ದಿಂಗಾಲೇಶ್ವರ ಸ್ವಾಮಿಗಳ ವಿರುದ್ಧ ಕಿಡಿಕಾರಿದ ಸಚಿವ ಸಿಸಿ ಪಾಟೀಲ್
ಗದಗಿನ ಡಾ. ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಹುಟ್ಟಿದ ದಿನವನ್ನು ಭಾವೈಕ್ಯದ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿರುವುದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ ಮಾಡಿದ್ದಾರೆ. ತೋಂಟದಾರ್ಯ ಮಠದ ಮೇಲೆ ಜನರಿಗೆ ಇರುವ ಪೂಜ್ಯ ಭಾವನೆ ಗದಗದ ಶಿರಹಟ್ಟಿ ಮಠದ ಮೇಲೂ ಇದೆ. ಅದೂ ಭಾವೈಕ್ಯತೆಗೆ ಹೆಸರಾದ ಮಠ.
ಬೆಂಗಳೂರು: ದೇವಸ್ಥಾನಗಳಿಗೆ ನೀಡುವ ಅನುದಾನ ಪಡೆಯಬೇಕಾದರೆ ಸರ್ಕಾರ 30% ಕಮಿಷನ್ ಬೇಡಿಕೆ ಆರೋಪ ಮಾಡಿರುವ ಗದಗ ಶಿರಹಟ್ಟಿ ಮಠದ ಫಕೀರೇಶ್ವರ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್ ಕಿಡಿಕಾರಿ, ಇವರ ವಿರುದ್ದ ಮೂರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಎರಡು ಪ್ರಕರಣದಲ್ಲಿ ಜಾಮೀನಿನಲ್ಲಿ ಇದ್ದಾರೆ ಎಂದರು.
ವಿಧಾನಸೌಧದಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್, ಗದಗಿನ ಡಾ. ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಹುಟ್ಟಿದ ದಿನವನ್ನು ಭಾವೈಕ್ಯದ ದಿನ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿರುವುದಕ್ಕೆ ದಿಂಗಾಲೇಶ್ವರ ಸ್ವಾಮೀಜಿ ವಿರೋಧ ಮಾಡಿದ್ದಾರೆ. ತೋಂಟದಾರ್ಯ ಮಠದ ಮೇಲೆ ಜನರಿಗೆ ಇರುವ ಪೂಜ್ಯ ಭಾವನೆ ಗದಗದ ಶಿರಹಟ್ಟಿ ಮಠದ ಮೇಲೂ ಇದೆ. ಅದೂ ಭಾವೈಕ್ಯತೆಗೆ ಹೆಸರಾದ ಮಠ. ಆ ಮನುಷ್ಯನಿಗೆ ( ಫಕೀರೇಶ್ವರ ದಿಂಗಾಲೇಶ್ವರ ಸ್ವಾಮಿ) ಏನಾಯಿತೋ ಗೊತ್ತಿಲ್ಲ.ಯದ್ವಾತದ್ವಾ ಒಬ್ಬ ಸ್ವಾಮೀಜಿ ಬಳಸದಂಥ ಭಾಷೆಯನ್ನು ಸಿಎಂ ಮೇಲೆ ಬಳಸಿದ್ದಾರೆ. ಒಂದು ಮಠದ ಸಮಾಧಿಯನ್ನು ಉದ್ಘಾಟನೆ ಮಾಡಲು ಹೋಗಿ ಇನ್ನೊಂದು ಮಠವನ್ನು ಸಮಾಧಿ ಮಾಡಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮಿ ಹೇಳಿದ್ದಾರೆ. ಇಂಥ ಸ್ವಾಮಿ ಹೇಳಿಕೆಯಿಂದ ಶಿರಹಟ್ಟಿ ಮಠದ ಎಲ್ಲವೂ ಸಮಾಧಿಯಾಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ- ಹುಬ್ಬಳ್ಳಿಯಲ್ಲಿ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ರಾ ಕಿಡಿಗೇಡಿಗಳು..!?
ಮಠಾಧೀಶರು ಇರುತ್ತಾರೆ ಹೋಗುತ್ತಾರೆ. ಆದರೆ ಮಠದ ಘನತೆ, ಗಾಂಭೀರ್ಯತೆ ಕಾಪಾಡುವ ಕೆಲಸವನ್ನು ದಿಂಗಾಲೇಶ್ವರ ಸ್ವಾಮಿಗಳು ಮಾಡಬೇಕಿತ್ತು. ಅದು ಮಾಡಿಲ್ಲ ಎಂಬುದು ನೋವಿನ ಸಂಗತಿ. 30% ಕಮಿಷನ್ ಎಂಬ ಆರೋಪ ಮಾಡಿದ್ದಾರೆ. ಒಂದು ಮಠದ ಮಠಾಧೀಶರಾಗಿ ಇನ್ನೊಂದು ಮಠದ ಬಗ್ಗೆ ಈ ರೀತಿ ವಿಷ ಕಾರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಒಂದು ಮಠಕ್ಕೆ ಕೊಟ್ಟ ಗೌರವಕ್ಕೆ ಇವರು ಅಪಹಾಸ್ಯ ಮಾಡುತ್ತಿದ್ದಾರೆ. ತಮ್ಮ ಮಠಕ್ಕೆ ಕೇಳಲಿ ಬೇಡ ಅನ್ನುವುದಿಲ್ಲ. ಅಷ್ಟಕ್ಕೂ ಮೂರುಸಾವಿರ ಮಠದ ಉತ್ತರಾಧಿಕಾರಿ ಸಂದರ್ಭದಲ್ಲಿ ಇವರು ಮಾಡಿದ ಘನ ಕಾರ್ಯ ಏನು? ಮ್ಯಾನ್ ಮತ್ತು ಮಸಲ್ ಪವರ್ ಬಳಸಿ ಮೂರು ಸಾವಿರ ಮಠದ ಗದ್ದುಗೆ ಹಿಡಿಯುವ ಯತ್ನ ಮಾಡಿದ್ದರು. ಈ ಮನುಷ್ಯನ ಪೂರ್ವ ಪರ ಇತಿಹಾಸ ಏನಿದೆ? ಎಂದು ಹರಿಹೈದರು.
ಇದನ್ನೂ ಓದಿ- "ಪಿಯು ಪರೀಕ್ಷಾ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ"
ಇವರ ಪೂರ್ವಾಶ್ರಮದ ಇತಿಹಾಸ ಏನು ಎಂಬುದು ಗದಗದ ಜನರಿಗೆ ಗೊತ್ತಿದೆ. ರಾಜ್ಯದ ಸಿಎಂ ಮಠಕ್ಕೆ ಗೌರವ ತೋರಿದಾಗ ಅದನ್ನು ಸಹಿಸುವ ಶಕ್ತಿ ಇನ್ನೊಂದು ಮಠದ ಪೀಠಾಧಿಪತಿಗಳಿಗಿಲ್ಲ ಅಂದರೆ ಅವರಿಗೆ ಬಸವಣ್ಣನ ತತ್ವ ಹೇಳುವ ನೈತಿಕತೆ ಏನಿದೆ? ಎಂದು ಪ್ರಶ್ನೆ ಮಾಡಿದರು.
ಮಠದ ಘನತೆ, ಗೌರವ ಕಾಪಾಡುವುದು ಅವರ ಜವಾಬ್ದಾರಿ ಆಗಿದೆ. ರಾಜ್ಯದ ಸಿಎಂ ಬಗ್ಗೆ ಅಗೌರವದಿಂದ ಮಾತನಾಡುವುದು ಸರಿಯಲ್ಲ. ಯಾರನ್ನೋ ಓಲೈಸಲು ಮತ್ಯಾರನ್ನೋ ತೆಗಳುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.