ಮಂಡ್ಯ : ಕ್ಷೇತ್ರ ತ್ಯಾಗ ಮಾಡಿ ತನು, ಮನ, ಧನ ನೀಡ್ತೇನೆ ಎಂದು ರೇಷ್ಮೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣ್ ಗೌಡ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ನಿನ್ನೆ ನೆಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವ ನಾರಾಯಣ್ ಗೌಡ, ಬಿಜೆಪಿ ಪಕ್ಷದಿಂದ ಯಾರಾದ್ರು ಸ್ಪರ್ಧೆ ಮಾಡುವುದಾದರೆ, ನಾನು ತನು,ಮನ,ಧನ ಅರ್ಪಿಸುತ್ತೇನೆ. ಈ ದೇಹದಲ್ಲಿ ಉಸಿರು ಇರುವವರೆಗೂ ಈ ತಾಲೂಕಿನ ಅಭಿವೃದ್ಧಿಗೆ ಸೇವಕನಾಗಿ ಕೆಲಸ ಮಾಡ್ತೇನೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ: ಸಿಎಂ ಬೊಮ್ಮಾಯಿ


ಕಳೆದ ಉಪಚುನಾವಣೆಯಲ್ಲಿ ನಾರಾಯಣ್ ಗೌಡ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದರು. ಎರಡೂ ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಶಸ್ತ್ರತ್ಯಾಗದ ಮಾತು ಆಡಿದ್ದಾರೆ. ಸೋಲಿನ ಭಯದಲ್ಲಿ ಕ್ಷೇತ್ರ ತ್ಯಾಗಕ್ಕೆ ಸಚಿವ ನಾರಾಯಣ್ ಗೌಡ ಮುಂದದ್ರಾ? ಎಂಬ ಪ್ರಶ್ನೆ ಮೂಡಿದೆ.


ಕಾಂಗ್ರೆಸ್ ಪಕ್ಷದಿಂದ ಎರಡೂ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದರು. ಇದೀಗ ಸಾಮಾನ್ಯರಿಗೆ ಕ್ಷೇತ್ರ ಬಿಟ್ಟುಕೊಡಲು ನಾರಾಯಣ್ ಗೌಡ ಸಿದ್ದರಾಗಿದ್ದಾರೆ. ಹೀಗಾಗಿ, ನಾರಾಯಣ್ ಗೌಡ ನಿಜವಾಗಿಯೂ ಸಾಮಾನ್ಯ ಕಾರ್ಯಕರ್ತನಿಗೆ ಕ್ಷೇತ್ರ ಬಿಟ್ಟು ಕೊಟ್ಟು ಬೆನ್ನಿಗೆ ನಿಲ್ಲುತ್ತಾರೆ? ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.


ಇದನ್ನೂ ಓದಿ : New Year Hug: ಎಂಜಿ ರೋಡ್‍ನಲ್ಲಿ ಹುಡುಗಿಯ Free ಹಗ್‍ಗೆ ಮುಗಿಬಿದ್ದ ಯುವಕರು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.