ಡಿಕೆಶಿ-ಆನಂದ್ ಸಿಂಗ್ ಭೇಟಿ ವಿಚಾರ.. `ರಾಜಕೀಯ ರೆಸಾರ್ಟ್, ಹೊಟೇಲ್ ನಲ್ಲಿ ಮಾತಾಡುತ್ತೇವೆ`
ಆನಂದ್ ಸಿಂಗ್ ಭೇಟಿ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಲ್ಲಿ ಮನೆಯಲ್ಲಿ ನೇರವಾಗಿ ಬಂದು ಅದೆಲ್ಲ ಮಾತನಾಡಲ್ಲ. ಆ ಕಾಮನ್ ಸೆನ್ಸ್ ನಮಗೂ ಇರಬೇಕು. ನಿಮಗೂ ಇರಬೇಕು ಎಂದಿದ್ದಾರೆ.
ಬೆಂಗಳೂರು: ಆನಂದ್ ಸಿಂಗ್ (Anand Singh) ನನ್ನ ಮನೆಗೆ ಬಂದಿದ್ದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ನಾವು ರಾಜಕೀಯ ಮಾತಾಡೋದಿದ್ದರೆ ರೆಸಾರ್ಟ್ ಗಳಲ್ಲಿ, ಹೊಟೇಲ್ ಗಳಲ್ಲಿ ಭೇಟಿ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಫೇಕ್ ಮಾರ್ಕ್ಸ್ ಕಾರ್ಡ್, ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ನಂಬಿಸಿ ಮೋಸ.. ಮೂವರು ಅಂದರ್
ಆನಂದ್ ಸಿಂಗ್ ಭೇಟಿ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ (DK Shivakumar), ಇಲ್ಲಿ ಮನೆಯಲ್ಲಿ ನೇರವಾಗಿ ಬಂದು ಅದೆಲ್ಲ ಮಾತನಾಡಲ್ಲ. ಆ ಕಾಮನ್ ಸೆನ್ಸ್ ನಮಗೂ ಇರಬೇಕು. ನಿಮಗೂ ಇರಬೇಕು ಎಂದಿದ್ದಾರೆ.
ಆನಂದ್ ಸಿಂಗ್ ಭೇಟಿ ಮಾಡುವುದರಲ್ಲಿ ತಪ್ಪೇನಿದೆ?
ಆನಂದ್ ಸಿಂಗ್ ಭೇಟಿಯಾಗಿದ್ದರು. ಯಾವುದೇ ರಾಜಕಾರಣ ಚರ್ಚೆ ಮಾಡುವ ಅಗತ್ಯವಿಲ್ಲ. ಸಂಗಮದಲ್ಲಿ ಕಾವೇರಿ (Kaveri) ಆರತಿ ಮಾಡಬೇಕು. ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು. ಈ ವಿಚಾರಕ್ಕೆ ನಾನು ಆನಂದ್ ಸಿಂಗ್ ಬಳಿ ಮನವಿ ಮಾಡಿದ್ದೇನೆ. ಅವರ ಸಹ ಸ್ಪಂದಿಸಿದ್ದಾರೆ. ಒಂದು ಟೀಮ್ ಕಳಿಸುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಅವರು ಒಬ್ಬ ಮಂತ್ರಿ ಇದ್ದಾರೆ. ಮನೆಗ ಬರಬೇಕು ಅಂದ್ರೆ ರಾಜಕಾರಣ ಇಟ್ಟುಕೊಂಡು ಬರಲ್ಲ. ಆನಂದ್ ಸಿಂಗ್ ನನ್ನ ಮನೆಗೆ ಬಂದಿದ್ದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಒಬ್ಬ ಮಂತ್ರಿ ಧೈರ್ಯವಾಗಿ ವಿರೋಧ ಪಕ್ಷದವರ ಮನೆಗೆ ಬರುತ್ತಾರೆ ಅಂದ್ರೆ ನಾನೊಬ್ಬ ಸಿನಿಯರ್ ಲೀಡರ್. ನಾನೇ ಬಂದು ವಿವರಣೆ ಹೇಳುತ್ತೇನೆ ಎಂದು ಬಂದಿದ್ದರು. ಅವರ ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೇಗೆ ಮಾಡಿದ್ದರು. ತುಂಗಾ ಆರತಿ (Tunga Arati) ಮಾಡಿದ್ದರು. ನಮ್ಮ ಜಿಲ್ಲೆಯಲ್ಲೂ ಆ ರೀತಿ ಮಾಡಬೇಕು ಎಂದು ಮನವಿ ಮಾಡಿದ್ದೇನೆ. ಅದಕ್ಕೆ ಭೇಟಿಯಾಗಿದ್ದರು ಎಂದು ಹೇಳಿದ್ದಾರೆ.
ನಾಳೆ ಕೇಂದ್ರ ಸರ್ಕಾರದ ಬಜೆಟ್:
ನಾಳೆ ಕೇಂದ್ರ ಸರ್ಕಾರದ ಬಜೆಟ್ (Budget 2022) ಹಿನ್ನೆಲೆ ದೇಶದಲ್ಲಿ ಕೋವಿಡ್ ನಿಂದ ನರಳಿದ ಜನರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡುತ್ತೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ. ರಾಜ್ಯದಲ್ಲಿ ನಾಲ್ಕು ಲಕ್ಷ ಜನ ಸಾವನ್ನಪ್ಪಿದ್ದಾರೆ. ಅವರಿಗೆ ಯಾವ ರೀತಿ ಸಹಾಯ ಮಾಡುತ್ತದೆ. ಕೆಲವರಿಗೆ ಸೀಮಿತವಾಗಿ ಒಂದೊಂದು ಲಕ್ಷ ಕೊಡುವುದಕ್ಕೆ ಮುಂದಾಗಿದ್ದಾರೆ. ನಾಲ್ಕು ಲಕ್ಷ ಕೊಡಬೇಕು ಎಂದು ನಮ್ಮ ಒತ್ತಾಯ ಮಾಡಿದ್ದೆವು, ಕೋರ್ಟ್ ಸಹ ಹೇಳಿತ್ತುಎಂದು ಹೇಳಿದ್ದಾರೆ.
ಇದನ್ನೂ ಓದಿ: Ravi Channannavar: ‘ನನ್ನ ಮೇಲಿನ ಆರೋಪ ಸುಳ್ಳು, ಕಾನೂನು ಬದ್ಧವಾಗಿಯೇ ಆಸ್ತಿ ಖರೀದಿಸಿದ್ದೇನೆ’
ರೈತರಿಗೆ, ಕಾರ್ಮಿಕರಿಗೆ ನಷ್ಟವಾಗಿದೆ:
ರೈತರಿಗೆ, ಕಾರ್ಮಿಕರಿಗೆ ನಷ್ಟವಾಗಿದೆ. ಅನೇಕ ಜನ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರ ಪಟ್ಟಿ ಸಿದ್ಧಪಡಿಸಿ, ಅವರಿಗೆ ಹಣ ಕೊಡುತ್ತದೆ ಎಂದು ನಂಬಿಕೆಯಿದೆ ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.