ಮೇಕೆದಾಟು ಪಾದಯಾತ್ರೆ: ತಲೆ ಮೇಲೆ ಕಲ್ಲು ಹೊತ್ತು ವಿನೂತನ ಪ್ರತಿಭಟನೆ
ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ 2.0 ಈಗ ಚಾಲನೆ ಸಿಕ್ಕಿರುವ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಿಂದ ಈ ಯಾತ್ರೆಯಲ್ಲಿ ಜನರು ಪಾಲ್ಗೊಂಡಿದ್ದಾರೆ.
ರಾಮನಗರ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ 2.0 ಗೆ ಈಗ ಚಾಲನೆ ಸಿಕ್ಕಿರುವ ಬೆನ್ನಲ್ಲೇ ರಾಜ್ಯದ ಹಲವು ಭಾಗಗಳಿಂದ ಈ ಯಾತ್ರೆಯಲ್ಲಿ ಜನರು ಪಾಲ್ಗೊಂಡಿದ್ದಾರೆ.
ಇಂತಹ ಸಂದರ್ಭದಲ್ಲಿ ದೂರದ ವಿಜಯಪುರ ಜಿಲ್ಲೆಯಿಂದ ಆಗಮಿಸಿದ್ದ ಅಕ್ಷಯ್ ಎನ್ನುವ ಯುವಕ ತಲೆಯ ಮೇಲೆ ಕಲ್ಲನ್ನು ಹೊತ್ತು ಪಾದಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು, ಇದೆ ವೇಳೆ ಜೀ ಕನ್ನಡ ನ್ಯೂಸ್ ಜೊತೆ ಮಾತನಾಡಿದ ಅವರು, ತಮ್ಮ ತಲೆ ಮೇಲೆ ಸರ್ಕಾರ ಭಾರವನ್ನು ಹೊರೆಸಿದೆ, ಆದ್ದರಿಂದ ಈ ಭಾರವನ್ನು ತಲೆಯಿಂದ ಇಳಿಸಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: Operation Ganga: ಯುದ್ಧಪೀಡಿತ ಉಕ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ 12 ಜನ ವಿದ್ಯಾರ್ಥಿಗಳು
ಇದೇ ವೇಳೆ ಅವರು ಈ ಹಿಂದಿನ ಮೇಕೆದಾಟು ಯಾತ್ರೆ (Mekedatu Padayatre) ಯಲ್ಲಿಯೂ ಕೂಡ ಭಾಗವಹಿಸಿರುವುದಾಗಿ ಹೇಳಿದರು. "ಇದಕ್ಕೂ ಮೊದಲು ನಾಲ್ಕು ದಿನ ದೀರ್ಘ ದಂಡ ನಮಸ್ಕಾರ, ಅರೆಬೆತ್ತಲೆ ಕಾರ್ಯಕ್ರಮ ಮಾಡಿದ್ದೇನೆ, ಎರಡನೇ ಹಂತದ ಪಾದಯಾತ್ರೆಯಲ್ಲಿ ವಿಶೇಷವಾಗಿ ಇರಲಿ ಎಂದು ಈ ಕಲ್ಲನ್ನು ಹೊತ್ತಿದ್ದೇನೆ, ಈ ಪಾದಯಾತ್ರೆಯನ್ನು ಕಲ್ಲು ಹೊತ್ತುಕೊಂಡೇ ಪೂರ್ಣಗೊಳಿಸುತ್ತೇನೆ.ಈ ಪಾದಯಾತ್ರೆಯಿಂದ ನಮ್ಮ ರೈತರಿಗೆ ಒಳ್ಳೆಯದಾಗಬೇಕು ಎನ್ನುವುದು ನನ್ನ ಬಯಕೆಯಾಗಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಪ್ರಯಾಣಿಕರ ಪರದಾಟ, ಅವಾಚ್ಯ ಶಬ್ದ ಬಳಸಿ ಸಾರ್ವಜನಿಕರ ಆಕ್ರೋಶ
ದಕ್ಷಿಣವಾಗಲಿ ಉತ್ತರವಾಗಲಿ ಎಲ್ಲಾ ರೈತರು ಒಂದೇ ಎಂದು ನಾನು ಭಾವಿಸುತ್ತೇನೆ, ರೈತರು ಇಲ್ಲವೆಂದರೆ ನಾವಿಲ್ಲ, ಆದ್ದರಿಂದ ಬೇರೆ ರಾಜ್ಯದಲ್ಲಿಯೂ ಕೂಡ ನಾನು ರೈತರಿಗೊಸ್ಕರ ಹೋರಾಟ ಮಾಡುತ್ತೇನೆ.ಈ ಹಿಂದೆ ನಾವು ಸಂಘಟನೆ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಹೋರಾಟ ಮಾಡಿದ್ದೆವು" ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.