ನವದೆಹಲಿ: ಸಚಿವ ಡಾ.ಸುಧಾಕರ್ ನೀಡಿರುವ ಉದ್ದಟತನದ ಹೇಳಿಕೆಯಿಂದ ವಿಧಾನಸಭಾ ಸಭಾಧ್ಯಕ್ಷರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಸೇರಿದಂತೆ ರಾಜ್ಯದ 225 ಶಾಸಕರ ಮಾನಹಾನಿಯಾಗಿದೆ ಎಂದು ಸಿದ್ಧರಾಮಯ್ಯ ಆರೋಪಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಮೇಶ್ ಜಾರಕಿಹೊಳಿ (Ramesh Jarakiholi) ಯವರಿಗೆ ಸಂಬಂಧಿಸಿದ ಸಿಡಿ ಹಗರಣದ ಜೊತೆ ಈ ಆರೋಪದ ಬಗ್ಗೆಯೂ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ತನಿಖೆ ನಡೆಸಿ ಸತ್ಯಸಂಗತಿಯನ್ನು ಬಹಿರಂಗ ಪಡಿಸಬೇಕು.


ಇದನ್ನೂ ಓದಿ: ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ವಿಚಾರಣೆ ನಡೆಸಿದ ಎಸ್‍ಐಟಿ


ಕಾನೂನಿನ ಹೋರಾಟದ ಮೂಲಕ ಈ ಪ್ರಕರಣವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸುತ್ತಿದ್ದೇವೆ. ಇಂತಹ ನಿಂದನಾತ್ಮಕ ಹೇಳಿಕೆ ನೀಡಿರುವ ಸಚಿವ ಡಾ.ಸುಧಾಕರ್ ವಿರುದ್ದ ಪ್ರತ್ಯೇಕವಾಗಿ ಮಾನನಷ್ಟ ಮೊಕದ್ದಮೆ ಹಾಕಬೇಕು ಎಂದು ಕೆಲವು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯದೆ ನಾವು ಬಿಡುವುದಿಲ್ಲ ಎಂದು ಹೇಳಿದರು.


ಇದನ್ನೂ ಓದಿ: Ramesh Jarakiholi : ರಾಸಲೀಲೆ ಪ್ರಕರಣದಲ್ಲಿ ಮಹತ್ವದ ತಿರುವು, ರಮೇಶ್ ಜಾರಕಿಹೊಳಿ ರಾಜೀನಾಮೆ


ಸುಧಾಕರ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲ, ಅವರೊಬ್ಬ ಜನಪ್ರತಿನಿಧಿ ಮತ್ತು ಸಚಿವ. ಇಂತಹವರು ನಾಲಿಗೆ ಸಡಿಲು ಬಿಟ್ಟು ಬೇರೆ ಜನಪ್ರತಿನಿಧಿಗಳನ್ನು ನಿಂದಿಸಿರುವುದು ಸ್ಪಷ್ಟವಾಗಿ ಸದಸ್ಯರ ವಿಶೇಷ ರಕ್ಷಣೆಯ (Privilage) ಉಲ್ಲಂಘಣೆಯಾಗಿದೆ. ಸುಧಾಕರ್ ಸ್ಥಿತಿ ತಾ ಕಳ್ಳ ಇತರರನ್ನು ನಂಬ ಎಂಬಂತಾಗಿದೆ ಎಂದು ಕಿಡಿಕಾರಿದರು.


ಇದನ್ನೂ ಓದಿ: CD case : ಅಪರಾಧಿ ನಾನಲ್ಲ..! ಅಪರಾಧ ಎಸಗಿಲ್ಲ.!ಸ್ಫೋಟಕ ಮಾಹಿತಿ ನೀಡಿದ ಜಾರಕಿಹೊಳಿ


ಪುರುಷಪ್ರಧಾನ ಸಮಾಜದಲ್ಲಿ ಪುರುಷ ಶಾಸಕರು ಇಂತಹ ಆರೋಪಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಲ್ಲರು. ಆದರೆ ಮಹಿಳಾ ಶಾಸಕರಿಗೆ ಇಂತಹ ಸುಳ್ಳು ಆರೋಪಗಳು ಬಹಳ ಹಾನಿ ಉಂಟುಮಾಡುತ್ತದೆ. ಅವರು ಮನೆಯಲ್ಲಿ ಕುಟುಂಬದವರನ್ನು ಹೇಗೆ ಎದುರಿಸಬೇಕು? ಇಂತಹ ಕೀಳು ಮನಸ್ಸಿನ ಪುರುಷ ರಾಜಕಾರಣಿಗಳ ಕಾರಣದಿಂದಾಗಿಯೇ ರಾಜಕೀಯ ಪ್ರವೇಶಕ್ಕೆ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ