CM Tested Positive For Covid-19: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊವಿಡ್ ಸೋಂಕು ದೃಢ

CM Basavaraj Bommai Tested Positive For Covid-19 - ರಾಜ್ಯ ಮುಖ್ಯಮಂತ್ರಿ (Karnataka CM) ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಕೊರೊನಾ (Covid-19) ಸೋಂಕು ತಗುಲಿದೆ. ಈ ಕುರಿತು ಖುದ್ದು ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿದ್ದು, ತಮಗೆ ಕೊವಿಡ್ ಸೊಂಕು ದೃಢಪಟ್ಟಿದೆ ಮತ್ತು ವೈರಸ್ ನ ಲಘು ಲಕ್ಷಣಗಳಿವೆ ಎಂದು ಹೇಳಿದ್ದಾರೆ. 

Edited by - Nitin Tabib | Last Updated : Jan 10, 2022, 09:01 PM IST
  • ಸಿಎಂ ಬಸವರಾಜ್ ಬೊಮ್ಮಾಯಿಗೆ ಕೋರೋನಾ ಸೋಂಕು ದೃಢ.
  • ಹೋಮ್ ಕ್ವಾರಂಟೈನ್ ಗೆ ಒಳಗಾದ ಮುಖ್ಯಮಂತ್ರಿಗಳು.
  • ಸಂಪರ್ಕಕ್ಕೆ ಬದವರಲ್ಲರಿಗೂ ಟೆಸ್ಟ್ ಮಾಡಿಸಿ ಕೊಳ್ಳುವಂತೆ ಮನವಿ ಮಾಡಿದ ಬೊಮ್ಮಾಯಿ
CM Tested Positive For Covid-19: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕೊವಿಡ್ ಸೋಂಕು ದೃಢ title=
CM Tested Positive For Covid-19 (File Photo)

ಬೆಂಗಳೂರು: CM Basavaraj Bommai Tested Positive For Covid-19 - ರಾಜ್ಯ ಮುಖ್ಯಮಂತ್ರಿ (Karnataka CM) ಬಸವರಾಜ್ ಬೊಮ್ಮಾಯಿ (Basavaraj Bommai) ಅವರಿಗೆ ಕೊರೊನಾ (Covid-19) ಸೋಂಕು ತಗುಲಿದೆ. ಈ ಕುರಿತು ಖುದ್ದು ಮುಖ್ಯಮಂತ್ರಿಗಳೇ ಟ್ವೀಟ್ ಮಾಡಿದ್ದು, ತಮಗೆ ಕೊವಿಡ್ ಸೊಂಕು ದೃಢಪಟ್ಟಿದೆ ಮತ್ತು ವೈರಸ್ ನ ಲಘು ಲಕ್ಷಣಗಳಿವೆ ಎಂದು ಹೇಳಿದ್ದಾರೆ. 

ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ (CM Basavaraj Bommai Twitter) ಮೂಲಕ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು ಪ್ರಸ್ತುತ ನಾನು ಹೋಮ್ ಕ್ವಾರಂಟೈನ್ (Home Quarantine) ನಲ್ಲಿದ್ದು, ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ. 

ಇನ್ನೊಂದೆಡೆ ತಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಕೂಡ ದಯವಿಟ್ಟು ಕೊವಿಡ್ ಪರೀಕ್ಷೆಗೆ ಒಳಗಾಗಿ ಎಂದು ಸಿಎಂ ಬೊಮ್ಮಾಯಿ ವನಂತಿ ಮಾಡಿದ್ದಾರೆ. ಸಿಎಂ ಅವರಿಗೆ ಕೊವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಅವರ ಎಲ್ಲಾ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.

ಇದನ್ನೂ ಓದಿ-DK Shivakumar : ಸಿಎಂ ಮತ್ತು ಸಚಿವ ಸುಧಾಕರ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ!

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ಭಾಗಿಯಾದ ಕಾರ್ಯಕ್ರಮಗಳ ಕುರಿತು ಹೇಳುವುದಾದರೆ. ಇಂದು ಮುಖ್ಯಮಂತ್ರಿಗಳು ರಾಜ್ಯದ ಆಡಳಿತ ಸುಧಾರಣೆಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಿದ್ದರು, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಜೊತೆಗೆ ರಾಜ್ಯ ಆರೋಗ್ಯ ಸಚಿವ ಕೆ. ಸುಧಾಕರ್ ಹಾಗೂ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಉಪಸ್ಥಿತರಿದ್ದರು. ಇದಲ್ಲದೆ ಮುಖ್ಯಮಂತ್ರಿಗಳು ಖ್ಯಾತ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಅವರ ಅಂತ್ಯಕ್ರಿಯೇಯಲ್ಲಿಯೂ ಕೂಡ ಭಾಗವಹಿಸಿದ್ದರು. ದಿನದ ಆರಂಭದಲ್ಲಿ ಬೆಂಗಳೂರಿನ ಶಿವಾಜಿ ನಗರದಲ್ಲಿ ಕೊರೊನಾ ಪ್ರಿಕಾಶನ್ ಡೋಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಅವರು ಬಳಿಕ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಎರಡು ನಿಯೋಗಗಳನ್ನು ಭೇಟಿಯಾಗಿದ್ದರು.

ಇದನ್ನೂ ಓದಿ-ವೀಕೆಂಡ್ ಕರ್ಫ್ಯೂ ಎಫೆಕ್ಟ್ :  BMTC ಗೆ ₹6 ಕೋಟಿ, KSRTC ಗೆ 10 ಕೋಟಿ ಆದಾಯ ನಷ್ಟ! 

ರಾಜ್ಯದಲ್ಲಿ 11 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ಇನ್ನೊಂದೆಡೆ ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಟ್ಟು 11 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ಒಂದರಲ್ಲೇ 9 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. 

ಇದನ್ನೂ ಓದಿ-ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗೆ ಕೊರೊನಾ ದೃಢ, ಕಟೀಲ್ ಎರಡನೇ ಬಾರಿಗೆ ಕೊವಿಡ್ ಪಾಸಿಟಿವ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News