ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಮಿನಿ ವಿಧಾನಸೌಧ(Mini Vidhan Soudha) ಗಳಿಗೆ ‘ತಾಲೂಕು ಆಡಳಿತ ಸೌಧ’ವೆಂದು ರಾಜ್ಯ ಸರ್ಕಾರ(Karnataka Government) ಮರುನಾಮಕರಣ ಮಾಡಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಜಯಲಕ್ಷ್ಮೀ ಅವರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ. ತಾಲೂಕು ಆಡಳಿತ ಕಚೇರಿಗಳನ್ನು ರಾಜ್ಯದ ಭಾಷಾನೀತಿಗೆ ಒಳಪಡುವಂತೆ ಹಾಗೂ ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿರುವುದರಿಂದ ನಾಡು-ನುಡಿ ಸಂಸ್ಕೃತಿಗೆ ಪೂರಕವಾಗಿ ‘ಮಿನಿ ವಿಧಾನಸೌಧ’ಗಳ ಹೆಸರನ್ನು ಬದಲಾಯಿಸಿ ‘ತಾಲೂಕು ಆಡಳಿತ ಸೌಧ’ವೆಂದು ಮರುನಾಮಕರಣ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಕಲಿ ಗಾಂಧಿಗಳ ಪಾದ ಪೂಜೆ ಮಾಡುತ್ತಿರುವುದ್ಯಾರು?: ಡಿಕೆಶಿಗೆ ಬಿಜೆಪಿ ಟಾಂಗ್


ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಸ್ಫೂರ್ತಿಯಿಂದ ತಾಲೂಕು ಆಡಳಿತ ಕೇಂದ್ರಗಳಿಗೆ ಮಿನಿ ವಿಧಾನಸೌಧವೆಂದು ಈ ಹಿಂದೆ ಹೆಸರಿಡಲಾಗಿತ್ತು. ಆದರೆ ಇಂಗ್ಲಿಷಿನಲ್ಲಿ ‘ಮಿನಿ’ ಎಂದರೆ ಚಿಕ್ಕದು ಎಂದರ್ಥ. ತಾಲೂಕು ಆಡಳಿತ ವಿಸ್ತಾರವಾಗಿರುವುದರಿಂದ ‘ಮಿನಿ’ ಎಂಬ ಇಂಗ್ಲಿಷ್ ಪದವಿರುವುದು ಸರಿಯಲ್ಲವೆಂಬ ಅಭಿಪ್ರಾಯಪಟ್ಟಿದ್ದ ಕಂದಾಯ ಸಚಿವ ಆರ್.ಅಶೋಕ್(R.Ashok) ಹೆಸರು ಬದಲಾಯಿಸುವುದಾಗಿ ಹೇಳಿದ್ದರು.


2023ರ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿದ್ದರಾಮಯ್ಯ


ಮಿನಿ ವಿಧಾನಸೌಧಗಳ ಹೆಸರು ಬದಲಾವಣೆ ಪ್ರಸ್ತಾವನೆ ಹಿನ್ನೆಲೆ ಕಂದಾಯ ಸಚಿವ ಆರ್.ಅಶೋಕ್​​ಗೆ ನಂಜನಗೂಡು ಕ್ಷೇತ್ರದ ಬಿಜೆಪಿ ಶಾಸಕ ಹರ್ಷವರ್ಧನ್ ಪತ್ರ ಬರೆದು ಮಿನಿ ವಿಧಾನಸೌಧಗಳಿಗೆ ‘ಡಾ.ಬಿ.ಆರ್.ಅಂಬೇಡ್ಕರ್ ತಾಲೂಕು ಆಡಳಿತ ಕಚೇರಿ’ ಎಂದು ಹೆಸರಿಡಲು ಮನವಿ ಮಾಡಿದ್ದರು.


ಹೆಸರು ಬದಲಿಸಿ ಸಾಧನೆ ತೋರಿಸಲು ಹೊರಟಿರುವುದು ಹಾಸ್ಯಾಸ್ಪದ


ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಮಿನಿ ವಿಧಾನಸೌಧಗಳಿಗೆ ಮರುನಾಮಕರಣ ಮಾಡಲು ತೆಗೆದುಕೊಂಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಗಳಿಗೆ ಹೆಸರು ಬದಲಿಸಿ ಅನುದಾನ ಕಡಿತಗೊಳಿಸಿದವರು ಈಗ ಮಿನಿ ವಿಧಾನಸೌಧಗಳಿಗೆ ‘ತಾಲೂಕು ಆಡಳಿತ ಸೌಧ’ವೆಂದು ಮರುನಾಮಕರಣ ಮಾಡಿ ‘ನಾಮ್ ಬದಲೋ ಸರ್ಕಾರ್’ ಎಂಬ ಉತ್ತರ ಪ್ರದೇಶ ಮಾದರಿಯಲ್ಲಿ ಸಾಗಿದೆ. ತಾಲೂಕು ಅಡಳಿತಗಳಿಗೆ ಅನುದಾನ ನೀಡದೆ ಕೇವಲ ಹೆಸರು ಬದಲಿಸಿ ಸಾಧನೆ ತೋರಿಸಲು ಹೊರಟಿರುವುದು ಹಾಸ್ಯಾಸ್ಪದ’ ಎಂದು ಕುಟುಕಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.