ಬೆಂಗಳೂರು: ತನ್ನ ರಾಜಕೀಯ ಬದ್ದ ವೈರಿ ಕೊಠಡಿಯನ್ನೇ ಸಚಿವ ಸಿ ಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಿಂದೆ ಪಡೆದಿದ್ದ ಕೊಠಡಿಯನ್ನೇ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದ ಕೊಠಡಿ ಸಂಖ್ಯೆ 336, 337 ಸಂಖ್ಯೆಯ ಕೊಠಡಿ ಪಡೆದ ಯೋಗೇಶ್ವರ್(CP Yogeshwar) ಪೂಜೆ ನೆರವೇರಿಸಿದ್ದಾರೆ. ಈ ಹಿಂದೆ 2011 ರಲ್ಲಿ ಸಚಿವರಾಗಿದ್ದಾಗ ಈ ಕೊಠಡಿಯಲ್ಲೇ ಕರ್ತವ್ಯ. ನಿರ್ವಹಿಸಿದ್ದ ಯೋಗೇಶ್ವರ್ ಈಗ ಮತ್ತೊಮ್ಮೆ ಅಧಿಕಾರ ಸ್ಥಾಪಿಸಿದ್ದಾರೆ.


BJP: 'ಕಾಂಗ್ರೆಸ್​ಗೆ ತಟ್ಟಿದೆ ಅಂಬೇಡ್ಕರ್​ ಶಾಪ: ಕಂಬ ನಿಲ್ಲಿಸಿದ್ರೂ ಗೆಲ್ಲುತ್ತಿದ್ದ ಪಕ್ಷಕ್ಕೆ ಕ್ಷೇತ್ರವೇ ಇಲ್ಲದಂತಾಗಿದೆ'


ಈ ಕೊಠಡಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈಗಿನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯನಿರ್ವಹಿಸಿದ್ದರು. ಸಹಜವಾಗಿಯೇ ಸಿಪಿ ಯೋಗೇಶ್ವರ್ ಈ ಕೊಠಡಿ ಪಡೆದಿರೋದಕ್ಕೆ ಕಾರಣ ಏನು..? ಎಂಬ ಪ್ರಶ್ನೆ ಸಹ ಮೂಡಿದೆ. ರಮೇಶ ಜಾರಕಿಹೊಳಿ ಸೂಚನೆಯಂತೆ ಸಚಿವ ಸಿಪಿ ಯೋಗೇಶ್ವರ್ ಈ ಕೊಠಡಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.


H.Vishwanath: 'ಹಳ್ಳಿಹಕ್ಕಿ'ಯ ಮಂತ್ರಿಯಾಗುವ ಕನಸು ನುಚ್ಚು ನೂರು!


ಇನ್ನೊಂದು ಕಡೆ ಡಿಕೆಶಿ ನಿರ್ವಹಿಸುತ್ತಿದ್ದ ಜಲಸಂಪನ್ಮೂಲ ಖಾತೆ ಪಡೆದಿರುವ ಸಚಿವ ರಮೇಶ್ ಜಾರಕಿಹೊಳಿ ಪಡೆದುಕೊಂಡು ಹಲವು ದಿನ ಕಳೆದಿದೆ. ಇದೀಗ ತನ್ನ ಆಪ್ತನಿಗೆ ಡಿಕೆಶಿ ಇದ್ದ ಕೊಠಡಿ ಕೊಡಿಸಿದ ರಮೇಶ್ ಜಾರಕಿಹೊಳಿ ಕೊಡಿಸಿದ್ದಾರೆ.


Karnataka Politics ಸದನ ಕದನಕ್ಕೆ ವೇದಿಕೆ ಸಜ್ಜು, ಇಂದಿನಿಂದ ವಿಧಾನಮಂಡಲ ಅಧಿವೇಶನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.