ಬೆಂಗಳೂರು: ಕಾಂಗ್ರೆಸ್ ನೇತೃತ್ವದ ಮೇಕೆದಾಟು ಪಾದಯಾತ್ರೆ ವಿರುದ್ಧ ಸಮರ ಸಾರಲು ಮುಂದಾಗಿರುವ ಬಿಜೆಪಿ ಸರ್ಕಾರ ಇಂದು 31 ಕಾಂಗ್ರೆಸ್ ನಾಯಕರ ವಿರುದ್ಧ ಎಫ್ಐಆರ್ (FIR) ದಾಖಲು ಮಾಡಿದೆ. ಕರೋನಾವೈರಸ್ ಅಟ್ಟಹಾಸದ ನಡುವೆ ಸರ್ಕಾರ ಜಾರಿಗೊಳಿಸಿದ್ದ ವೀಕೆಂಡ್ ಕರ್ಫ್ಯೂ ಲೆಕ್ಕಿಸದೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಈ ಕುರಿತಂತೆ ಕಾನೂನು ಕ್ರಮ ಜರುಗಿಸುವುದಾಗಿ  ಸರ್ಕಾರ ತಿಳಿಸಿತ್ತು. ಅದರಂತೆ ಕಾನೂನು ಕ್ರಮಕ್ಕೆ ಮುಂದಾಗಿರುವ ಸರ್ಕಾರ  ಎಪಿಡೆಮಿಕ್ ಆಕ್ಟ್ (Epidemic act) ಹಾಗೂ ಸೂಕ್ತ ಕಾನೂನು ಅಡಿಯಲ್ಲಿ ಕಾಂಗ್ರೆಸ್ ಗೆ ಬಿಸಿ ಮುಟ್ಟಿಸಲು ಸಜ್ಜಾಗಿದೆ. 


COMMERCIAL BREAK
SCROLL TO CONTINUE READING

ಕರೋನಾ (Coronavirus) ನಿಯಮಾವಳಿಗಳನ್ನು ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ (Mekedatu Padayatre) ಕೈಗೊಂಡಿರುವ ಕಾಂಗ್ರೆಸ್ ನಾಯಕರ ವಿರುದ್ಧ  ಎಫ್ಐಆರ್ (FIR) ದಾಖಲಿಸಲಾಗಿದೆ. ಈಗ ಎಫ್ ಐ ಆರ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ (A1) ಮೊದಲ ಆರೋಪಿಯನ್ನಾಗಿ ಮಾಡಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ (A2), ಸಂಸದ ಡಿ ಕೆ ಸುರೇಶ್ (A3) ಸೇರಿದಂತೆ 31 ನಾಯಕರ ವಿರುದ್ಧ ಎಫ್ಐಆರ್ (FIR)ದಾಖಲಿಸಲಾಗಿದೆ. 


ಇದನ್ನೂ ಓದಿ- DK Shivakumar : ಸಿಎಂ ಮತ್ತು ಸಚಿವ ಸುಧಾಕರ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ!


ಯಾವ ಸೆಕ್ಷನ್ ಹಾಕಲಾಗಿದೆ; ಶಿಕ್ಷೆ ಪ್ರಮಾಣ ಏನಿದೆ?
31 Bಕೈ ನಾಯಕರ ವಿರುದ್ಧ ಐಪಿಸಿ 141, 143, 290, 336 ಸಹ ಕಲಂ 149 ಹಾಕಿರುವ ಜತೆಗೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ (Karnataka Epidemics act) 2020 ಕಲಂ 5 (3a) ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರದ ಪರ ತಹಸೀಲ್ದಾರ್ ವಿಶ್ವನಾಥ್ ಕೋರಿದ್ದಾರೆ.


IPC 141: ಕ್ರಿಮಿನಲ್ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕಾನೂನು ಪ್ರಕಾರ ಯಾವುದೇ ವ್ಯಕ್ತಿಯನ್ನು ತನ್ನ ಕೆಲಸ ಮಾಡಲು ಬಿಡದೆಯಿರುವುದು.


IPC 143: ಶಿಕ್ಷೆ: ಕಾನೂನು ಬಾಹಿರವಾಗಿ ಸಭೆ ನಡೆಸಿದಕ್ಕೆ, ದಂಡ ಹಾಗೂ ಆರು ತಿಂಗಳ ವರೆಗಿನ ಸೆರೆವಾಸ.


IPC 290: ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವರ್ತನೆಗೆ ₹200 ವರೆಗೆ ದಂಡ ವಿಧಿಸಬಹುದು.


IPC 336: ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದವರಿಗೆ, ಮೂರು ತಿಂಗಳವರೆಗೆ ವಿಸ್ತರಿಸಬಹುದಾದ ಜೈಲುವಾಸ ಅಥವಾ ₹200 ಮತ್ತು ₹50 ದಂಡವನ್ನು ವಿಸ್ತರಿಸಬಹುದು ಅಥವಾ ಎರಡರ ಜೊತೆಗೆ ಶಿಕ್ಷೆ ನೀಡಬಹುದು.


ಕಲಂ 149: ಕಾನೂನು ಬಾಹಿರವಾಗಿ ಸಭೆಯಲ್ಲಿ ಪಾಲ್ಗೊಂಡ ಎಲ್ಲರೂ ಅಪರಾಧಿಗಳು 


ಇದನ್ನೂ ಓದಿ- CM Tested Positive For Covid-19: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊವಿಡ್ ಸೋಂಕು ದೃಢ


ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 5 (3A): ಸಾಂಕ್ರಾಮಿಕ ಪರಿಸ್ತಿಯಲ್ಲಿ ಯಾವುದೇ ವ್ಯಕ್ತಿ ಸರ್ಕಾರಿ ನೌಕರರ ವಿರುದ್ಧ ಹಾಗೂ ಸಾರ್ವಜನಿಕ -ಖಾಸಗಿ ಆಸ್ತಿಗಳಿಗೆ ಹಾನಿ ಮಾಡಬಾರದು.


ಇವೆಲ್ಲಾ ಆರೋಪಗಳನ್ನ ಸರ್ಕಾರದ ಪರವಾಗಿ ಮಾಡಲಾಗಿದೆ, ಇದು ನ್ಯಾಯಾಲಯದ ಮುಂದೆ ಬಂದ ನಂತರ ಆರೋಪ ಸಾಬೀತಾಗಬೇಕಿದೆ. ಸಾಬೀತಾದ ನಂತರ ಆರೋಪಿಗಳನ್ನ ಅಪರಾಧಿ ಎಂದು ಪರಿಗಣಿಸಿ ಶಿಕ್ಷೆಯ ಪ್ರಮಾಣ ಹೇಳಲಾಗುತ್ತದೆ. ಒಂದು ವೇಳೆ ಅಪರಾಧಿ ಎಂದು ಸಾಬೀತು ಮಾಡಲಾಗದ ಸಂದರ್ಭದಲ್ಲಿ ಎಲ್ಲ ಆರೋಪಿಗಳು ನಿರ್ದೋಷಿಗಳೆಂದೇ ಪರಿಗಣಿಸಲಾಗುವುದು.


ಒಟ್ಟಿನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕಾಂಗ್ರೆಸ್ ಪಾದಯಾತ್ರೆಗೆ ತಕ್ಕ ಉತ್ತರ ಕೊಡಬೇಕು ಎಂದು ತೀರ್ಮಾನ ಮಾಡುವ ಜೊತೆಗೆ, ಕಾಂಗ್ರೆಸ್ ಪಡೆಯುತ್ತಿರುವ ಪ್ರಚಾರಕ್ಕೆ ಬ್ರೇಕ್ ಹಾಕಲು ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.