ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕನ್ನಡಿಗ ಯೋಧ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಸೇನಾ ಅಧಿಕಾರಿಗಳು ಉನ್ನತಮಟ್ಟದ ತನಿಖೆ ನಡೆಸಲು ತೀರ್ಮಾನಿಸಿದ್ದಾರೆ.

Written by - Zee Kannada News Desk | Last Updated : Mar 7, 2022, 03:43 PM IST
  • ಸಹೋದ್ಯೋಗಿ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಕನ್ನಡಿಗ ಯೋಧ
  • ಪಂಜಾಬ್ ನ ಅಟ್ಟಾರಿ ಗಡಿಯ ಹತ್ತಿರವಿರುವ ಖಾಸಾ ಗ್ರಾಮದ ಮಿಲಿಟರಿ ಮೆಸ್ ನಲ್ಲಿ ಘಟನೆ
  • ಗುಂಡಿನ ದಾಳಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸತ್ಯಪ್ಪ ಎಸ್.ಕೆ
ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ಕನ್ನಡಿಗ ಯೋಧ title=
ಸತ್ಯಪ್ಪ ಎಸ್.ಕೆ ಬೆಳಗಾವಿ ಜಿಲ್ಲೆಯ ಯೋಧ

ಅಮೃತಸರ: ಗುಂಡು ಹಾರಿಸಿ ಐವರು ಸಹೋದ್ಯೋಗಿಗಳನ್ನು ಹತ್ಯೆ ಮಾಡಿದ ಯೋಧನೊಬ್ಬ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. 33 ವರ್ಷದ ಗಡಿ ಭದ್ರತಾ ಪಡೆ(Border Security Forces)ಯ ಯೋಧ, ಕನ್ನಡಿಗ ಸತ್ಯಪ್ಪ ಎಸ್.ಕೆ(Sathyappa SK) ಗುಂಡಿನ ದಾಳಿ ನಡೆಸಿರುವುದು ಎಂದು ವರದಿಯಾಗಿದೆ.

ಪಂಜಾಬ್ ನ ಅಟ್ಟಾರಿ ಗಡಿಯ ಹತ್ತಿರವಿರುವ ಅಮೃತಸರದ ಖಾಸಾ ಗ್ರಾಮ(Amritsar's Khasa Village)ದ ಮಿಲಿಟರಿ ಮೆಸ್ ನಲ್ಲಿ ಈ ಘಟನೆ ನಡೆದಿದೆ. ಐವರು ಯೋಧರು ಗುಂಡಿನ ದಾಳಿಗೆ ಬಲಿಯಾಗಿದ್ದು, 6ಕ್ಕೂ ಹೆಚ್ಚು ಯೋಧರಿಗೆ ಗಾಯವಾಗಿದೆ. ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆಗೆ ಶರಣಾಗಿರುವ ಸತ್ಯಪ್ಪ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹೊಸವಂಟಮೂರಿ ನಿವಾಸಿ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Budget Session 2022 : ನಿಮ್ಮನ್ನು ಪ್ರೀತಿಸುತ್ತೇನೆ ನೀವು ನನ್ನನ್ನು ಪ್ರೀತಿಸುತ್ತೀರಿ : ಸಿದ್ದರಾಮಯ್ಯ

144ನೇ ಬಟಾಲಿಯನ್ ಕಾನ್ಸ್ ಟೇಬಲ್(BSF Constable) ಆಗಿದ್ದ ಸತ್ಯಪ್ಪ ಮಾನಸಿಕ ಅಸ್ವಸ್ಥೆಯ ರೋಗದಿಂದ ಬಳಲುತ್ತಿದ್ದನಾ? ಅನ್ನೋ ಪ್ರಶ್ನೆ ಮೂಡಿದೆ. ಸತತ ಕೆಲಸದ ಒತ್ತಡದಿಂದ ಕುಪಿತಗೊಂಡಿದ್ದ ಯೋಧ ಸತ್ಯಪ್ಪ ಊಟ ಮಾಡುವ ಮೆಸ್ ನಲ್ಲಿದ್ದ ತನ್ನ ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡಿ ದಾಳಿ ನಡೆಸಿದ್ದಾನೆ. ಪರಿಣಾಮ ಐವರು ಯೋಧರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.

ಗುಂಡಿನ ದಾಳಿ ನಡೆಸಿದ ಬಳಿಕ ತಾನೂ ಗುಂಡು ಹಾರಿಸಿಕೊಂಡು ಸತ್ಯಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಸೇನಾ ಅಧಿಕಾರಿಗಳು ಉನ್ನತಮಟ್ಟದ ತನಿಖೆ(Investigation) ನಡೆಸಲು ತೀರ್ಮಾನಿಸಿದ್ದಾರೆ. ಘಟನೆಗೆ ಕಾರಣವೇನು ಅನ್ನೋದರ ಬಗ್ಗೆ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮಹದಾಯಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು?: ಬಿಜೆಪಿ

ಸತ್ಯಪ್ಪ(BSF Jawan) ಸೇನೆಗೆ ಸೇರಿ 13 ವರ್ಷಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಹಿಂದೆ ಧಾರವಾಡನ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಸತ್ಯಪ್ಪ ಚಿಕಿತ್ಸೆ ಕೂಡ ಪಡೆದಿದ್ದರು ಎಂದು ತಿಳಿದುಬಂದಿದೆ. ಕನ್ನಡಿಗ ಯೋಧ ಸತ್ಯಪ್ಪನ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರಲಾಗುತ್ತಿದೆ. ಘಟನೆಯ ಸತ್ಯಾಸತ್ಯತೆಯನ್ನು ಭಾರತೀಯ ಸೇನಾ ಅಧಿಕಾರಿಗಳೇ ತಿಳಿಸಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News