ಬೆಂಗಳೂರು : ನಾನು ಕೂಡ ಒಬ್ಬ ಬೆಂಗಳೂರಿನ ನಾಗರಿಕನಾಗಿ ಲಾಕ್​ಡೌನ್​ ಮುಂದುವರಿಯಲಿ ಎಂದೇ ಬಯಸುತ್ತೇನೆ ಎಂದು ಕಂದಾಯ ಸಚಿವ ಆರ್​. ಅಶೋಕ್ ರಾಜ್ಯದಲ್ಲಿ ಲಾಕ್​ಡೌನ್​ ಮತ್ತೆ ಮುಂದುವರಿಯುವ ಸುಳಿವು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಈ ವಿಚಾರವಾಗಿ ಮಾತನಾಡಿದ  ಸಚಿವ ಆರ್​. ಅಶೋಕ್(R Ashok),​ ಪ್ರಸ್ತುತ ಸನ್ನಿವೇಶದಲ್ಲಿ ರಾಜ್ಯದಲ್ಲಿ ಲಾಕ್​ಡೌನ್ ಮುಂದುವರಿಯುವ ಅವಶ್ಯಕತೆ ಇದೆ. ಹೀಗಾಗಿ ನಾನು ಸಿಎಂಗೆ ಲಾಕ್​​ಡೌನ್ ಮುಂದುವರಿಸುವ ಬಗ್ಗೆಯೇ ಸಲಹೆಯನ್ನ ನೀಡಲಾಗಿದೆ ಎಂದರು.


ಇದನ್ನೂ ಓದಿ : ನರೇಂದ್ರ ಮೋದಿ ಹಾಗೂ ಯಡಿಯೂರಪ್ಪನವರ ಸರ್ಕಾರ ನಿದ್ರಾವಸ್ಥೆಯಲ್ಲಿವೆ-ಸಿದ್ದರಾಮಯ್ಯ


ಮಹಾರಾಷ್ಟ್ರದಲ್ಲಿ 47 ದಿನಗಳ ಕಾಲ ಲಾಕ್​ಡೌನ್​ ಮಾಡಲಾಗಿತ್ತು. ದೆಹಲಿಯಲ್ಲಿ ಈಗಲೂ ಸಹ ಲಾಕ್​ಡೌನ್(Lockdown)​ ಆದೇಶ ಜಾರಿಯಲ್ಲಿದೆ. ರಾಜ್ಯದಲ್ಲೂ ಸೆಮಿ ಲಾಕ್​ಡೌನ್​ ಹಾಗೂ ಲಾಕ್​ಡೌನ್​ ಆದೇಶದ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ. ಲಾಕ್​ಡೌನ್​ ಆದೇಶವನ್ನ ಮೊದಲು ವಿಪಕ್ಷಗಳು ಗೇಲಿ ಮಾಡಿದ್ದವು. ಆದರೆ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗುವಲ್ಲಿ ಲಾಕ್​ಡೌನ್​ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Congress : ಕೋವಿಡ್ ಲಸಿಕೆ ಖರೀದಿಗೆ ₹ 100 ಕೋಟಿ ನೆರವು ನೀಡಿದ ಕರ್ನಾಟಕ ಕಾಂಗ್ರೆಸ್..!


ರಾಜ್ಯದಲ್ಲಿ ಕೊರೋನಾ ಲಾಕ್​ಡೌನ್​ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ(Karnataka Govt) ಮೇ 24ರವರೆಗೆ ಲಾಕ್​ಡೌನ್​ ಆದೇಶವನ್ನ ಜಾರಿಗೆ ತಂದಿದೆ. ಲಾಕ್​ಡೌನ್​ ಬಳಿಕ ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಇಳಿಮುಖವಾಗಿದ್ದು  ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. 


ಇದನ್ನೂ ಓದಿ : Tauktae Cyclone : ತೌಕ್ತೆ ಚಂಡಮಾರುತದಿಂದ ರಾಜ್ಯದ ಹಲವಡೆ ಭಾರೀ ಮಳೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.