`ಕಾಂಗ್ರೆಸ್ ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ’
ಕಾಂಗ್ರೆಸ್ ಅವರು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಮೋದನೆ ಮಾಡಿತ್ತು ಅವರು ಕಾಂಗ್ರೆಸ್ ಗರ್ವನರ್ ಬಳಿ ಹೋಗಿ ಕಾಯ್ದೆಗೆ ತಡೆಯಿಡಿದರು.
ಬೆಂಗಳೂರು: ಕಾಂಗ್ರೆಸ್ ಅವರು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಮೋದನೆ ಮಾಡಿತ್ತು ಅವರು ಕಾಂಗ್ರೆಸ್ ಗರ್ವನರ್ ಬಳಿ ಹೋಗಿ ಕಾಯ್ದೆಗೆ ತಡೆಯಿಡಿದರು. ಅವರು ಅವತ್ತು ಮಾಡಿದ ಅವಮಾನಕ್ಕೆ ಇವತ್ತು ಸೇಡು ತೀರಿಸಿಕೊಂಡಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್(R.Ashok), ಇದು ಬಿಜೆಪಿ ಪ್ರಣಾಳಿಕೆಯಲ್ಲಿ ಇದೆ ಅದರ ಹಾಗೆ ನಡೆದುಕೊಂಡಿದ್ದೆ ಎಂದರು.
ರಾಜ್ಯಾದ್ಯಂತ ನಾಳೆ ಖಾಸಗಿ ಆಸ್ಪತ್ರೆಗಳ 'OPD' ಬಂದ್..!
ಸದ್ಯ ಪ್ರಜಾಪ್ರಭುತ್ವ ಬಗ್ಗೆ ದೊಡ್ಡ ದೊಡ್ಡ ಮಾತಾಡ್ತಾರೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದೆ ಗವರ್ನರ್ ಬಳಿ ಹೋಗಿ ತಡೆ ಹಿಡಿದ್ದದ್ದು ಯಾಕೆ? ಆ ಸೇಡನ್ನು ನಾವು ನಿನ್ನೆ ಕಾಯ್ದೆ ಪಾಸ್ ಮಾಡಿ ತೀರಿಸಿದ್ದೇವೆ. ವಿಧಾನ ಪರಿಷತ್ನಲ್ಲಿ ಕೂಡ ಈ ಬಿಲ್ ನಾವು ಪಾಸ್ ಮಾಡಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಬಿಜೆಪಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದೆ'