ಬೆಂಗಳೂರು: ರಾಜ್ಯದಲ್ಲಿ ಸರ್ಕಾರವು ವಿವಾಹ ನೋಂದಣಿಯನ್ನು ಮತ್ತಷ್ಟು ಸುಲಭಗೊಳಿಸಿದ್ದು, ಕಚೇರಿಯ ಅಲೆದಾಟಕ್ಕೆ ಬ್ರೇಕ್ ಹಾಕಿದೆ. ಆನ್‌ಲೈನ್ ಮೂಲಕವೇ ನೋಂದಣಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದೀಗ ಮನೆಯಲ್ಲಿಯೇ ಕುಳಿತು ವಿವಾಹ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಈಗ ಕುಳಿತಲ್ಲೇ ಆನ್‌ಲೈನ್ ಮೂಲಕ ಹೆಸರು ನೋಂದಣಿ ಮಾಡಬಹುದಾಗಿದೆ.


COMMERCIAL BREAK
SCROLL TO CONTINUE READING

ʼಮದುವೆಗಳು ನಿಶ್ಚಯವಾಗಲಿ ಸ್ವರ್ಗದಲ್ಲಿ, ನೋಂದಣಿಯಾಗಲಿ ಕಾವೇರಿ 2.0ರಲ್ಲಿʼ ನಿಮ್ಮ ಮನೆಯಲ್ಲೇ ನೆಮ್ಮದಿ ಗ್ಯಾರಂಟಿ ಎಂಬುದಾಗಿ ರಾಜ್ಯ ಸರ್ಕಾರ ಹೇಳಿದೆ. ಜೊತೆಗೆ ಕಾವೇರಿ 2.0 ತಂತ್ರಾಂಶದಲ್ಲಿ ಸುಲಭ, ಸರಳ, ಸುಲಲಿತವಾಗಿ ವಿವಾಹ ನೋಂದಣಿ ಮಾಡಿಕೊಳ್ಳಿ ಎಂದು ಸಹ ತಿಳಿಸಿದೆ. 


ಇದನ್ನೂ ಓದಿ: ಈ ನಿಯಮಗಳನ್ನು ಬದಲಾಯಿಸಿದ ಕೇಂದ್ರ ಸರ್ಕಾರ; ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನ!


ʼವಿವಾಹ ನೋಂದಣಿʼಗೆ ಹೆಸರು ನೋಂದಾಯಿಸುವುದು ಹೇಗೆ?


  • ಆನ್‌ಲೈನ್‌ನಲ್ಲೇ ವಿವಾಹ ನೋಂದಣಿಗೆ ಸರ್ಕಾರದ ಅಧಿಕೃತ ವೆಬ್‌ಸೈಟ್‌ https://kaveri.karnataka.gov.in ಗೆ ಭೇಟಿ ನೀಡಬೇಕು. ಬಳಿಕ ಬಳಕೆದಾರರ ಖಾತೆಯನ್ನು ತೆರೆಯಬೇಕು.

  • ಕಾವೇರಿ ಪೋರ್ಟಲ್‌ಗೆ ಲಾಗಿನ್ ಮಾಡಿ, ವಿವಾಹ ನೋಂದಣಿ ಸೇವೆ ಆಯ್ಕೆ ಮಾಡಿ ಮತ್ತು ನಿಮ್ಮ ಸ್ವ-ವಿವರವನ್ನು ನಮೂದಿಸಿ ಅರ್ಜಿ ಸಲ್ಲಿಸಬೇಕು.

  • ಗಂಡ-ಹೆಂಡತಿ ಮತ್ತು ಮೂವರು ಸಾಕ್ಷಿದಾರರ ಆಧಾರ್ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಿ

  • ನೋಂದಣಾಧಿಕಾರಿಯಿಂದ ಅರ್ಜಿ ಪರಿಶೀಲನೆಯಾಗಿ, ಆನ್‌ಲೈನ್ ಮೂಲಕ ಶುಲ್ಕ ಸಂದಾಯಕ್ಕೆ ಅವಕಾಶ ದೊರೆಯಲಿದೆ

  • ಕಾವೇರಿ ಪೋರ್ಟಲ್‌ನಲ್ಲಿ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ


ಇದನ್ನೂ ಓದಿ: Basic Salary Hike: ತುಟ್ಟಿಭತ್ಯೆ ಹೆಚ್ಚಳ ಆಯ್ತು, ಇದೀಗ ಮೂಲ ವೇತನ ಹೆಚ್ಚಳದ ಸರದಿ, ಯಾವಾಗ ಸಿಗಲಿದೆ ಗುಡ್ ನ್ಯೂಸ್?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.