ಬೆಂಗಳೂರು: ಗೋ ಹತ್ಯೆ ಕಾಯ್ದೆಯನ್ನು ಜಾರಿಗೊಳಿಸಿರುವ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ತನ್ನ ತನ್ನ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ಗೋಹತ್ಯೆ ನಿಷೇಧ ಕಾಯ್ದೆ ತರುತ್ತಿದೆ'ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಿಷ್ಟು....
ಕೃಷಿ ಭೂಮಿ ದುಡ್ಡಿರುವವರ ಪಾಲಾಗಲು ಅವಕಾಶ ನೀಡಿರುವ ತಿದ್ದುಪಡಿ ಕೈಬಿಡುವಂತೆ ಸಿದ್ದರಾಮಯ್ಯ ಪತ್ರ
-ಚರ್ಚೆಗೆ ಅವಕಾಶವನ್ನೇ ಕೊಡದೆ, ಮಸೂದೆಯ ಪ್ರತಿಯನ್ನೂ ವಿರೋಧ ಪಕ್ಷಗಳ ಸದಸ್ಯರಿಗೂ ನೀಡದೆ ಗೋಹತ್ಯೆ ನಿಷೇಧ ಮಸೂದೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಯನ್ನು ಖಂಡಿಸಿ ನಾಳೆ ಕಾಂಗ್ರೆಸ್ ಪಕ್ಷ ವಿಧಾನಸಭೆಯ ಕಲಾಪವನ್ನು ಬಹಿಷ್ಕರಿಸಲಿದೆ.
Administration has completely collapsed in the State and there is dissent in @BJP4Karnataka as well. The govt is trying to cover up their failures and misguide people by bringing up issues like Anti-Cow slaughter bill.
4/5
— Siddaramaiah (@siddaramaiah) December 9, 2020
-ಮಂಗಳವಾರ ನಡೆದ ಕಲಾಪ ಸಲಹಾ ಸಮಿತಿಯಲ್ಲಿ ಯಾವ ಮಸೂದೆಯನ್ನೂ ಮಂಡಿಸುವುದಿಲ್ಲ ಎಂದು ಬಿಎಸ್ ವೈ ಹೇಳಿದ್ದರು.ಇಂದಿನ ಕಲಾಪ ಪಟ್ಟಿಯಲ್ಲಿ ಕೂಡಾ ಈ ವಿಷಯ ಉಲ್ಲೇಖಿಸಲಾಗಿಲ್ಲ. ಆದರೆ ಮಧ್ಯಾಹ್ನ ಏಕಾಏಕಿ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿ ಅಂಗೀಕರಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ.
ಮೋದಿ ಎದುರು ಪ್ರವಾಹಕ್ಕೆ ಪರಿಹಾರ ಕೊಡಿ ಅಂತಾ ಕೇಳುವ ಧೈರ್ಯ ಬಿಜೆಪಿಯವರಿಗಿಲ್ಲ, ನಾನೇ ಕೇಳುತ್ತೇನೆ: ಸಿದ್ದರಾಮಯ್ಯ
-ಚರ್ಚೆಯನ್ನು ಎದುರಿಸಲು ಧೈರ್ಯ ಇಲ್ಲದ ಹೇಡಿ ಸರ್ಕಾರ ಮಾತ್ರ ಈ ರೀತಿ ವರ್ತಿಸಲು ಸಾಧ್ಯ. ಈ ರೀತಿಯ ಸರ್ವಾಧಿಕಾರಿ ನಡವಳಿಕೆಯಿಂದ ನಮ್ಮ ಬಾಯಿ ಮುಚ್ಚಿಸಲು ಇವರಿಗೆ ಸಾಧ್ಯವಾಗದು. ಈ ಸರ್ಕಾರದ ಭ್ರಷ್ಟಾಚಾರ ಮತ್ತು ದುಷ್ಟತನವನ್ನು ಬೀದಿಯಲ್ಲಿ ಜನರೊಂದಿಗೆ ನಿಂತು ವಿರೋಧಿಸುತ್ತೇವೆ.
-ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಬಿದ್ದಿದೆ, ಒಂದೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಇನ್ನೊಂದೆಡೆ ಆಂತರಿಕ ಭಿನ್ನಮತದಿಂದಾಗಿ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಈ ಎಲ್ಲ ವೈಫಲ್ಯಗಳನ್ನು ಮುಚ್ಚಿಹಾಕಿ ಜನರ ಗಮನ ಬೇರೆಡೆ ಸೆಳೆಯಲು ರಾಜ್ಯ ಸರ್ಕಾರ ಗೋಹತ್ಯೆ ನಿಷೇಧದಂತಹ ಅನಗತ್ಯ ವಿಷಯಗಳನ್ನು ವಿವಾದವನ್ನಾಗಿ ಮಾಡಲು ಹೊರಟಿದೆ.
-ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷದ ನಾಯಕನನ್ನು ‘Shadow Chief Minister’ ಎನ್ನುತ್ತಾರೆ. ಆದರೆ ಈ ಸರ್ಕಾರದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಮಾತ್ರವಲ್ಲ, ವಿರೋಧ ಪಕ್ಷದ ನಾಯಕನಿಗೂ ಗೌರವ ಇಲ್ಲ. ಕರ್ನಾಟಕದ ವಿಧಾನಮಂಡಲದ ಇತಿಹಾಸದಲ್ಲಿ ಇದೊಂದು ಕಪ್ಪು ದಿನ.