Karnataka Politics ಸದನ ಕದನಕ್ಕೆ ವೇದಿಕೆ ಸಜ್ಜು, ಇಂದಿನಿಂದ ವಿಧಾನಮಂಡಲ ಅಧಿವೇಶನ

ಕೃಷಿ ಕಾನೂನಿನ ವಿರುದ್ಧ ರೈತ ಸಮುದಾಯದ ಆಕ್ರೋಶ, ಸಂಪುಟ ವಿಸ್ತರಣೆ  ಗೊಂದಲ, ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆ, ಕರೋನಾ  ಸಂಕಟಗಳ ನಡುವೆ ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ.

Written by - Ranjitha R K | Last Updated : Jan 28, 2021, 10:00 AM IST
  • ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ
  • ಮೊದಲ ದಿನ ಬೆಳಗ್ಗೆ 11 ಗಂಟೆಗೆ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ
  • ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜು
Karnataka Politics  ಸದನ ಕದನಕ್ಕೆ ವೇದಿಕೆ ಸಜ್ಜು, ಇಂದಿನಿಂದ ವಿಧಾನಮಂಡಲ ಅಧಿವೇಶನ title=
ಇಂದಿನಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ (file photo)

ಬೆಂಗಳೂರು : ಕೃಷಿ ಕಾನೂನಿನ ವಿರುದ್ಧ ರೈತ ಸಮುದಾಯದ ಆಕ್ರೋಶ, ಸಂಪುಟ ವಿಸ್ತರಣೆ (Cabinet Expansion) ಗೊಂದಲ, ಗೋ ಹತ್ಯೆ ನಿಷೇಧ ಸುಗ್ರೀವಾಜ್ಞೆ, ಕರೋನಾ (Corona) ಸಂಕಟಗಳ ನಡುವೆ ವಿಧಾನಮಂಡಲದ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಇದು ಈ ವರ್ಷದ ಪ್ರಥಮ ಅಧಿವೇಶನವಾಗಿದೆ. ಹಾಗಾಗಿ ಸಂಪ್ರದಾಯದಂತೆ ರಾಜ್ಯಪಾಲರು ಇಂದು ಜಂಟಿ ಸದನವನ್ನುದ್ದೇಶಿಸಿ ಮಾತನಾಡಲಿದ್ದಾರೆ. 

ಫೆ.5ರ ತನಕ  ವಿಧಾನಮಂಡಲದ ಕಲಾಪ ನಡೆಯಲಿದೆ. : 
ಇಂದು ಬೆ.೧೧ ಗಂಟೆಗೆ ಆರಂಭವಾಗಲಿರುವ ಎರಡೂ ಸದನಗಳ  (Assembly Session) ಕಲಾಪ ಆರಂಭವಾಗಲಿದೆ. ಎರಡೂ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲ (Governor) ವಜುಬಾಯಿ ವಾಲಾ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರದ (Karnataka government) ಸಾಧನೆ, ಮುನ್ನೋಟ ಮತ್ತು ಹಲವು ವಿಶೇಷಗಳ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. 

ಇದನ್ನೂ ಓದಿ :BJP: ಸಭಾಪತಿ-ಉಪಸಭಾಪತಿ ಆಯ್ಕೆ: ಜೆಡಿಎಸ್ ಗೆ ಸಭಾಪತಿ ಸ್ಥಾನ ಬಿಟ್ಟುಕೊಟ್ಟ ಬಿಜೆಪಿ!

೧೦.೪೫ ಕ್ಕೆ ವಿಧಾನಸೌಧಕ್ಕೆ ರಾಜ್ಯಪಾಲರ ಆಗಮನ:
ವರ್ಷದ ಮೊದಲ ಅಧಿವೇಶನದ ಮೊದಲ ದಿನ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಮೊದಲಿನಿಂದ ನಡೆದು ಕೊಂಡು ಬಂದಿರುವ ಸಂಪ್ರದಾಯ.  ಬೆಳಗ್ಗೆ 10.45ಕ್ಕೆ ರಾಜ್ಯಪಾಲರು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.  ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa) ವಜುಬಾಯಿ ವಾಲಾರನ್ನ ಸ್ವಾಗತಿಸಲಿದ್ದಾರೆ. ಸಿಎಂ ಬಿಎಸ್ ವೈಗೆ ಸಭಾಪತಿ, ಸ್ಪೀಕರ್ ಸಾಥ್ ನೀಡಲಿದ್ದಾರೆ.  ೧೧ಕ್ಕೆ ಸರಿಯಾಗಿ ರಾಜ್ಯಪಾಲರ ಭಾಷಣ ಆರಂಭವಾಗಲಿದೆ. ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ. ಸರ್ಕಾರದ ಸಾಧನೆ,ಮುಂದಿನ ಗುರಿಗಳ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ರಾಜ್ಯದ ಜನರಿಗೆ ಸರ್ಕಾರದ ಯೋಜನೆಗಳನ್ನು  ಸವಿಸ್ತಾರವಾಗಿ ರಾಜ್ಯಪಾಲರು ಪ್ರಸ್ತಾಪಿಸಲಿದ್ದಾರೆ. 

ಇಂದು ಯಾವುದೇ ಚರ್ಚೆ ಸಾಧ್ಯತೆ ಕಡಿಮೆ :
ರಾಜ್ಯಪಾಲರ ಭಾಷಣದ ನಂತರಅಗಲಿದ ಗಣ್ಯರಿಗೆ ಸದನ  ಸಂತಾಪ ಸೂಚಿಸಲಿದೆ. ಸಂತಾಪ ನಿರ್ಣಯ ಮಂಡಿಸಿದ ಬಳಿಕ ಸದನ ಮುಂದೂಡುವ ಸಾಧ್ಯತೆ ಇದೆ. 

ಇದನ್ನೂ ಓದಿ :  D.K.Shivakumar: ವಿನಯ್‌ ಗುರೂಜಿ ಜೊತೆ 20 ನಿಮಿಷ ಮಾತುಕತೆ ನಡೆಸಿದ ಡಿ.ಕೆ.ಶಿವಕುಮಾರ್

ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಬ್ರಹ್ಮಾಸ್ತ್ರ :
ಕೃಷಿ ಕಾನೂನು, ಕರೋನಾ ಪರಿಹಾರ, ಸರಕಾರದಲ್ಲಿ ಗೊಂದಲ, ಖಾತೆ ಹಂಚಿಕೆಯಲ್ಲಿ ಸರ್ಕಸ್, ಗೋಹತ್ಯೆ ನಿಷೇಧ ಸುಗ್ರೀವಾಜ್ಞೆ, ಭ್ರಷ್ಟಾಚಾರ ಮೊದಲಾದ ವಿಚಾರಗಳಲ್ಲಿ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ದವಾಗಿವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಈ ಹಿನ್ನೆಲೆಯಲ್ಲಿ ಸರ್ವ ತಯಾರಿ ಮಾಡಿಕೊಂಡಿದ್ದು, ಈ ಸಲದ ಸದನ ಕಲಾಪ ಕದನ ಕೋಲಾಹಲವಾಗುವ ಎಲ್ಲಾ ಸಾಧ್ಯತೆಗಳಿವೆ. 

ಪರಿಷತ್ ಪ್ರಾಬಲ್ಯಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್ :
ವಿಧಾನ ಪರಿಷತ್ತಿನಲ್ಲಿ ಸಂಖ್ಯಾಬಲದ ವಿಚಾರದಲ್ಲಿ ಬಿಜೆಪಿ ದುರ್ಬಲವಾಗಿದೆ. ಆದರೆ, ಈ ಸಲ ಜೆಡಿಎಸ್ ಅದರ ನೆರವಿಗೆ ಬಂದಿದೆ. ಆದರೆ, ಬಸವರಾಜ್ ಹೊರಟ್ಟಿ ಅವರನ್ನು ಪರಿಷತ್ ಅಧ್ಯಕ್ಷರಾಗಿ ನೇಮಿಸಬೇಕೆಂಬ ಶರತ್ತು ಮುಂದಿಟ್ಟಿದೆ. ಇದು ಬಹುತೇಕ ವರ್ಕೌಟ್ ಆಗುವ ಸಾಧ್ಯತೆ ಇದೆ.  ಬಿಜೆಪಿ, ಜೆಡಿಎಸ್ ಸೇರಿ ಪರಿಷತ್ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪದಚ್ಯುತಗೊಳಿಸುವ ಸಾಧ್ಯತೆಗಳಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News