ಬೆಂಗಳೂರು: ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ. ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ. ನನ್ನ ತಂಟೆಗೆ ಬಂದರೆ ಹುಷಾರ್.
ಹೀಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(B.S.Yediyurappa) ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಶುಲ್ಕ ಕಟ್ಟಲಾಗದೆ ಪರದಾಡುತ್ತಿರುವ ಪೋಷಕರಿಗೆ ಇಂದು ಸಿಹಿ ಸುದ್ದಿ ಸಿಗುವುದೇ?
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ , ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇರುವ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕೂಲ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಜೆಡಿಎಸ್ ಮುಗಿಸಲು ಯಡಿಯೂರಪ್ಪ ಇನ್ನೊಂದು ಜನ್ಮ ಹುಟ್ಟಿಬಂದರೂ ಆಗುವುದಿಲ್ಲ. ಈವರೆಗೆ ನನ್ನ ಪಕ್ಷದ ತಂಟೆಗೆ ಬಂದಿಲ್ಲ. ನನ್ನ ತಂಟೆಗೆ ಬಂದರೆ ಹುಷಾರ್. ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ ಎಂದು ಟೀಕಾಪ್ರಹಾರ ನಡೆಸಿದರು.
Corona Vaccination : ಹೃದಯಾಘಾತದಿಂದ ಇನ್ನೊಬ್ಬ ಆರೋಗ್ಯ ಕಾರ್ಯಕರ್ತ ಸಾವು
2008ರಲ್ಲಿಯೇ ಜೆಡಿಎಸ್ ಮುಗಿಸುತ್ತೇನೆ, ಅಪ್ಪ-ಮಗನನ್ನು ಮುಗಿಸುತ್ತೇನೆ ಎಂದು ಹೇಳಿದ್ದರು. ಬಳಿಕ ರಾಜಕಾರಣ ಏನಾಯಿತು ಗೊತ್ತಿದೆಯಾ? ಮೂವರು ಮುಖ್ಯಮಂತ್ರಿ ಬದಲಾದರು. ಜೆಡಿಎಸ್ ನಿರ್ನಾಮ ಮಾಡುತ್ತೇವೆ ಎಂದು ಹೇಳಿದವರು ಎಲ್ಲೆಲ್ಲೋ ಹೋಗಿದ್ದಾರೆ. ನನ್ನ ಪಕ್ಷದ ಲಘುವಾಗಿ ಮಾತನಾಡಬೇಡಿ. ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಮುಂದಿನ ಬಾರಿಯೂ ನಾವೇ ಎಂದು ಬೀಗುತ್ತಿದ್ದಾರೆ. ಈ ಹಿಂದೆ ಇದೇ ಯಡಿಯೂರಪ್ಪ 10 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದಿದ್ದರು. ಆಮೇಲೆ ಅವರು ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದರು.
DK Shivakumar: ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದ ಡಿಕೆ ಶಿವಕುಮಾರ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.