ಇಲ್ನೋಡಿ.. ಆನೆಗೇ ಠಕ್ಕರ್ ಕೊಟ್ಟ ಭೂಪ, ಕಾಲಿಗೆ ಬೀಳುತ್ತಿದ್ದಂತೆ ಕಾಲ್ಕಿತ್ತ ಕಾಡಾನೆ!

ಕಾಡಾನೆಯಲ್ಲಾ (Wild Elephant) ಒಮ್ಮೊಮ್ಮೆ ಸಾಕಾನೆಗಳೇ ತಮ್ಮ ಹತ್ತಿರ ಹೋದವರನ್ನು ತುಳಿದು ಬಿಸಾಡುತ್ತವೆ. ಆದರೆ, ಇಲ್ಲೋರ್ವ ಭೂಪ ಒಂಟಿ ಸಲಗಕ್ಕೆ ಅಡ್ಡಬಿದ್ದು ಠಕ್ಕರ್ ಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. 

Written by - Zee Kannada News Desk | Last Updated : Feb 24, 2022, 12:51 PM IST
  • ಒಂಟಿ ಸಲಗಕ್ಕೆ ಅಡ್ಡಬಿದ್ದು ಠಕ್ಕರ್ ಕೊಟ್ಟ ಭೂಪ
  • ಕಾಲಿಗೆ ಬೀಳುತ್ತಿದ್ದಂತೆ ಕಾಲ್ಕಿತ್ತ ಕಾಡಾನೆ
  • ಚಾಮರಾಜನಗರದ ಕಾರೆಪಾಳ್ಯ ಸಮೀಪ ಘಟನೆ
ಇಲ್ನೋಡಿ.. ಆನೆಗೇ ಠಕ್ಕರ್ ಕೊಟ್ಟ ಭೂಪ, ಕಾಲಿಗೆ ಬೀಳುತ್ತಿದ್ದಂತೆ ಕಾಲ್ಕಿತ್ತ ಕಾಡಾನೆ! title=
ಕಾಡಾನೆ

ಚಾಮರಾಜನಗರ: ಕಾಡಾನೆಯಲ್ಲಾ (Wild Elephant) ಒಮ್ಮೊಮ್ಮೆ ಸಾಕಾನೆಗಳೇ ತಮ್ಮ ಹತ್ತಿರ ಹೋದವರನ್ನು ತುಳಿದು ಬಿಸಾಡುತ್ತವೆ. ಆದರೆ, ಇಲ್ಲೋರ್ವ ಭೂಪ ಒಂಟಿ ಸಲಗಕ್ಕೆ ಅಡ್ಡಬಿದ್ದು ಠಕ್ಕರ್  ಕೊಟ್ಟು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ. ಈ ಘಟನೆ ಚಾಮರಾಜನಗರ (Chamarajanagar) ಗಡಿ ಪ್ರದೇಶ ಕಾರೆಪಾಳ್ಯ ಸಮೀಪ ಬುಧವಾರ ನಡೆದಿದೆ.

ಇದನ್ನೂ ಓದಿ: WATCH: ಗುಡ್ಡ ಕುಸಿತದಿಂದ ಮತ್ತೆ ಆತಂಕಕ್ಕೆ ಒಳಗಾದ ಗ್ರಾಮಸ್ಥರು

ರಾತ್ರಿ ಸಂಚಾರ ನಿರ್ಬಂಧದಿಂದ ಟ್ರಾಪಿಕ್ ಜಾಮ್ (Traffic Jam) ಉಂಟಾಗಿತ್ತು. ಈ ವೇಳೆ ಅನೇಕ ವಾಹನಗಳು ಸಾಲಾಗಿ ನಿಂತಿದ್ದವು. ಆಗ ಎಂದಿನಂತೆ ಕಬ್ಬಿನ ಲಾರಿಗಾಗಿ ಆನೆಯೊಂದು ರಸ್ತೆಬದಿ ನಿಂತಿದೆ. ಆ ವೇಳೆ, ದಿಢೀರನೇ ಎಂಟ್ರಿ ಕೊಟ್ಟ ವ್ಯಕ್ತಿವೋರ್ವ ಆನೆ ಬಳಿ ತೆರಳಿ ಕೈ ಮುಗಿದು ಅಡ್ಡಬಿದ್ದಿದ್ದಾನೆ. ಆನೆ (Elephant) ಒಮ್ಮೆ ಕೂಗಿ ಕೋಪ ತೋರಿಸಿದರೂ ಬಿಡದ ಈತ ಆನೆಯನ್ನು ಹಿಂಬಾಲಿಸಿ ಮತ್ತೊಮ್ಮೆ ಕಾಲಿಗೆ ಬಿದ್ದಿದ್ದಾನೆ. ಆನೆ ದಾಳಿ ಮಾಡಲು ಮುಂದಾದರೂ ಚಲಿಸದೇ ನಿಂತಿದ್ದ ಈತನ ದೈರ್ಯ ಕಂಡು, ಗಲಿಬಿಲಿಗೊಂಡ ಸಲಗ ಕಾಡಿನತ್ತ ಓಡಿ ಹೋಗಿದೆ.

ಕಾಲಿಗೆ ಬಿದ್ದ ವ್ಯಕ್ತಿ ಈಶಾನ್ಯ ರಾಜ್ಯದವನಂತೆ ಕಂಡುಬರುತ್ತಿದ್ದು, ಮಾನಸಿಕ ಅಸ್ವಸ್ಥನೋ ಅಥವಾ ಮಾದಕ ವಸ್ತು ಸೇವಿಸಿದ್ದನೋ ಎಂಬುದು ಗೊತ್ತಾಗಿಲ್ಲ. ಲಾರಿ ಚಾಲಕರು ಈ ವಿಡಿಯೋ ಸೆರೆ (Viral video) ಹಿಡಿದಿದ್ದು, ಆನೆ ಬಳಿ ಹೋಗದಂತೆ ಸಾಕಷ್ಟು ಬಾರಿ ಕೂಗಿ ಕರೆಯುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ‌. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗಿದೆ. 

ಇದನ್ನೂ ಓದಿ: ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಮಾಡಿದ ಮನವಿ ಏನು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News