ಬೆಂಗಳೂರು: ಬೆಂಗಳೂರಿನ ಜನರು ಅದ್ದೂರಿಯಾಗಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಹೊಸ ವರ್ಷದ ಪ್ರಯುಕ್ತ ಶನಿವಾರ ರಾತ್ರಿ ಬ್ರಿಗೇಡ್ ರಸ್ತೆ, ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್ ಜನರಿಂದ ಕಿಕ್ಕಿರಿದು ತುಂಬಿತ್ತು. ಸಾವಿರಾರು ಜನರು ಜಮಾಯಿಸಿ ಹೊಸ ವರ್ಷವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಸ್ವಾಗತಿಸಿದರು. ಹೊಸ ವರ್ಷಾಚರಣೆ ಸಂಭ್ರಮದ ಮಧ್ಯೆಯೇ ಯುವತಿಯೊಬ್ಬಳಿಗೆ ಉಚಿತ ಅಪ್ಪುಗೆ ಫಜೀತಿ ತಂದ ಘಟನೆ ನಡೆದಿದೆ.
ಹೌದು, ಬ್ರಿಗೇಡ್ ರಸ್ತೆಯಲ್ಲಿ ಶನಿವಾರ ನಿಂತುಕೊಂಡಿದ್ದ ಯುವತಿಯೊಬ್ಬಳು ‘Free Hug’ ಫಲಕ ಹಿಡಿದುಕೊಂಡು ಗಮನ ಸೆಳೆದಳು. ಯಾರೂ ಬೇಕಾದರೂ ಬಂದು ತನ್ನನ್ನು ಫ್ರೀಯಾಗಿ ಹಗ್ ಮಾಡಬಹುದು ಎಂದು ಯುವಕ-ಯುವತಿಯರಿಗೆ ಆಹ್ವಾನ ನೀಡಿದ್ದಳು. ಯುವತಿಯ ಉಚಿತ ಅಪ್ಪುಗೆಯ ಫಲಕವನ್ನು ನೋಡಿದ ಅನೇಕ ಯುವಕರು ಹಗ್ ಮಾಡಲು ಮುಗಿಬಿದ್ದಿದರು.
ಇದನ್ನೂ ಓದಿ: New Year Resolutions : ಹೊಸ ವರ್ಷಕ್ಕೆ ನೀವು ತಪ್ಪದೆ ಮಾಡಬೇಕು ಈ 5 ದೃಢಸಂಕಲ್ಪಗಳನ್ನು!
ಫ್ರೀ ಹಗ್ ಫಲಕ ಹಿಡಿದಿದ್ದ ಯುವತಿಗೆ ಯುವಕ-ಯುವತಿಯರು ಒಬ್ಬೊಬ್ಬರಾಗಿ ಬಂದು ಅಪ್ಪಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಇದನ್ನು ಕಂಡಕೂಡಲೇ ಪೊಲೀಸರು ಹಗ್ ನೀಡಲು ಸರದಿಯಲ್ಲಿ ನಿಂತಿದ್ದ ಯುವಕ-ಯುವತಿಯರನ್ನು ಬೆದರಿಸಿ ಸ್ಥಳದಿಂದ ಹೋಗುವಂತೆ ಹೇಳಿದರು.
ಈ ವೇಳೆ ಫ್ರೀ ಹಗ್ ಬೋರ್ಡ್ ಹಿಡಿದುಕೊಂಡಿದ್ದ ಯುವತಿ ಕೆಲಕಾಲ ಗಲಿಬಿಲಿಗೊಂಡರು. ಅಪ್ಪಿಕೊಳ್ಳಲು ಬಂದಿದ್ದ ಯುವಕ-ಯುವತಿಯರು ಪೊಲೀಸರನ್ನು ಕಂಡು ಸ್ಥಳದಿಂದ ಕಾಲ್ಕಿತ್ತರು. ಫಲಕ ಹಿಡಿದು ನಿಂತಿದ್ದ ಯುವತಿಗೆ ಬುದ್ದಿವಾದ ಹೇಳಿದ ಪೊಲೀಸರು ಸ್ಥಳದಿಂದ ತೆರಳುವಂತೆ ಸೂಚಿಸಿದರು.
ಇದನ್ನೂ ಓದಿ: New Year 2023 Astro Tips: ನೀರಿಗೆ ಸಂಬಂಧಿಸಿದ ಈ ಉಪಾಯ ನಿಮ್ಮ ಮನೆಯ ಎಲ್ಲಾ ದೋಷಗಳನ್ನು ತೊಳೆದು ಹಾಕಲಿದೆ
ಸ್ನೇಹಿತರ ಜೊತೆಗೆ ಹೊಸ ವರ್ಷಾಚರಣೆಗೆ ಬ್ರಿಗೇಡ್ ರಸ್ತೆಗೆ ಬಂದಿದ್ದ ಯುವತಿ ಫ್ರೀ ಹಗ್ ಬೋರ್ಡ್ ಹಿಡಿದುಕೊಂಡು ಕೆಲಕಾಲ ಗಮನ ಸೆಳೆದರು. ಬಳಿಕ ಪೊಲೀಸರಿಂದ ಫಜೀತಿ ಅನುಭವಿಸಿ ಸ್ಥಳದಿಂದ ಎಸ್ಕೇಪ್ ಆದಳು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.