ಬೆಂಗಳೂರು:  ಅದು ಫೇಕ್ ವಿಡಿಯೋವಾಗಿದ್ದು ನಾನೂ ತಪ್ಪೇ ಮಾಡಿಲ್ಲ, ಯಾಕೆ ರಾಜೀನಾಮೆ ನೀಡಬೇಕು? ಹೀಗೆಲ್ಲ ವಿಚಾರ ಮಾಡಿದರೆ ದಿನಕ್ಕೊಂದು ವಿಕೆಟ್ ಬೀಳುತ್ತವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

, Minister, Sex Scandal, Mysore, BJP,


ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ(Ramesh Jarkiholi), ನಾನು ಈಗಾಗಲೇ ಮುಖ್ಯಮಂತ್ರಿ, ಹೈ ಕಮಾಂಡ್ ಜೊತೆ ಮಾತನಾಡಿದ್ದೇನೆ. ನಾನು ತಪ್ಪು ಮಾಡಿಲ್ಲ, ಆ ಯುವತಿ ಯಾರೆಂದು ಗೊತ್ತಿಲ್ಲ. ರಾಜೀನಾಮೆ ನೀಡುವುದಿಲ್ಲ. ಮೊದಲ ಬಾರಿಗೆ ರಾಜಕೀಯ ಷಡ್ಯಂತ್ರದಲ್ಲಿ ಸಿಲುಕಿದ್ದೇನೆ. ದಯವಿಟ್ಟು ಸಹಕರಿಸಿ, ತನಿಖೆ ನಡೆಯಲಿ, ಸತ್ಯ ಬೆಳಕಿಗೆ ಬರುತ್ತೆ ಎಂದರು.


Ramesh Jarkiholi: ಸಾಹುಕಾರನ ರಾಸಲೀಲೆ: ವಿಡಿಯೋ ಶೂಟ್ ಆಗಿದ್ದು ದೆಹಲಿಯ ಕರ್ನಾಟಕ ಭವನದಲ್ಲಿ!


ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ನಾನು ತಪ್ಪು ಮಾಡಿದಂತಾಗುತ್ತದೆ. ಹೀಗಾಗಿ ರಾಜೀನಾಮೆ ಕೊಡಲ್ಲ. ನಾನು ತಪ್ಪು ಮಾಡಿಲ್ಲ, ಆ ಯುವತಿಯನ್ನೇ ನೋಡಿಲ್ಲ. ವಿಧಾನಸಭೆ ಉಪಚುನಾವಣೆ(By Election)ಯಲ್ಲಿ ಸಹ ಇದೇ ರೀತಿ ಷಡ್ಯಂತ್ರ ನಡೆಯಿತು. ಇದನ್ನು ಊಹಿಸಲು ಸಹ ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಯಲಿ, ತಪ್ಪಿತಸ್ಥನೆಂದು ತಿಳಿದರೆ ಯಾವುದೇ ಶಿಕ್ಷೆಗೆ ಸಿದ್ಧನಿದ್ದೇನೆ ಎಂದು ಹೇಳಿದರು.


Ramesh Jarkiholi: ಸಾಹುಕಾರ್ ನ ರಾಸಲೀಲೆ ವಿಡಿಯೋ: ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಗೊತ್ತಾ?


ನಾನು ಮುಖ್ಯಮಂತ್ರಿಗಳೊಂದಿಗೆ, ಹೈ ಕಮಾಂಡ್ ಜೊತೆ ಈಗಾಗಲೇ ಚರ್ಚೆ ನಡೆಸಿದ್ದೇನೆ.  ಇದೇ ರೀತಿಯ ಮತ್ತೊಂದು ಫೋಟೋ(Photo) ಬಂದಿದೆ. ಹೀಗಿರುವಾಗ ಹೇಗೆ ಒಪ್ಪಲು ಸಾಧ್ಯ, ಇಂದಿನ ತಂತ್ರಜ್ಞಾನದಲ್ಲಿ ಏನು ಬೇಕಾದರೂ ಮಾಡಬಹುದು. ಏನು ಬೇಕಾದರೂ ಫೇಕ್ ಮಾಡಬಹುದು. ಇದು ಎಲ್ಲಿ ಆಗಿದೆ, ಏನು ಆಗಿದೆ ಎಂಬುದೇ ಗೊತ್ತಿಲ್ಲ ಎಂದು ಹೇಳಿದರು.


CD Release: ರಮೇಶ್​ ಜಾರಕಿಹೊಳಿ ನಂತ್ರ ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ರಿಲೀಸ್​!?


ಕಾನೂನು ಹೋರಾಟದ ಬಗ್ಗೆ ಈಗಾಗಲೇ ನಮ್ಮ ವಕೀಲರ ಜೊತೆ ಚರ್ಚಿಸಿದ್ದೇನೆ. ಕಾನೂನು ರೀತಿ ಉತ್ತರ ನೀಡುತ್ತೇನೆ. 21 ವರ್ಷದ ರಾಜಕೀಯ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲ ಎಂದರು. ಉಪ ಚುನಾವಣೆಯ ಸಂದರ್ಭದಲ್ಲಿ ನನ್ನ ವಿರುದ್ದ ಷಡ್ಯಂತ್ರ ನಡೆದಿದೆ ಎಂದರು.


Madhu Bangarappa: ಜೆಡಿಎಸ್‌ ತೊರೆಯುವ ಸುಳಿವು ನೀಡಿದ ಮಧು ಬಂಗಾರಪ್ಪ..!?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.