ಮೇಲುಕೋಟೆಯ ಕಲ್ಯಾಣಿಯಲ್ಲಿ ವಿಜೃಂಭಣೆಯಿಂದ ಜರುಗಿದ ಚೆಲುವನಾರಾಯಣ ತೆಪ್ಪೋತ್ಸವ
ಮುತ್ತುಮುಡಿಯಲ್ಲಿ ಕಂಗೋಳಿಸುತ್ತಿದ್ದ ಚೆಲುವನಾರಾಯಣನನ್ನು ಕಂಡು ಕಣ್ತುಂಬಿಕೊಂಡ ಭಕ್ತ ಸಮೂಹ.
ಮಂಡ್ಯ: ವಿಶ್ವ ಪ್ರಸಿದ್ಧ ವೈರಮುಡಿ ಉತ್ಸವದ ಅಂಗವಾಗಿ ಮಂಡ್ಯದ ಮೇಲುಕೋಟೆಯ ಕಲ್ಯಾಣಿಯಲ್ಲಿ ಚೆಲುವನಾರಾಯಣ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯಿತು.
ವಿಶ್ವಪ್ರಸಿದ್ದ ವೈರಮುಡಿ ಉತ್ಸವದ ಅಂಗವಾಗಿ ರಾತ್ರಿ ಕಲ್ಯಾಣಿಗೆ ವಿಶೇಷ ದೀಪಾಂಲಕಾರ ಮಾಡಲಾಗಿತ್ತು. ತೆಪ್ಪೋತ್ಸವದಲ್ಲಿ ಮೇಲುಕೋಟೆ ಚೆಲುವನಾರಾಯಣನನ್ನು (Melkote Cheluvanarayana) ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು.
ಇದನ್ನೂ ಓದಿ- Shiva Temple Video: ಇಪ್ಪತ್ತು ದಿನದಲ್ಲಿ ಸಿದ್ದವಾಯ್ತು ಶಿವನ ವಿಶೇಷ ದೇವಾಲಯ
ವಿಶ್ವ ಪ್ರಸಿದ್ದ ವೈರಮುಡಿಯ ಉತ್ಸವದ (Vairamudi Utsava) ಅಂಗವಾಗಿ ನೆನ್ನೆ ರಾತ್ರಿ ನಡೆದ ತೆಪ್ಪೋತ್ಸವದಲ್ಲಿ ಮುತ್ತುಮುಡಿಯಲ್ಲಿ ಕಂಗೋಳಿಸುತ್ತಿದ್ದ ಚೆಲುವನಾರಾಯಣನನ್ನು ಅಲ್ಲಿ ನೆರೆದಿದ್ದ ಭಕ್ತ ಸಮೂಹ ಕಣ್ತುಂಬಿಕೊಂಡರು. Video: ಹಾಲು ಕುಡಿಯುವ ಕಲ್ಲಿನ ಬಸವ, ರಾತ್ರೋ ರಾತ್ರಿ ಬಸವಣ್ಣನ ಗುಡಿಗೆ ಲಗ್ಗೆಯಿಟ್ಟ ಭಕ್ತರು
ವೈರಮುಡಿ ಬ್ರಹ್ಮೋತ್ಸವ ಸಾಂಪ್ರದಾಯಿಕವಾಗಿ ಮೇಲುಕೋಟೆಯ ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಕಾರ್ಯಕ್ರಮದ ನಾಲ್ಕನೇ ದಿನ ಶ್ರೀ ಚೆಲುವನಾರಾಯಣ ಸ್ವಾಮಿಗೆ ವೈರಮುಡಿ ಕಿರೀಟ ಪಟ್ಟಾಭಿಷೇಕ ನಡೆಯುತ್ತದೆ. ವೈರಮುಡಿಯ ಮೆರವಣಿಗೆಯಲ್ಲಿ ಶ್ರೀ ಚೆಲುವನಾರಾಯಣನ ಸೊಬಗು ನೋಡಲೇಬೇಕಾದ ದೃಶ್ಯ. ದೇಶದ ಮೂಳೆ ಮೂಲೆಗಳಿಂದ ಈ ವೈಭವವನ್ನು ವೀಕ್ಷಿಸಲು ಜನರು ಇಲ್ಲಿಗೆ ಬರುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.