ಬೆಂಗಳೂರು : ರಾಜ್ಯದಲ್ಲಿ ಪಾಸಿಟಿವಿಟ್ ದರ ಶೇ.2 ರಷ್ಟು ಸಹ ಇಲ್ಲ, ಸರ್ಕಾರದ್ದು ಸುಳ್ಳು ಲೆಕ್ಕ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ಕೆ ಸುಧಾಕರ್ ಕೋವಿಡ್ ಬಗ್ಗೆ ಡಿಕೆಶಿಗೆ ಮಾಹಿತಿಯ ಕೊರತೆ ಇದೆ, ಡಿಕೆಶಿ ಆರೋಪಕ್ಕೆ ನಾನು ಏನೂ ಮಾತಾಡಲ್ಲ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ನಗರದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಸಚಿವ ಕೆ ಸುಧಾಕರ್(K Sudhakar), ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡ್ತಿದೆ, ಇಡೀ‌ ವಿಶ್ವದಲ್ಲಿ ಯಾವ ವಿರೋಧ ಪಕ್ಷವೂ ಸರ್ಕಾರದ ಕೋವಿಡ್ ನಿಯಂತ್ರಣ ಟೀಕಿಸಿಲ್ಲ.ಇಡೀ ವಿಶ್ವದಲ್ಲಿ ವಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕಲು ಹೋಗಿಲ್ಲ. ಎಲ್ಲ ಕಡೆಯೂ ವಿಪಕ್ಷಗಳು ಸರ್ಕಾರದ ಜತೆ ಕೈ ಜೋಡಿಸಿವೆ. ನಮ್ಮಲ್ಲಿ ವಿಪಕ್ಷ ಕಾಂಗ್ರೆಸ್ ರಾಜಕಾರಣ ಮಾಡ್ತಿದೆ ಎಂದು ಆರೋಪಿಸಿದರು.


ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ : ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್!


ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆ ದುರದೃಷ್ಟಕರ. ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತ ಕರೆಯಕ್ಕಾಗುತ್ತಾ? ಮುಂದೊಂದು ದಿನ ಇವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಇವರಿಗೆ ಹೇಗೆ ಅನ್ಸುತ್ತೆ? ಇದರ ಕನಿಷ್ಟ ತಿಳುವಳಿಕೆ ಅವರಿಗೆ ಇರಬೇಕಿತ್ತು.


ಕಾಂಗ್ರೆಸ್ ನವರು ಕುದುರೆ ರೇಸ್ ಆದರೂ‌ ಮಾಡಲಿ, ಮ್ಯಾರಥಾನ್ ಆದರೂ ಮಾಡಲಿ. ಈಗಾಗಲೇ ಅವರು ಜಟಕಾ ಗಾಡಿ, ಎತ್ತಿನ‌ ಗಾಡಿ, ಸೈಕಲ್ ನಲ್ಲಿ ಹೋಗಿದಾರೆ. ಈಗ ರೈಲಲ್ಲಾದರೂ ಹೋಗಲಿ, ಬಸ್ ನಲ್ಲಾದರೂ ಹೋಗಲಿ, ಟ್ರೆಕ್ಕಿಂಗ್ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು, ಮಾಡೋದನ್ನು ಮಾಡಲಿ, ಸಮಯ ನೋಡಿ ಮಾಡಲಿ ಎಂದು ಕಾಂಗ್ರೆಸ್ ವ್ಯಂಗಿಸಿದರು


ಸಚಿವ ಆರ್ ಅಶೋಕ್(R Ashok) ಕೊರೋನಾ ಪಾಸಿಟಿವ್ ವಿಚಾರವಾಗಿ ಮಾತನಾಡಿದ ಸಚಿವ ಕೆ ಸುಧಾಕರ್, ನಾನು ಅಶೋಕ್ ಪ್ರೈಮರಿ‌ ಕಾಂಟ್ಯಾಕ್ಟ್ ಅಲ್ಲ, ನಾನು ಅಶೋಕ್ ಅವರನ್ನು ಮೀಟ್ ಮಾಡಿಯೇ ಹತ್ತು ದಿನ ಆಗಿದೆ.


ಮೊನ್ನೆ ಅಶೋಕ್ ಜತೆ ತಜ್ಞರ ಸಭೆಯಲ್ಲಿದ್ರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಕೆ ಸುಧಾಕರ್, ಆವತ್ತು‌ ನಾನು ಇರಲಿಲ್ಲ ಎಂದು ಹೇಳಿ ಬಳಿಕ, ಆವತ್ತು ನಾನೂ ಮಾಸ್ಕ್ ಹಾಕಿದ್ದೆ, ಅವರೂ ಮಾಸ್ಕ್ ಹಾಕಿದ್ರು ಎಂದರು. 


ಇದನ್ನೂ ಓದಿ : ಕಾಂಗ್ರೆಸ್ಸಿಗರು ಅಂದು ನಿದ್ದೆ ಮಾಡಿ ಇಂದು ಸುಳ್ಳಿನ ಜಾತ್ರೆ ಮಾಡ್ತಿದ್ದಾರೆ: ಬಿಜೆಪಿ


ಎರಡು ದಿನಗಳ ಹಿಂದೆ ನಾನೂ ಮತ್ತು ಸಿಎಂ ಟೆಸ್ಟ್ ಮಾಡಿಸಿದೀವಿ, ನೆಗೆಟಿವ್ ಬಂದಿದೆ ಬೇಕಿದ್ರೆ ಸರ್ಟಿಫಿಕೇಟ್ ಇದೆ ನೋಡಿ. ನಾನು ಇಲ್ಲೀವರೆಗೂ 50-60 ಸಲ ಟೆಸ್ಟ್ ಮಾಡಿಸಿದೀನಿ. ನಿಮ್ಮೆಲ್ಲರ ಹಾರೈಕೆಯಿಂದ ಪಾಸಿಟಿವ್ ಆಗಿಲ್ಲ ಎಂದು ಸಮರ್ಥನೆ ನೀಡಿದರು.


ಕೋವಿಡ್ ವೇಳೆ ಸ್ವಿಮ್ಮಿಂಗ್ ಮಾಡಿದ ಸುಧಾಕರ್ ವಿರುದ್ಧ ಕ್ರಮ ಕೈಗೊಳ್ಳಲಿ ಎಂಬ ಸಿದ್ದರಾಮಯ್ಯ(Siddaramaiah) ಆರೋಪ ವಿಚಾರವಾಗಿ ಮಾತನಾಡಿದ ಅವರು, ಯಾವಾಗ ಹೇಳಿದರು ಅವರು? ಅವರರವರ ಮನೆಯಲ್ಲಿ ಮಾಡೋದಿಕ್ಕೆ ನಿಯಮ ತೂರಿದ ಹಾಗಲ್ಲ. ಸಿದ್ದರಾಮಯ್ಯ ಅಜ್ಞಾನಕ್ಕೆ ನನ್ನ ಮರುಕ ಇದೆ ಎಂದರು.


ವೀಕೆಂಡ್  ಕರ್ಫ್ಯೂ ಬಗ್ಗೆ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ವಿಧಿಸಿರುವುದು ಜನರಿಗೆ ಹೊಸ ಪ್ರಭೇದ ಹರಡದಂತೆ ಮಾಡಲು ಕ್ರಮ ಕೈಗೊಂಡಿದ್ದೇವೆ.ಜನರಲ್ಲಿ ಒಂದು ಶಿಸ್ತು ಬರಲಿ ಅಂತಾ ಮಾಡಿದ್ದೇವೆ.ಇದೇನೂ ಲಾಕ್ ಡೌನ್ ಅಲ್ಲ.ಆದಷ್ಟು ಜನರು ಎರಡು ದಿನ ಮನೆಯಲ್ಲಿ ಇದ್ದು ಮಾರ್ಗಸೂಚಿ ಪಾಲಿಸಿದರೆ ನಿಯಂತ್ರಣ ಆಗಬಹುದು.


ಇದನ್ನೂ ಓದಿ : Weekend Curfew: ವಿರೋಧದ ಮಧ್ಯೆಯೂ ವಾರಾಂತ್ಯ ಕರ್ಫ್ಯು ಜಾರಿ, ಅನಾವಶ್ಯಕ ಓಡಾಟದ ಮೇಲೆ ಖಾಕಿ ಕಣ್ಣು!


ಬೆಂಗಳೂರಿನಲ್ಲಿ ಶೇ.7.55 ಪಾಸಿಟಿವಿಟಿ ದರ ಇದೆ. ಐದಾರು ಜಿಲ್ಲೆಗಳಲ್ಲಿ ಕೇಸ್ ಗಳ ಸಂಖ್ಯೆ ಜಾಸ್ತಿ ಆಗ್ತಿದೆ. ಮೊದಲನೇ ಎರಡನೇ ಅಲೆಗಳಲ್ಲಿ ನಾವು ಬಹಳ ಅನುಭವಿಸಿದ್ದೇವೆ. ಎಲ್ಲಾ ತಿಳಿದೂ ಯಾವ ಕ್ರಮ ಕೂಡಾ ತೆಗೆದುಕೊಳ್ಳದೇ ಇರೋದು ಸರಿಯಲ್ಲ. ಹಾಗಾಗಿ ಮೊದಲಿನಿಂದಲೇ ನಿಯಂತ್ರಣ ಮಾಡಬೇಕು ಅಂತಾ ಕ್ರಮಗಳನ್ನು ತೆಗೆದುಕೊಳ್ತಾ ಇದೀವಿ ಎಂದು ಹೇಳಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.