ಹುಂಜದ ಹುಟ್ಟು ಹಬ್ಬ ಆಚರಿಸಿದ ಮಾಲೀಕ.. ವಿಡಿಯೋ ವೈರಲ್

ಇಲ್ಲೊಬ್ಬರು ವಿಚಿತ್ರದಲ್ಲಿ ವಿಚಿತ್ರ ಎಂಬಂತೆ ಹುಂಜದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಈ ಹುಂಜದ ಹುಟ್ಟು ಹಬ್ಬ ಆಚರಿಸಲಾಗಿದೆ. 

Written by - Zee Kannada News Desk | Last Updated : Mar 4, 2022, 05:55 PM IST
  • ಹುಂಜದ ಹುಟ್ಟು ಹಬ್ಬ ಆಚರಿಸಿದ ಮಾಲೀಕ
  • ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಆಚರಣೆ
  • ಹುಟ್ಟು ಹಬ್ಬ ಆಚರಿಸುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
ಹುಂಜದ ಹುಟ್ಟು ಹಬ್ಬ ಆಚರಿಸಿದ ಮಾಲೀಕ.. ವಿಡಿಯೋ ವೈರಲ್  title=
ಹುಂಜದ ಹುಟ್ಟು ಹಬ್ಬ

ಯಾದಗಿರಿ: ಹುಟ್ಟು ಹಬ್ಬ ಅಂದ್ರೆ ಅಲ್ಲೊಂದು ಸಂಭ್ರಮ, ಸಂತಸ ಇರುತ್ತದೆ. ಜನ ಸಾಮಾನ್ಯವಾಗಿ ತಮ್ಮವರ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುವುದುಂಟು. ತಮ್ಮ ಮಕ್ಕಳ, ಮನೆಯವರ ಜನ್ಮದಿನ ಆಚರಿಸುತ್ತಾರೆ. ಇನ್ನೂ ಕೆಲವರು ಪ್ರಾಣಿಗಳ ಬರ್ತ್ ಡೇ ಅನ್ನು ಆಚರಿಸುತ್ತಾರೆ. ಆದರೆ ಇಲ್ಲೊಬ್ಬರು ವಿಚಿತ್ರವಾದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದೇ ಹುಂಜದ ಬರ್ತ್ ಡೇ.. 

ಇದನ್ನೂ ಓದಿ: WATCH: ತನ್ನ ಸ್ನೇಹಿತನಿಗೆ ನಾಯಿಗಳು ಗುಡ್ ಬೈ ಹೇಳಿದ್ದೇಗೆ ಗೊತ್ತೇ?
 
ಹೌದು, ಇಲ್ಲೊಬ್ಬರು ವಿಚಿತ್ರದಲ್ಲಿ ವಿಚಿತ್ರ ಎಂಬಂತೆ ಹುಂಜದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಈ ಹುಂಜದ ಹುಟ್ಟು ಹಬ್ಬ ಆಚರಿಸಲಾಗಿದೆ. 

ಅಚ್ಚುಮೆಚ್ಚಿ‌ನ ಹುಂಜಕ್ಕೆ ಕೊರಳಲ್ಲಿ ಮಾಲೆ ಹಾಕಿ, ಮೈಮೇಲೆ ಬಟ್ಟೆ ಹೊದಿಸಿ ಸಿಂಗರಿಸಲಾಗಿದೆ. ಬಳಿಕ ಅದರ ಮುಂದೆ ಕೇಕ್, ಕ್ಯಾಂಡಲ್ (Birthday Candle) ಇಟ್ಟು ಜನ್ಮದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದೆ. 

ನಾಯಿ, ಬೆಕ್ಕಿನ‌ ಹುಟ್ಟು ಹಬ್ಬ ಆಚರಿಸುವುದನ್ನು ನೋಡಿದ ಜನ ಈಗ ಹುಂಜದ ಜನ್ಮದಿನ ಆಚರಿಸುವುದನ್ನು ನೋಡಿ ನಿಬ್ಬೆರಗಾಗಿದ್ದಾರೆ. ಅಲ್ಲದೆ ಹಿಂಜದ ಹುಟ್ಟು ಹಬ್ಬ ಆಚರಿಸುವ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ (Viral Video) ಆಗಿದೆ. 

ಇದನ್ನೂ ಓದಿ: ಬಲಾದಿ ಭವಿಷ್ಯವಾಣಿ: "ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು"- ಗೂಢಾರ್ಥದ ವಾಣಿ ನುಡಿದ ಸ್ವಾಮೀಜಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ  ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News