ಫೇಕ್ ಮಾರ್ಕ್ಸ್ ಕಾರ್ಡ್, ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ನಂಬಿಸಿ ಮೋಸ.. ಮೂವರು ಅಂದರ್

ಫೇಕ್ ಮಾರ್ಕ್ಸ್ ಕಾರ್ಡ್ (Fake Marks Card) ರೆಡಿ ಮಾಡಿ ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ನಂಬಿಸ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Edited by - Zee Kannada News Desk | Last Updated : Jan 31, 2022, 02:51 PM IST
  • ಫೇಕ್ ಮಾರ್ಕ್ಸ್ ಕಾರ್ಡ್
  • ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ನಂಬಿಸಿ ಮೋಸ
  • ಈ ಸಂಬಂಧ ಮೂವರು ಆರೋಪಿಗಳನ್ನು ಅರೆಸ್ಟ್
ಫೇಕ್ ಮಾರ್ಕ್ಸ್ ಕಾರ್ಡ್, ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ನಂಬಿಸಿ ಮೋಸ.. ಮೂವರು ಅಂದರ್  title=
ಅರೆಸ್ಟ್

ಬೆಂಗಳೂರು: ಫೇಕ್ ಮಾರ್ಕ್ಸ್ ಕಾರ್ಡ್ (Fake Marks Card) ರೆಡಿ ಮಾಡಿ ವಿಲೇಜ್ ಅಕೌಂಟೆಂಟ್ ಕೆಲಸ ಕೊಡಿಸೋದಾಗಿ ನಂಬಿಸ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಧಾನಸೌಧ (Vidhanasoudha) ಪೊಲೀಸರು ಈ ಸಂಬಂಧ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಈರಣ್ಣ@ರಾಜಣ್ಣ, ವಾಸುದೇವ್ ರಾಮಚಂದ್ರ ಚಿಂಚೋಳಿ, ಡೇವಿಡ್ ರಾಜ್ ಎಂಬುವವರು ಬಂಧಿತರೆಂದು ತಿಳಿದುಬಂದಿದೆ. 

ಇದನ್ನೂ ಓದಿ: ಬೆಂಗಳೂರು ವಿವಿಯಲ್ಲಿ ಗಲಾಟೆ, ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾರಾಮಾರಿ

ಪಿಯುಸಿ ಫೇಕ್ ಮಾರ್ಕ್ಸ್ ಕಾರ್ಡ್ ಮಾಡಿಸಿ ಮೋಸ ಮಾಡ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಜಸ್ತಾನ ಯೂನಿವರ್ಸಿಟಿ (Rajastan University) ಸೇರಿದಂತೆ ಹಲವು ವಿಶ್ವ ವಿದ್ಯಾಲಯಗಳ ಹೆಸರಿನಲ್ಲಿಯೂ ನಕಲಿ ಮಾರ್ಕ್ಸ್ ಕಾರ್ಡ್ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.  

ವಿಲೇಜ್ ಅಕೌಂಟೆಂಟ್ (Village Accountant) ಕೆಲಸ ಕೊಡಿಸ್ತೀನಿ ಅಂತ ತಲಾ 11 ಲಕ್ಷ ಪಡೆಯುತ್ತಿದ್ದರು. ಆರೋಪಿಗಳ ಪೈಕಿ ಈರಣ್ಣ ಕನ್ನಡ ಮತ್ತು ಸಂಸಂಸ್ಕೃತಿ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದೆ ಅಂತ ನಂಬಿಸ್ತಿದ್ದ. ವಾಸುದೇವ ಅಭ್ಯರ್ಥಿಗಳನ್ನ ಖೆಡ್ಡಾಕ್ಕೆ ಕೆಡವುತ್ತಿದ್ದ. ಆರೋಪಿ ಡೇವಿಡ್ ರಾಜ್ ಬಯಾಲಜಿ ಲೆಕ್ಚರರ್ ಆಗಿ ಕೆಲಸ ಮಾಡುತ್ತಿದ್ದ. ಡೇವಿಡ್ ರಾಜ್ ನೇ ಅಭ್ಯರ್ಥಿಗಳಿಗೆ ಮಾರ್ಕ್ಸ್ ಕಾರ್ಡ್ ಮಾಡಿಕೊಡ್ತಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕರ್ನಾಟಕದ ಸೂಪರ್ ಮಾರ್ಕೆಟ್‌ಗಳಲ್ಲಿ ವೈನ್ ಮಾರಾಟಕ್ಕೆ ತಯಾರಿ ನಡೆಸುತ್ತಿದ್ದೆಯಾ ರಾಜ್ಯ ಸರ್ಕಾರ?

2019 ರಲ್ಲಿ ನಡೆದ ವಿಲೇಜ್ ಅಕೌಂಟೆಂಟ್ ಹುದ್ದೆಯ ನೋಟಿಫಿಕೇಷನ್ ಗೆ ಅಭ್ಯರ್ಥಿಗಳಿಂದ ಅರ್ಜಿ ಹಾಕಿಸಿದ್ದ ಆರೋಪಿಗಳು, ಕೋವಿಡ್ ಕಾರಣದಿಂದ ಇಲ್ಲಿಯವರೆಗೂ ಸೆಲೆಕ್ಟ್ ಆದ ಅಭ್ಯರ್ಥಿಗಳನ್ನ ಕರೆದಿರಲಿಲ್ಲ. ಇತ್ತೀಚೆಗೆ ಮಾರ್ಕ್ಸ್ ಕಾರ್ಡ್ ಸೇರಿ ದಾಖಲೆಗಳನ್ನ ಕೇಳಲಾಗಿತ್ತು. ಈ ವೇಳೆ ವಂಚಕರ ಜಾಲ ಬಯಲಿಗೆ ಬಂದಿದೆ.

ಸದ್ಯ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News