Attack on famous actor Saidharam Tej : ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ಕೇಳಿ ಬರುತಿದ್ದು, ಹರಡಿದ ವರದಿಗಳು ಸುಳ್ಳು ಎಂದು ಸ್ಫಷ್ಟಪಡಿಸಿದ್ದಾರೆ.
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಕಾರ್ಯಕರ್ತರು ಸಾಯಿ ಧರಂ ತೇಜ್ ಮೇಲೆ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ ಆರೋಪಿಸಿ ಆನ್‌ಲೈನ್‌ನಲ್ಲಿ ವರದಿಗಳು ಪ್ರಸಾರವಾಗಿದ್ದು, ಜನಸೇನಾ ಕಾರ್ಯಕರ್ತನಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಹಿರಿಯ ನಟ ಮುಸುರಿ ಕೃಷ್ನಮೂರ್ತಿ ಪತ್ನಿ, ಮಕ್ಕಳು ಯಾರು ಗೊತ್ತೆ..! ಇವರ ಮಕ್ಕಳೂ ಸಹ ಸಖತ್ ಫೇಮಸ್
ಜನಸೇನಾ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಪರ ಪ್ರಚಾರ ನಡೆಸುತ್ತಿದ್ದ ಚಿತ್ರನಟ ಸಾಯಿ ಧರಮ್ ತೇಜ್ ಅವರ ಮೇಲೆ ಕೆಲ ಪುಂಡರು ಹಲ್ಲೆಗೆ ಯತ್ನಿಸಿದ್ದಾರೆ. ಕಾಕನಾಡದ ಪಿಠಾಪುರ ಕ್ಷೇತ್ರದ ತಾಟಿಪರ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸಾಯಿ ಧರಂ ತೇಜ್ ಸ್ವಲ್ಪದರಲ್ಲೇ ಭಾರಿ ಅಪಾಯದಿಂದ ಪಾರಾಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವೈಎಸ್‌ಆರ್‌ಸಿಪಿ ಈ ದಾಳಿಯನ್ನು ನಡೆಸುತ್ತಿದೆ ಎಂದು ತೆಲುಗು ದೇಶಂ ಪಕ್ಷದ ನಾಯಕ ಮತ್ತು ಮಾಜಿ ಶಾಸಕ ಎಸ್‌ವಿಎಸ್‌ಎನ್ ವರ್ಮಾ ಆರೋಪಿಸಿದ್ದಾರೆ ಘಟನೆಯಲ್ಲಿ ಸಾಯಿಧರಮ್ ತೇಜ್ ಭಾಗಿಯಾಗಿಲ್ಲ ಎಂದು ಕಾಕಿನಾಡ ಡಿಎಸ್ ಪಿ ಕೆ.ಹನುಮಂತ ರಾವ್ ಸ್ಪಷ್ಟಪಡಿಸಿದ್ದಾರೆ .
ಇದನ್ನು ಓದಿ : ಹೆಣ್ಣಿನೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಪಾತ್ರ ಮಾಡಲು ನಟ ಭಯಂಕರ ವಜ್ರಮುನಿ ʼಈʼ ಕಂಡಿಷನ್ ಹಾಕುತ್ತಿದ್ದರಂತೆ!!
ಡಿಎಸ್ಪಿ ಪ್ರಕಾರ, ವೈಎಸ್‌ಆರ್‌ಸಿಪಿ ಕಾರ್ಯಕರ್ತನೊಬ್ಬ ಅಪರಿಚಿತ ವಸ್ತುವನ್ನು ಎಸೆದಿದ್ದು, ಪಕ್ಕದಲ್ಲಿದ್ದ ನಲ್ಲ ಶ್ರೀಧರ್ ಎಂಬಾತನ ತಲೆಗೆ ಸಣ್ಣ ಗಾಯವಾಗಿದೆ. ಚಿಕಿತ್ಸೆ ಪಡೆದು ಮರುದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರಿಗೆ ಬಾಟಲಿಗಳು ಅಥವಾ ಇತರ ವಸ್ತುಗಳ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇಬ್ಬರು YSRCP ಕಾರ್ಯಕರ್ತರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು CrPC ಯ ಸೆಕ್ಷನ್ 41A ಅಡಿಯಲ್ಲಿ ನೋಟಿಸ್ ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.