ಬೆಂಗಳೂರು : ರಾಜ್ಯದಲ್ಲಿ ಹಲಾಲ್ ಮಾಂಸ ವಿವಾದ ಬುಗಿಲೆದಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಗಂಡಸ್ತನದ ಬಗ್ಗೆ ಕುಮಾರಸ್ವಾಮಿ ಪ್ರಶ್ನೆಗೆ ಸಚಿವ ಕೆಎಸ್ ಈಶ್ವರಪ್ಪ, ಗಂಡಸ್ತನ ಯಾವ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ. ಒಂದು ಕಡೆ ಬಳಸಬೇಕೋ, ಎರಡು ಕಡೆ ಬಳಸಬೇಕೋ, ಮೂರು ಕಡೆ ಬಳಸಬೇಕೋ ಎಂಬುದು ಅವರಿಗೆ ಗೊತ್ತು ಎಂದು ಟಾಂಗ್ ನೀಡಿದರು.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೆಎಸ್ ಈಶ್ವರಪ್ಪ(KS Eshwarappa), ಈ ಹಲಾಲ್, ಜಟ್ಕಾ ಕಟ್ ಅಂದರೆ ಏನು ಅಂತನೇ ನನಗೆ ಗೊತ್ತಿಲ್ಲ. ನಾನೂ ಈ ವಿಷಯದ ಬಗ್ಗೆ ಪತ್ರಿಕೆಯ ಮೂಲಕ ನೋಡಿದ್ದೇನೆ. ಹಿಂದೂ ಸಂಪ್ರದಾಯದಂತೆ ಪ್ರಾಣಿ ಹತ್ಯೆಯಾಗಲಿ ಎಂಬುದು ನನ್ನ ಅಭಿಪ್ರಾಯ. ಆದರೆ ಮುಸಲ್ಮಾನರಿಗೆ ಒಂದು ಅಭಿಪ್ರಾಯ ಇದೆ, ಅವ್ರು ಅದನ್ನು ನಡೆಸಿಕೊಂಡು ಹೋಗಲಿ. ಇವರು ಇದನ್ನು ನಡೆಸಿಕೊಂಡು ಹೋಗಲಿ,ಅದು ಅವರವರ ಇಷ್ಟ ಅಷ್ಟೇ ಎಂದರು.


ಇದನ್ನೂ ಓದಿ : Congress Protest : ಪೆಟ್ರೋಲ್-ಡಿಸೇಲ್, ಗ್ಯಾಸ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ!


ಮುಸಲ್ಮಾನರು(Muslim) ಹಿಂದೂಗಳ ಬಳಿ ಹೋಗಿ ಖರೀದಿ ಮಾಡಬೇಡಿ ಅನ್ನೋಕೆ ಅವರಿಗೆ ಏನು ಹಕ್ಕು ಇಲ್ಲ, ಒಬ್ರು ಮುಖ್ಯಮಂತ್ರಿ ಯಾದಂತವರು, ಮತ್ತೊಬ್ಬ ಮುಖ್ಯಮಂತ್ರಿ ಗಂಡಸ್ತನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ. ಅವರು ಒಬ್ರು ಹಿರಿಯ ರಾಜಕಾರಣಿ, ಗಂಡಸ್ತನ ಮಾಡುವ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಹಾಗೂ YouTube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.