ʼಸಿಹಿʼತಿಂಡಿಯ ಕಾರಣಕ್ಕೆ ಉಂಗುರ ಕಳಚಿಟ್ಟ ವರ; ಮದುವೆಯೇ ಬೇಡವೆಂದ ವಧು!
Marriage broke up in Kodagu: ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದ ಊಟದಲ್ಲಿ ಸಿಹಿತಿಂಡಿ ನೀಡಿಲ್ಲವೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಸೋಮವಾರಪೇಟೆಯ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ.
ಮಡಿಕೇರಿ: ತಾಳಿ ಕಟ್ಟುವ ಶುಭ ವೇಳೆಯಲ್ಲಿಯೇ ಚಿತ್ರ-ವಿಚಿತ್ರ ಕಾರಣಕ್ಕೆ ಮದುವೆಗಳು ಮುರಿದುಬಿದ್ದ ಅನೇಕ ಘಟನೆಗಳು ನಡೆದಿವೆ. ಇಷ್ಟವಿಲ್ಲದ ಮದುವೆಗೆ ತಾಳಿ ಕಟ್ಟುವ ವೇಳೆಯೇ ತಕರಾರು ತೆಗೆಯುವ ವಧು, ಊಟದ ವಿಚಾರಕ್ಕೆ ಗಲಾಟೆ ಮಾಡಿಕೊಂಡು ವಿವಾಹಗಳು ರದ್ದಾಗಿರುವ ನಿದರ್ಶನಗಳಿವೆ. ಅದೇ ರೀತಿ ಮಡಿಕೇರಿಯಲ್ಲಿ ಮದುವೆಯೊಂದು ವಿಚಿತ್ರ ಕಾರಣಕ್ಕೆ ರದ್ದಾಗಿದೆ. ಸಿಹಿತಿಂಡಿಯ ಕಾರಣಕ್ಕೆ ಸಂತೋಷದಿಂದ ಕೂಡಿದ್ದ ಮದುವೆಮನೆ ಕಳಾಹೀನವಾಗಿದೆ. ಹಾಗಾದ್ರೆ ಆ ಮದುವೆ ಮನೆಯಲ್ಲಿ ಏನಾಯ್ತು ಅನ್ನೋದರ ಬಗ್ಗೆ ತಿಳಿಯಿರಿ.
ಮದುವೆಯ ಹಿಂದಿನ ದಿನ ಚಪ್ಪರ ಶಾಸ್ತ್ರದ ಊಟದಲ್ಲಿ ಸಿಹಿತಿಂಡಿ ನೀಡಿಲ್ಲವೆಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಸೋಮವಾರಪೇಟೆಯ ಕಲ್ಯಾಣಮಂಟಪವೊಂದರಲ್ಲಿ ನಡೆದಿದೆ. ಸೋಮವಾರಪೇಟೆ ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಯುವತಿಯ ವಿವಾಹ ತುಮಕೂರು ಜಿಲ್ಲೆಯ ಯುವಕ ಜೊತೆಗೆ ನಿಶ್ಚಯವಾಗಿತ್ತು. ಮೇ 5ರಂದು ಜಾನಕಿ ಕನ್ವೆನ್ಶನ್ ಹಾಲ್‌ನಲ್ಲಿ ವಿವಾಹ ನಿಗದಿಯಾಗಿತ್ತು.
ಇದನ್ನೂ ಓದಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ, ವದಂತಿಗಳು ಸುಳ್ಳು : NTA ಸ್ಪಷ್ಟನೆ
ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಆಗಮಿಸಿದ್ದರು. ಆದರೆ ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲವೆಂಬ ಕಾರಣಕ್ಕೆ ತಗಾದೆ ತೆಗೆದು ಗಲಾಟೆ ಆರಂಭವಾಗಿತ್ತು. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ನನಗೆ ಈ ಮದುವೆಯೇ ಬೇಡ ಎಂದು ವರ ಉಂಗುರವನ್ನೇ ಕಳಚಿಕಟ್ಟಿದ್ದಾನೆ.
ರವಿವಾರ ಬೆಳಗ್ಗೆ ಈ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಶನಿವಾರ ರಾತ್ರಿ ಮದುವೆಯೇ ಬೇಡವೆಂದು ಉಂಗುರ ಕಳಚಿಕೊಟ್ಟಿದ್ದ ವರ, ಮತ್ತೆ ತಾನು ಮದುವೆಯಾಗುತ್ತೇನೆಂದು ಹೊಸ ವರಸೆ ಆರಂಭಿಸಿದ್ದ. ಆದರೆ ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತ ವಧು ತನಗೆ ಈ ಮದುವೆಯೇ ಬೇಡವೆಂದು ಪೊಲೀಸರೆದುರು ಹೇಳಿಕೆ ನೀಡಿದ್ದಾಳೆ.
ಇದನ್ನೂ ಓದಿ: ಖ್ಯಾತ ನಟ ಸಾಯಿಧರಮ್ ತೇಜ್ ಮೇಲೆ ಹಲ್ಲೆ.! ತೀವ್ರ ಗಾಯ
ಹೀಗಾಗಿ ಪೂರ್ವ ನಿಗದಿತ ವಿವಾಹ ಕಾರ್ಯ ಸಿಹಿತಿಂಡಿ ವಿಚಾರವಾಗಿ ಮುರಿದುಬಿದ್ದಿದೆ. ಮದುವೆಗೆಂದು ತಾವು ಖರ್ಚು ಮಾಡಿರುವ ಹಣವನ್ನು ವರನ ಕಡೆಯವರು ನೀಡಬೇಕೆಂದು ವಧುವಿನ ಕಡೆಯವರು ಠಾಣೆ ಎದುರು ಆಗ್ರಹಿಸಿದರು. ಅಂತಿಮವಾಗಿ ಹಣಕಾಸಿನ ವಿಚಾರವನ್ನು ನೀವೇ ಬಗೆಹರಿಸಿಕೊಳ್ಳಿ ಅಂತಾ ಸಲಹೆ ನೀಡಿ ಪೊಲೀಸರು ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.