ಶಿವಮೊಗ್ಗ: ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ಒಳಗೆ ಸೂಕ್ತ ರಾಜಕೀಯ ನಿರ್ಧಾರ ತೆಗೆದುಕೊಳ್ಳುವೆ ಎನ್ನುವ ಮೂಲಕ ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆಯುವ ಸುಳಿವು ನೀಡಿದರು.
ನಗರದ ಕಲ್ಲಹಳ್ಳಿಯ ಮನೆಯಲ್ಲಿ ತಮ್ಮ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ, ಗುಲಾಬಿ ಗಿಡಗಳ ವಿತರಣಾ ಸಮಾರಂಭದ ನಂತರ ಮಧು ಬಂಗಾರಪ್ಪ(Madhu Bangarappa) ಸುದ್ದಿಗಾರರ ಜತೆ ಮಾತನಾಡಿದರು.
ಮನೆಯಲ್ಲಿಯೇ Corona Vaccine ಪಡೆದು ವಿವಾದಕ್ಕೆ ಗುರಿಯಾದ ಸಚಿವ BC Patil
ಇದು ಬದಲಾವಣೆಯ ಬರ್ತಡೇ. ಬೆಂಬಲಗರು, ಅಪ್ಪಾಜಿ ಅಭಿಮಾನಿಗಳು ಹಾಗೂ ನಂಬಿದ ಹಿತೈಷಿಗಳ ಹಿತದೃಷ್ಟಿಯಿಂದ ಖಚಿತ ನಿರ್ಧಾರ ತೆಗೆದುಕೊಳ್ಳಲೆಬೇಕಿದೆ. ದಶಕದ ಅವಧಿಯಲ್ಲಿ ಜೆಡಿಎಸ್(JDS) ಒಳ್ಳೆಯ ಅವಕಾಶಗಳನ್ನು ನೀಡಿದೆ. ಎಚ್.ಡಿ.ಕುಮಾರಸ್ವಾಮಿ ಅಣ್ಣನಂತೆ ಇದ್ದರು. ಕುಮಾರಣ್ಣ, ದೇವೇಗೌಡರನ್ನು ಎಂದೂ ಮರೆಯುವುದಿಲ್ಲ. ಆದರೆ, ಕೆಲವು ಬೆಳವಣಿಗೆಗಳು ಬೇಸರ ತರಿಸಿದವು. ನಾನು ಎಂದೂ ಅಧಿಕಾರ ಬಯಸಲಿಲ್ಲ. ಜತೆಗಿದ್ದವರಿಗೆ ಅವಕಾಶಗಳು ದೊರೆಯದೇ ಇದ್ದಾಗ ನೋವಾಗಿದ್ದು ಸತ್ಯ ಎಂದು ಮನದಾಳ ತೋಡಿಕೊಂಡರು.
BJP: ರಮೇಶ್ ಜಾರಕಿಹೊಳಿ ರಾಸಲೀಲೆ: ಸಚಿವ ಸ್ಥಾನಕ್ಕೆ ರಾಜೀನಾಮೆಗೆ ಹೈಕಮಾಂಡ್ ಸೂಚನೆ!
ಮಧು ಅವರ ಮಾತಿಗೆ ಪುಷ್ಟಿ ನೀಡುವಂತೆ ಜನ್ಮದಿನದ ಕಾರ್ಯಕ್ರಮ ಕಾಂಗ್ರೆಸ್ ಮುಖಂಡರಿಂದಲೇ ತುಂಬಿ ತುಳುಕುತ್ತಿತ್ತು. ಕಾಂಗ್ರೆಸ್(Congress) ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಸೇರಿದಂತೆ ಪಕ್ಷದ ನೂರಾರು ಮುಖಂಡರು ಭಾಗವಹಿಸಿದ್ದರು.
DK Shivakumar: ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾದ ಡಿಕೆಶಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.