ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಸದನದಲ್ಲಿ ಹಲ್ಲೆ ಮಾಡಲು ಹೋಗಿದ್ದಾರೆ. ಇವರಿಗೆ ಮಾತು ಬರಲ್ಲ, ಬರೀ ಕೈ-ಕಾಲು ಬರುವುದು ಎಂದು ಸಚಿವ ಅಶ್ವತ್ಥ ನಾರಾಯಣ ಕಿಡಿಕಾರಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಇಲ್ನೋಡಿ.. ಆನೆಗೇ ಠಕ್ಕರ್ ಕೊಟ್ಟ ಭೂಪ, ಕಾಲಿಗೆ ಬೀಳುತ್ತಿದ್ದಂತೆ ಕಾಲ್ಕಿತ್ತ ಕಾಡಾನೆ!


ಬಿಜೆಪಿ ಕಚೇರಿಯಲ್ಲಿ (BJP) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ (Ashwatha Narayan), ವಿಧಾನಮಂಡಲ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಮಾತಿನಲ್ಲಿ ವಿಚಾರ ಮಂಡಿಸದೆ ಬರಿ ದೈಹಿಕವಾಗಿ ಶಕ್ತಿ ಪ್ರಹಾರ ಮಾಡಲು ಮುಂದಾಗುತ್ತಾರೆ. ಈ ರೀತಿಯ ನಡವಳಿಕೆ ನಿಜಕ್ಕೂ ಖಂಡನೀಯ ವಿಚಾರ. ಇದನ್ನೂ ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತದೆ. ಕಾಂಗ್ರೆಸ್ ನದ್ದು ಓಲೈಕೆ ರಾಜಕೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಬಡ ಮಕ್ಕಳು ವಿದ್ಯಾಭ್ಯಾಸ ಹಾಳು ಮಾಡುವುದು ಕಾಂಗ್ರೆಸ್ (Congress) ಉದ್ದೇಶ. ಅವರು ಉತ್ತಮ ಭವಿಷ್ಯ ಕಾಣಬಾರದು. ಅವಿದ್ಯಾವಂತರು ಅಸಹಾಯಕರಾಗಿರಬೇಕು ಎಂಬ‌ ದುರುದ್ದೇಶ ಹೊಂದಿದ್ದಾರೆ ಎಂದರು.


ಶಿವಮೊಗ್ಗದಲ್ಲಿ ಹಿಜಾಬ್ ಪ್ರಕರಣ (Hijab Row) ಆರಂಭವಾದಾಗ ರಾಷ್ಟ್ರ ಧ್ವಜ‌ ಇಳಿಸಿ ಕೇಸರಿ ಧ್ವಜ‌ ಹಾರಿಸಿದ್ದಾರೆ ಎಂದು ಡಿಕೆಶಿ ಸುಳ್ಳು ಹೇಳಿದ್ದರು. ನಂತರ ಅದುವೇ ಸತ್ಯ ಎಂದು ಬಿಂಬಿಸುವ ಪ್ರಯತ್ನ ನಡೆಸಿದರು ಎಂದು ಹೇಳಿದರು.


ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸಲಹೆ ಕೊಡುವ ಬದಲು ದಾರಿ ತಪ್ಪಿಸುತ್ತಿದ್ದಾರೆ. ಹಿಜಾಬ್ ವಿಚಾರವಾಗಿ ನೇರ ನಡೆಯನ್ನು ಕೈಗೊಂಡಿಲ್ಲ. ಚರ್ಚೆ ಮಾಡಲು ಅವರು ಬಯಸಿಲ್ಲ. ವಿಷಯವನ್ನು ವಿಷಯಾಂತರ ಮಾಡಲು ನಡೆಸಿದ ಪ್ರಯತ್ನವಾಗಿದೆ. ರಾಷ್ಟ್ರೀಯತೆ ವಿಚಾರವಾಗಿ ನಮಗೆ ಇವರ ಪಾಠ ಬೇಕಿಲ್ಲ. ರಾಷ್ಟ್ರ ಧ್ವಜ ಸಂವಿಧಾನದ ಬಗ್ಗೆ ಇವರ ಪಾಠ ಬೇಡ. ಸ್ವತಃ ಇವರಿಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 


ವಿಧಾನಮಂಡಲ ಕಲಾಪ ವ್ಯರ್ಥ; ವೆಚ್ಚ ರಿಕವರಿ ಸ್ವಾಗತಾರ್ಹ:


ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ (CM seat) ಪೈಪೋಟಿ ಇದೆ. ಸಿಎಂ ಸ್ಥಾನಕ್ಕಾಗಿ ಹಗಲು ಕನಸು ಕಾಣುತ್ತಿದ್ದಾರೆ. ವಿಧಾನಮಂಡಲ ಖರ್ಚು ವೆಚ್ಚ ಕಾಂಗ್ರೆಸ್ ನಿಂದ ರಿಕವರಿ ಮಾಡುವ ಸ್ಪೀಕರ್ ಹೇಳಿಕೆ ಸ್ವಾಗತಾರ್ಹವಾಗಿದೆ ಎಂದರು. 


ಇದನ್ನೂ ಓದಿ:  ಸಕ್ಕರೆನಾಡಲ್ಲಿ ವಿಚಿತ್ರ ಕಳ್ಳತನ ಪ್ರಕರಣ: ಕಳ್ಳತನಕ್ಕೆ ಬಂದು ಅಡುಗೆ ಮಾಡಿ ತಿಂದ ಆಸಾಮಿ


ಈ ಜನ್ಮದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ:


ಯಾವ ಜನ್ಮದಲ್ಲೂ ಮೇಕೆದಾಟು ಯೋಜನೆ (Mekedatu Project) ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಗೆ ಸಾಧ್ಯವಿಲ್ಲ. ಡಿಎಂಕೆ‌ ಸಹಕಾರ ಇಲ್ಲದೆ ಅವರು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬರಲ್ಲ. ಅದರಿಂದ ಅವರಿಗೆ ಈ‌ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ಏನೇ ಸಾಧ್ಯವಿದ್ದರೂ ಅದು ಬಿಜೆಪಿಗೆ ಮಾತ್ರ.‌ ನಾವು ಅದಕ್ಕೆ ಬದ್ಧರಿದ್ದೇವೆ ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ