ಬೆಂಗಳೂರು: ‘ನಮಗೆ ವ್ಯಕ್ತಿ ಪೂಜೆ ಬೇಡ, ಪಕ್ಷದ ಪೂಜೆ ಬೇಕು, ವ್ಯಕ್ತಿ ಪೂಜೆ ಮಾಡುವುದಾದರೆ ಎದ್ದು ಹೋಗಿ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakuamr) ಹೇಳಿಕೆಗೆ ಬಿಜೆಪಿ ಟಾಂಗ್ ನೀಡಿದೆ. ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ‘ನೀವು ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದ್ದು? ಎಂದು ಪ್ರಶ್ನಿಸಿದೆ.
‘ಡಿ.ಕೆ.ಶಿವಕುಮಾರ್(DK Shivakuamr) ಅವರೇ ವ್ಯಕ್ತಿ ಪೂಜೆ ಮಾಡುತ್ತಿರುವುದ್ಯಾರು?, ಪಕ್ಷದ ಪೂಜೆ ಮಾಡುತ್ತಿರುವುದ್ಯಾರು?, ಪದಾಧಿಕಾರಿಗಳ ಪಟ್ಟಿಗೆ ತಡೆ ಒಡ್ಡುತ್ತಿರುವುದ್ಯಾರು?, ಮುಂದಿನ ಸಿಎಂ ಕೂಗು ಎಬ್ಬಿಸುತ್ತಿರುವುದ್ಯಾರು? ಹಾಗೂ ನಕಲಿ ಗಾಂಧಿಗಳ ಪಾದ ಪೂಜೆ ಮಾಡುತ್ತಿರುವುದ್ಯಾರು?’ ಎಂದು ಬಿಜೆಪಿ(Karnataka BJP) ಪ್ರಶ್ನಿಸಿದೆ.
ಮಾನ್ಯ @DKShivakumar ಅವರೇ,
√ ವ್ಯಕ್ತಿ ಪೂಜೆ ಮಾಡುತ್ತಿರುವುದ್ಯಾರು?
√ ಪಕ್ಷ ಪೂಜೆ ಮಾಡುತ್ತಿರುವುದ್ಯಾರು?
√ ಪದಾಧಿಕಾರಿಗಳ ಪಟ್ಟಿಗೆ ತಡೆ ಒಡ್ಡುತ್ತಿರುದ್ಯಾರು?
√ ಮುಂದಿನ ಸಿಎಂ ಕೂಗು ಎಬ್ಬಿಸುತ್ತಿರುವುದ್ಯಾರು?
√ ನಕಲಿ ಗಾಂಧಿಗಳ ಪಾದ ಪೂಜೆ ಮಾಡುತ್ತಿರುವುದ್ಯಾರು?— BJP Karnataka (@BJP4Karnataka) November 15, 2021
ಇದನ್ನೂ ಓದಿ: ಚಾಮುಂಡಿ ಬೆಟ್ಟ ಉಳಿಸಿ ಸಹಿ ‘ಆಂದೋಲನ’ಕ್ಕೆ ಕೈಜೋಡಿಸಿ: ಯದುವೀರ್ ಮನವಿ
‘ನಮಗೆ ವ್ಯಕ್ತಿ ಪೂಜೆ ಬೇಡ, ಪಕ್ಷದ ಪೂಜೆ ಬೇಕು ಎಂದು ನೀವು ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದ್ದು? ನಿಮ್ಮ ಪಕ್ಷದಲ್ಲಿ ಈಗ ನಡೆಯುತ್ತಿರುವುದು #ನಕಲಿಗಾಂಧಿಗಳ ಪೂಜೆಯಲ್ಲವೇ? ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah)ನವರೇ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕು ಎಂಬರ್ಥದಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನು ಸಹಿಸಲಾಗದೆ, ತಾಳ್ಮೆಯ ಕಟ್ಟೆಯೊಡೆದು ಈ ಮಾತು ಹೇಳುತ್ತಿದ್ದೀರಾ?’ ಎಂದು ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.
ಟಿಪ್ಪು ಎನ್ನುವುದೇ ನಿಮ್ಮ ಸಿದ್ಧಾಂತವಲ್ಲವೇ?
ಮಾನ್ಯ ಸಿದ್ದರಾಮಯ್ಯನವರೇ,
ಪ್ರಧಾನಿಯ ಸೈದ್ಧಾಂತಿಕ ಹಿನ್ನೆಲೆಯನ್ನು ನೀವು ಪ್ರಶ್ನೆ ಮಾಡಿದ್ದೀರಿ. ಹಾಗಾದರೆ ನಿಮ್ಮ ಸಿದ್ಧಾಂತ ಯಾವುದು?
ಜೆಡಿಎಸ್ ಪಕ್ಷದಲ್ಲಿದ್ದಾಗ ದೇವೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸೋನಿಯಾ ಗಾಂಧಿ, ಮತರಾಜಕಾರಣಕ್ಜೆ ಟಿಪ್ಪು ಎನ್ನುವುದೇ ನಿಮ್ಮ ಸಿದ್ಧಾಂತವಲ್ಲವೇ?#ಬುರುಡೆರಾಮಯ್ಯ
— BJP Karnataka (@BJP4Karnataka) November 15, 2021
#ಬುರುಡೆರಾಮಯ್ಯ ಹ್ಯಾಶ್ ಟ್ಯಾಗ್ ಬಳಸಿ ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ಕಿಡಿಕಾರಿದೆ. ‘ಸಿದ್ದರಾಮಯ್ಯನವರೇ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಸೈದ್ಧಾಂತಿಕ ಹಿನ್ನೆಲೆಯನ್ನು ನೀವು ಪ್ರಶ್ನೆ ಮಾಡಿದ್ದೀರಿ. ಹಾಗಾದರೆ ನಿಮ್ಮ ಸಿದ್ಧಾಂತ ಯಾವುದು? ಜೆಡಿಎಸ್ ಪಕ್ಷದಲ್ಲಿದ್ದಾಗ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಸೋನಿಯಾ ಗಾಂಧಿ, ಮತರಾಜಕಾರಣಕ್ಜೆ ಟಿಪ್ಪು ಎನ್ನುವುದೇ ನಿಮ್ಮ ಸಿದ್ಧಾಂತವಲ್ಲವೇ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: Bitcoin scam: ನಲಪಾಡ್ ಹೆಸರು ಪ್ರಸ್ತಾಪಿಸಿ 'ಕಾಂಗ್ರೆಸ್ ಫೇಕ್ ನ್ಯೂಸ್ ಫ್ಯಾಕ್ಟರಿ' ಎಂದ ಬಿಜೆಪಿ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.