ಚಾಮರಾಜನಗರ : ಒಂದು ತಿಂಗಳ ಕಾಲ ಚಾಮರಾಜನಗರದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿ‌ ಡಿಸಿ, ಭೂ ವಿಜ್ಞಾನಿಗಳ‌ ತಂಡ ತಪಾಸಣೆ ಮಾಡಿದ ಬಳಿಕವಷ್ಟೇ ಕ್ವಾರಿ ನಡೆಸಲು ಅವಕಾಶ ಎಂದು ಗುಡುಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಎಚ್ಚರಿಕೆ ಸುದ್ದಿಗೋಷ್ಠಿಗಷ್ಟೇ ಸೀಮಿತವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ.‌


COMMERCIAL BREAK
SCROLL TO CONTINUE READING

ಹೌದು‌.. ಚಾಮರಾಜನಗರ(Chamarajanagar)ದ ಮಹಮ್ಮದ್ ಅಲಿ ಎಂಬವರು ವಿಡಿಯೋವೊಂದನ್ನು ಮಾಡಿ ಜೀ ಕನ್ನಡ ನ್ಯೂಸ್ ಗೆ ಕೊಟ್ಟಿದ್ದು, ಚಾಮರಾಜನಗರ ತಾಲೂಕಿನ ಮಸಗಾಪುರ ಗ್ರಾಮದಲ್ಲಿ ಮೈಸೂರು ಮಿನರಲ್ಸ್ ಲಿಮಿಟೆಡ್ ಗುತ್ತಿಗೆ ಪಡೆದಿರುವ ಅಕ್ಕಪಕ್ಕದಲ್ಲೇ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಮಹಮ್ಮದ್ ಅಲಿ ಗಂಭೀರ ಆರೋಪ ಮಾಡಿದ್ದಾರೆ.


ಇದನ್ನೂ ಓದಿ : ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕನ್ನಡಿಗ ಯೋಧ


ತಪಾಸಣೆ ನಡೆಸಿದ ಬಳಿಕವಷ್ಟೇ ಗಣಿಗಾರಿಕೆ ನಡೆಸಬೇಕೆಂದು ಸಚಿವ ಸೋಮಣ್ಣ(V Somanna) ಸೂಚನೆಗೂ ಬಗ್ಗದ ಕೆಲ ಉದ್ಯಮಿಗಳು ರಾಜಾರೋಷವಾಗಿಯೇ ಗಣಿಗಾರಿಕೆ ನಡೆಸುತ್ತಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಕಾರ್ಯದಕ್ಷತೆಗೆ ಕನ್ನಡಿ ಹಿಡಿದಿದೆ.


ಸಾಕಷ್ಟು ಬಾರಿ ಡಿಸಿ ಮತ್ತು ಮೈನಿಂಗ್ ಡಿಡಿಗೆ ದೂರು ಕೊಟ್ಟರು ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಅಕ್ರಮವಾಗಿ(Illegal Mining) ನಡೆಯುತ್ತಿದೆ ಎಂದರೂ ಏನು ಕ್ರಮವಾಗಿಲ್ಲ, ಸಚಿವರು ಎಲ್ಲಾವನ್ನೂ ಸ್ಥಗಿತಗೊಳಿಸಿ ತಪಾಸಣೆ ಮಾಡುತ್ತೇವೆ ಎಂದರೂ ಯಾವುದೂ ಸ್ಥಗಿತಗೊಂಡಿಲ್ಲ ಎಂದು ಮಹಮ್ಮದ್ ಅಲಿ ಅಳಲು ತೋಡಿಕೊಂಡಿದ್ದಾರೆ.


ಅಕ್ರಮ ಕ್ವಾರಿಗಳ ವಿರುದ್ಧ ರಸ್ತೆತಡೆ : ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮಟ್ಟ ಹಾಕಬೇಕೆಂದು ಆಗ್ರಹಿಸಿ, ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ನಗರದಲ್ಲಿ ಹಾದುಹೋಗುವ ಬೆಂಗಳೂರು-ದಿಂಡಿಗಲ್  ರಾಷ್ಟ್ರೀಯ ಹೆದ್ದಾರಿ(National Highway)ಯನ್ನು ತಡೆದ ರೈತ ಸಂಘದ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.


ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ರಾಶಿ ಅಡಿಕೆ ದರ ಎಷ್ಟಿದೆ?


 ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೆಲವೆಡೆ ಅರಣ್ಯ ಇಲಾಖೆ ಎನ್ಒಸಿ(NOC) ನೀಡದಿದ್ದರೂ ಗಣಿಗಾರಿಕೆ ನಡೆಯುತ್ತಿದೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ,‌ಜಿಲ್ಲೆಯ ಸಂಪತ್ತನ್ನು ಗಣಿ‌ ಉದ್ಯಮಿಗಳು ಹಿಂಡಿ‌ವ ಹಿಪ್ಪೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು  ಕಿಡಿಕಾರಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ