ಬೆಂಗಳೂರು : ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಜಾತ್ಯತೀತ ಜನತಾದಳಕ್ಕೆ ಸಂಜೀವಿನಿಯಾಗಿ ಪರಿಣಮಿಸಿದೆ.  ಜೆಡಿಎಸ್ ಮೇಲೆ ಜನರ  ಒಲವಿನ ಅಲೆ ಅರಿತಿರುವ ದಳಪತಿಗಳು ಈಗ ಪಕ್ಷ ಸಂಘಟನೆಗೆ ಭಾರೀ ಒತ್ತು ನೀಡುತ್ತಿದ್ದಾರೆ. ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಪಕ್ಷ ಸಂಘಟನೆಗೆ 7 ವಲಯಗಳನ್ನು ಮಾಡಲಾಗಿದ್ದು, ಅದಕ್ಕೆ ವೀಕ್ಷಕರ ನೇಮಕವಾಗಿದೆ.  ವೀಕ್ಷಕರನ್ನು ನೇಮಕ ಮಾಡಿ ಅಧಿಕೃತ  ಆದೇಶ ಹೊರಡಿಸಲಾಗಿದೆ. ಜೆಡಿಎಸ್ ಕೋರ್ ಕಮಿಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 


COMMERCIAL BREAK
SCROLL TO CONTINUE READING

ಇದರಲ್ಲಿ ಗಮನಿಸಬೇಕಾದ ಇನ್ನೊಂದು ಬೆಳವಣಿಗೆಯೆಂದರೆ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡರನ್ನ (GT Devegowda)ವೀಕ್ಷಕರ ಪಟ್ಟಿಯಿಂದ ಜೆಡಿಎಸ್ (JDS) ಕೈ ಬಿಟ್ಟಿದೆ. 


ವೀಕ್ಷಕರ ನೇಮಕದ ವಿವರ ಹೀಗಿದೆ. 
ಕಲ್ಯಾಣ ಕರ್ನಾಟಕ
ಕಲ್ಯಾಣ  ಕರ್ನಾಟಕಕ್ಕೆ ಮೇಲುಸ್ತುವಾರಿ ಹೆಚ್ ಡಿ ಕುಮಾರಸ್ವಾಮಿಯಾಗಿದ್ದಾರೆ (H D Kumaraswamy).  ಉಳಿದ ವೀಕ್ಷಕರು ಬಂಡೆಪ್ಪ ಕಾಶಂಪೂರ್, ನಾಗನಗೌಡ ಕಂದಕೂರ್, ವೆಂಕಟ್ ರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಎನ್.ಎಂ ನಬಿ.


ಇದನ್ನೂ ಓದಿ : H.D.Kumaraswamy: ನನ್ನ ತಂಟೆಗೆ ಬಂದ್ರೆ ಹುಷಾರ್‌: ಬಿಎಸ್‌ವೈಗೆ ಖಡಕ್ ಎಚ್ಚರಿಕೆ ನೀಡಿದ ಹೆಚ್‌ಡಿಕೆ..!


ಬೆಳಗಾವಿ ವಿಭಾಗದ ವೀಕ್ಷಕರು
ಕುಮಾರಸ್ವಾಮಿ, ಬಸವರಾಜ್ ಹೊರಟ್ಟಿ (Basavaraj Horatti), ಭೀಮಪ್ಪ ಗಡಾದ, ಕೋನರೆಡ್ಡಿ, ಅಶೋಕ ನಿಂಗಯ್ಯ, ನಾಸೀರ್ ಭಗವಾನ್, ಆನಂದ್ ಆಸ್ನೋಟಿಕರ್, ದೇವಾನಂದ್ ಚೌಹಾಣ್, ಮಂಗಳಾದೇವಿ, ಮಲ್ಲಿಕಾರ್ಜುನ, ಹನುಮಂತಪ್ಪ ಮಾವಿನ ಮರದ.


ಮೈಸೂರು ವಿಭಾಗ
ಹೆಚ್ ಡಿ ರೇವಣ್ಣ(H DRevanna), ಸಾ.ರಾ ಮಹೇಶ್, ಪುಟ್ಟರಾಜು, ಅಶ್ವಿನಿ ಕುಮಾರ್, ನಿಖಿಲ್ ಕುಮಾರಸ್ವಾಮಿ(Nikhil Kumaraswamy), ಅನ್ನದಾನಿ, ಚಿಕ್ಕಣ್ಣ,ಜಫ್ರುಲ್ಲಾಖಾನ್, ಅಬ್ದುಲ್ ಅಜೀಜ್ ಅಬ್ದುಲ್ಲಾ. ಇವರುಗಳಿಗೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವ ಹೊಣೆಗಾರಿಕೆ ನೀಡಲಾಗಿದೆ. 


ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಕೊಡಗು
ಮಲೆನಾಡು ಅರೆ ಮಲೆನಾಡು ಮತ್ತು ಬಯಲು ಸೀಮೆಯ ಹೊಣೆಗಾರಿಕೆ ಶಿವಶಂಕರ್, ಪ್ರಜ್ವಲ್ ರೇವಣ್ಣ, ಶಾರದಾ ಪೂರ್ಯಾ ನಾಯಕ್, ವೈಎಸ್ ವಿ ದತ್ತಾ, ಯಶೋಧರ ಅವರದ್ದಾಗಿದೆ. 


ಇದನ್ನೂ ಓದಿ : DK Shivakumar: ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ ಡಿಕೆ ಶಿವಕುಮಾರ್..!


ಚಿಕ್ಕಬಳ್ಳಾಪುರ, ಕೋಲಾರ
ಈ ಎರಡು ಜಿಲ್ಲೆಗಳ ಜವಾಬ್ದಾರಿ ವೆಂಕಟಶಿವಾರೆಡ್ಡಿ, ಕೃಷ್ಟಾರೆಡ್ಡಿ, ಚೌಡರೆಡ್ಡಿ ತೂಪಲ್ಲಿ, ಕೆಪಿ ಬಚ್ಚೇಗೌಡ, ರವಿಕುಮಾರ್, ಗೋವಿಂದ್ ರಾಜು, ಸಮೃದ್ಧಿ ಮಂಜುನಾಥ್, ಕೆವಿ. ಅಮರನಾಥ್ ಅವರ ಮೇಲಿರುತ್ತದೆ. 


ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ
ಇನ್ನು ಶ್ರೀನಿವಾಸ್ ಮೂರ್ತಿ, ನಾರಾಯಣಸ್ವಾಮಿ, ಮಂಜುನಾಥ್, ವೀರಭದ್ರಯ್ಯ, ಸುರೇಶ್ ಬಾಬು, ತಿಮ್ಮರಾಯಪ್ಪ, ಗೌರಿ ಶಂಕರ್, ಚನ್ನರಾಜು ಇವರುಗಳಿಗೆ ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರದ ಹೊಣೆಗಾರಿಕೆ ವಹಿಸಲಾಗಿದೆ. 


ಬೆಂಗಳೂರು ನಗರ
ಬೆಂಗಳೂರು (Bengaluru) ನಗರಕ್ಕೆ ಕುಪ್ಪೇಂದ್ರ ರೆಡ್ಡಿ, ಮಂಜುನಾಥ್, ಶರವಣ, ಪ್ರಕಾಶ್, ವಿ ನಾರಾಯಣಸ್ವಾಮಿ, ರೂತ್ ಮನೋರಮಾ, ಜಫ್ರುಲ್ಲಾಖಾನ್, ಸಯ್ಯದ್ ಶಫೀವುಲ್ಲಾ ಖಾನ್ ವೀಕ್ಷಕರಾಗಿದ್ಧಾರೆ. 


ಇದನ್ನೂ ಓದಿ : H.D.Kumaraswamy: ಕುಮಾರಸ್ವಾಮಿಗೆ 'ಬಿಗ್ ಶಾಕ್' ನೀಡಿದ ಸುಪ್ರೀಂಕೋರ್ಟ್..!


ರಾಜ್ಯದಲ್ಲಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress)  ಪಕ್ಷಗಳಿಗೆ ಸರಿಸಮಾನವಾಗಿ ಮತ್ತೊಮ್ಮೆ ಪಕ್ಷ ಕಟ್ಟುವ ಜವಾಬ್ದಾರಿ ಈ ನಾಯಕರ ಹೆಗಲೇರಿದೆ. ಹಾಗಾಗಿ ಎರಡನೇ ಹಂತದ ನಾಯಕರನ್ನು ಮುನ್ನೆಲೆಗೆ ತಂದು ತಳಮಟ್ಟದಿಂದಲೇ ಪಕ್ಷಕಟ್ಟುವ ಯೋಜನೆ ಪಾರ್ಟಿಗಿದೆ. ವೀಕ್ಷಕರ ಸಮಿತಿಯಿಂದ ಹಲವು ನಾಯಕರನ್ನ ಕೋರ್ ಕಮಿಟಿ ಕೈ ಬಿಟ್ಟಿದೆ. ಈ ಮೂಲಕ ಪಕ್ಷದಿಂದ ದೂರವೇ ಉಳಿದ ನಾಯಕರಿಗೆ  ಜೆಡಿಎಸ್ ಶಾಕ್  ಕೊಟ್ಟಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.