ಮಂಡ್ಯ : ಉರಿಗೌಡ ದೊಡ್ಡನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಸಚಿವ ಮುನಿರತ್ನ ಹಿಂದೆ ಸರಿದಿದ್ದಾರೆ. 


COMMERCIAL BREAK
SCROLL TO CONTINUE READING

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ನಾಥ ಸ್ವಾಮೀಜಿಯವರ ಜೊತೆ ಮಾತುಕತೆ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 


ಇನ್ನು ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಭಾನುವಾರ ನಾನು ಜಾಯಿರಾತ್ ಕೊಟ್ಟಿದ್ದೆ. ಮೇ18ಕ್ಕೆ ಚಿತ್ರ ಮಾಡಲು ನಿರ್ಧರಿಸಿದ್ದೆ. ಕುರುಕ್ಷೇತ್ರದ ಬಳಿಕ ದೊಡ್ಡ ಮಟ್ಟದ ಪೌರಾಣಿಕ ಚಿತ್ರ ಮಾಡಲು ನಿರ್ಧಾರ ಮಾಡಿದ್ದೆ.ಕುಮಾರಸ್ವಾಮಿ, ಅಶ್ವಥ್ ನಾರಾಯಣ್ ಸಿನಿಮಾ ಮಾಡಲು ಮುನಿರತ್ನ ಗೆ ಹೇಳಿರಬೇಕು ಎಂದ್ರು ಹಿಗಾಗಿ ಚಿತ್ರ ಮಾಡಲು ಚಿಂತನೆ ಮಾಡಿದೆ. ಚಿತ್ರ ಮಾಡಲು ಸ್ವಾಮಿಜಿ ಜೊತೆ ಚೆರ್ಚೆ ಮಾಡಿದೆ. ಚೆರ್ಚೆ ಬಳಿಕ ಬೇರೆಯವ್ರ ಮನಸ್ಸಿಗೆ ನೋವು ಮಾಡೋದು ಬೇಡ ಅಂತ ಅಂದ್ಕೊಂಡಿದಿನಿ. ಯಾರಿಗೂ ನೋವುಂಟು ಮಾಡುವ ಸಿನಿಮಾ ಮಾಡಲ್ಲ ಎಂದು ಸ್ವಾಮಿಜಿಗೆ ಹೇಳಿದ್ದೇನೆ. ನಾನು ಬೇರೆ ಕಥೆ ಹುಡುಕಿಕೊಳ್ತಿನಿ. ಇದರ ಬಗ್ಗೆ ನಾನು ಇನ್ಮುಂದೆ ಯಾವುದೇ ಕಾರಣಕ್ಕು ಮಾತನಾಡಲ್ಲ. ಶ್ರೀಗಳು ನೈಜತೆ ಬಗ್ಗೆ ನೋಡಿ ಸಿನಿಮಾ ಮಾಡಿ ಎಂದಿದ್ದಾರೆ. ಹೀಗಾಗಿ, ಉರಿಗೌಡ ನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Uri Gowda Nanje Gowda Movie : 'ಉರಿಗೌಡ ನಂಜೇಗೌಡ ಸಿನಿಮಾದಲ್ಲಿ ನನ್ನ ಪಾತ್ರವಿಲ್ಲ'


ಜಿಲ್ಲೆಯ ಕೊಮ್ಮೇರಹಳ್ಳಿ ಮಠದಲ್ಲಿ ಸಚಿವ ಮುನಿರತ್ನ ಜೊತೆ ನಿರ್ಮಲಾನಂದ ನಾಥ ಸ್ವಾಮೀಜಿಯವರು ಮಾತುಕತೆ ನಡೆಸಿದರು. ಈ ಬಳಿಕ ಮಾತನಾಡಿದ ಸ್ವಾಮೀಜಿಗಳು, ಸಚಿವ ಮುನಿರತ್ನರ ಉರಿನಂಜೇಗೌಡ ದೊಡ್ಡ ನಂಜೇಗೌಡ ಚಿತ್ರ ನಿರ್ಮಾಣ  ವಿಚಾರದಲ್ಲಿ ಸಚಿವ ಮಾತುಕತೆ ಮಾಡಿದ್ದೇನೆ. ಒಕ್ಕಲಿಗ ಜನಾಂಗದ ಅಸ್ಮಿತೆಯಿಂದಾಗಿ ಈ ಚಿತ್ರ ನಿರ್ಮಾಣ ಮಾಡದಂತೆ ಹೇಳಿದ್ದೇನೆ. ಈ ಚಿತ್ರ ನಿರ್ಮಾಣಕ್ಕೆ ಸರಿಯಾದ  ಐತಿಹಾಸಿಕ ದಾಖಲೆಗಳಿಲ್ಲ ಇದರಿಂದ ನಮ್ಮ ಸಮಾಜದ ಅಸ್ಮಿತೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದ್ದಾನೆ. ಈ ವಿಚಾರದಲ್ಲಿ ಸಚಿವ ಮುನಿರತ್ನ‌ ಕೂಡ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ. ಯಾರಿಗೂ ನೋವು ಉಂಟು ಮಾಡುವ ಉದ್ದೇಶವಿಲ್ಲ ಎಂದು ಅವರು‌ ಕೂಡ ಸ್ಪಷ್ಟಪಡಿಸಿದ್ದಾರೆ‌. ನಿಮ್ಮ ನಿರ್ದೇಶನದ ಮೇರೆಗೆ ಚಿತ್ರ ನಿರ್ಮಾಣ ‌ಮಾಡುವುದಿಲ್ಲ ಎಂದಿದ್ದಾರೆ ಎಂದು ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.