದಾರೆ. ಬಳಿಕ ‘ಜೀ ಕನ್ನಡ ನ್ಯೂಸ್’ ಜೊತೆ ಮಾತನಾಡಿದ ಅವರು, ‘ಕಾರ್ಮಿಕರು ಬಕೆಟ್‍ನಲ್ಲಿ ಸೀವೇಜ್ ನೀರು ಹೊರತೆಗೆಯುತ್ತಿದ್ದರು. ಮಲವನ್ನು ಕೈಯಲ್ಲಿ ಮುಟ್ಟುವಂತಿಲ್ಲ. ಇದು ಮನುಷ್ಯನ ಘನತೆಗೆ ಧಕ್ಕೆ ತರುವಂತದ್ದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರನ್ನು ವಿಚಾರಿಸಿದ್ರೆ ಅವರಿಗೆ ಈ ಬಗ್ಗೆ ಏನೂ ಗೊತ್ತಿಲ್ಲ. ಕಡೆಗೆ ಸ್ಮಾರ್ಟ್ ಸಿಟಿ ಕಾಮಗಾರಿ ಅಂತಾ ಗೊತ್ತಾಗಿದೆ. ಕಳೆದ ಅಕ್ಟೋಬರ್ ನಲ್ಲೂ ಇದೇ ರೀತಿ ಇದೇ ರಸ್ತೆಯಲ್ಲಿ ಮ್ಯಾನ್ಯುವಲ್ ಸ್ಕಾವೆಂಜಿಂಗ್ ನಡೆದಿದೆ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಕ್ಟ್ ಸೆಕ್ಷನ್ 7ರ ಪ್ರಕಾರ ಇದು ಕಾನೂನುಬಾಹಿರ.


ವಿದ್ಯಾರ್ಥಿಗೆ ಬಿಸಿನೀರು ಎರಚಿ ವಿಕೃತಿ ಮೆರೆದ ಶಿಕ್ಷಕ, ಗಂಭೀರ ಗಾಯಗೊಂಡ ಬಾಲಕ ಆಸ್ಪತ್ರೆಗೆ ದಾಖಲು


ಅಲ್ಲದೆ ಹೈಕೋರ್ಟ್ ನಲ್ಲಿ ಎಐಟಿಯುಸಿ v/s ಯೂನಿಯನ್ ಆಫ್ ಇಂಡಿಯಾ ಇದರ ವಿಚಾರಣೆಯಲ್ಲೂ ಸ್ಪಷ್ಟವಾಗಿ ಹೇಳಲಾಗಿದೆ. ಮತ್ತೆ ಇದು ಪುನರಾವರ್ತನೆಯಾದರೆ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಅವರನ್ನೇ ಹೊಣೆ ಮಾಡಲಾಗುತ್ತದೆ ಎಂದಿದ್ದಾರೆ. ಆದರೆ ಮತ್ತೆ  ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ನಡೆದಿದೆ. ಕೇಳಿದರೆ ನೀರಿನ ಪೈಪ್ ಸರಿಮಾಡಲು ಬಂದಿದ್ದೇವೆ ಅಂತಿದ್ದಾರೆ. ಆದರೆ ಇದು ಕಾನೂನುಬಾಹಿರ, ಕಾರ್ಮಿಕರ ಘನತೆಗೆ ಧಕ್ಕೆ ತಂದಿರೋದು ಅಮಾನವೀಯವೆಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.