ಕೃಷಿ ಸಚಿವರು ಮಿಸ್ಸಿಂಗ್‌ ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು, ದಪ್ಪ ಮೀಸೆ : ʼಕೈʼ ಪ್ರಕಟಣೆ

ಬಿಜೆಪಿ ಸಚಿವರ ವಿರುದ್ಧ ʼಮಿಸಿಂಗ್‌ ಮಿನಿಸ್ಟರ್‌ʼ ಅಭಿಯಾನವನ್ನು ಕಾಂಗ್ರೆಸ್‌ ಪಡೆ ಮುಂದುವರೆಸಿದೆ. ಇಂದು ಕೃಷಿ ಸಚಿವರು ಕಾಣೆಯಾಗಿದ್ದಾರೆ. ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು ಎಂದು ಬಿ.ಸಿ.ಪಾಟೀಲ್‌ ಅವರ ಕಾಲೆಳೆದಿದ್ದಾರೆ.

Written by - Krishna N K | Last Updated : Sep 8, 2022, 07:48 PM IST
  • ಬಿಜೆಪಿ ಸಚಿವರ ವಿರುದ್ಧ ಕಾಂಗ್ರೆಸ್‌ ʼಮಿಸಿಂಗ್‌ ಮಿನಿಸ್ಟರ್‌ʼ ಅಭಿಯಾನ
  • ಕೃಷಿ ಸಚಿವರು ಕಾಣೆಯಾಗಿದ್ದಾರೆ. ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು
  • ಸಂಕಷ್ಟದಲ್ಲಿರುವ ರಾಜ್ಯದ ರೈತರು ಸಚಿವರನ್ನು ಕಾಣದೆ ಆತಂಕಗೊಂಡಿದ್ದಾರೆ ಹುಡುಕಿಕೊಡಿ
ಕೃಷಿ ಸಚಿವರು ಮಿಸ್ಸಿಂಗ್‌ ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು, ದಪ್ಪ ಮೀಸೆ : ʼಕೈʼ ಪ್ರಕಟಣೆ title=

ಬೆಂಗಳೂರು: ಬಿಜೆಪಿ ಸಚಿವರ ವಿರುದ್ಧ ʼಮಿಸಿಂಗ್‌ ಮಿನಿಸ್ಟರ್‌ʼ ಅಭಿಯಾನವನ್ನು ಕಾಂಗ್ರೆಸ್‌ ಪಡೆ ಮುಂದುವರೆಸಿದೆ. ಇಂದು ಕೃಷಿ ಸಚಿವರು ಕಾಣೆಯಾಗಿದ್ದಾರೆ. ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು ಎಂದು ಬಿ.ಸಿ.ಪಾಟೀಲ್‌ ಅವರ ಕಾಲೆಳೆದಿದ್ದಾರೆ.

ಕೃಷಿ ಸಚಿವರು ಕಾಣೆಯಾಗಿದ್ದಾರೆ. ಹೆಸರು: ಬಿ.ಸಿ.ಪಾಟೀಲ್‌, ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು, ದುಂಡುಮುಖ, ದಪ್ಪ ಮೀಸೆ. ವಯಸ್ಸು : 65. ಸಿನೆಮಾ ಪ್ರದರ್ಶನದಲ್ಲಿ ಕಾಣಿಸಿಕೊಂಡವರು ನಂತರ ಪತ್ತೆಯಾಗಿಲ್ಲ. ಹಲವು ತಿಂಗಳಿಂದ ಅತಿವೃಷ್ಟಿಯ ಸಂಕಷ್ಟದಲ್ಲಿರುವ ರಾಜ್ಯದ ರೈತರು ಸಚಿವರನ್ನು ಕಾಣದೆ ಆತಂಕಗೊಂಡಿದ್ದಾರೆ. ದಯಮಾಡಿ ಹುಡುಕಿಕೊಡಿ ಎಂದು ಟ್ಟೀಟ್‌ ಮಾಡುವ ಮೂಲಕ ಸಚಿವರ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಹಣ ಪಡೆಯುವ ಮುಂಚೆ ಎಚ್ಚರ..!

ಅಲ್ಲದೆ, ಕೇಂದ್ರ ತಂಡದ ವರದಿಯಂತೆ ರಾಜ್ಯದಲ್ಲಿ ಅತಿವೃಷ್ಟಿಯ ನಷ್ಟ ₹3000 ಕೋಟಿ. ವಾಸ್ತವದಲ್ಲಿ ಈ ಮೊತ್ತ ದೊಡ್ಡದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಅಸಲಿ 'ಜನಸ್ಪಂದನೆ' ಎಂದರೆ ಸಂತ್ರಸ್ತರಿಗೆ ಪರಿಹಾರ ಒದಗಿಸುವುದು, ವಿಶೇಷ ಪ್ಯಾಕೇಜ್ ಘೋಷಿಸುವುದು, ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಡ ಹಾಕುವುದು. 'ಜನಸ್ಪಂದನೆ' ಹೆಸರಲ್ಲಿ ಸಮಾವೇಶ ಮಾಡಿದರೆ ಜನರಿಗೆ ಸ್ಪಂದಿಸಿದಂತಾಗದು ಎಂದಿದ್ದಾರೆ.

ನಿನ್ನೆಯೂ ಸಹ ಸಚಿವರಾದ ಸುಧಾಕರ್‌, ಆರಗ ಜ್ಞಾನೇಂದ್ರ, ಬಿ.ಎ.ಬಸವರಾಜ, ಎಸ್‌.ಟಿ. ಸೋಮಶೇಖರ್‌, ಗೋಪಾಲಯ್ಯ, ಆರ್‌.ಅಶೋಕ್‌, ಸೋಮಣ್ಣ, ಮುನಿರತ್ನ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವಾರು ಶಾಸಕರು ಕಾಣೆಯಾಗಿದ್ದಾರೆ ಎಂದು ಕೆಪಿಸಿಸಿ ಟ್ಟೀಟ್‌ ಮಾಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News