ಬೆಂಗಳೂರು: ಮಾಲ್‌ ನಲ್ಲಿ ಸಿಕ್ಕ ಚಿನ್ನದ ಸರವನ್ನ ಮಹಿಳೆಗೆ ವಾಪಾಸ್ ನೀಡಿ ಸಚಿವರ ಗನ್ ಮ್ಯಾನ್ ಮಾನವೀಯತೆ ಮೆರೆದಿದ್ದಾರೆ. ಸಚಿವ ಸುಧಾಕರ್ ಗನ್ ಮ್ಯಾನ್ ಆಗಿರುವ ಸಿಎಆರ್ ಕಾನ್ ಸ್ಟೇಬಲ್ ಅಂಜನ್ ಕುಮಾರ್ ಜಿಟಿ ಮಾಲ್ ನಲ್ಲಿ ಸಿಕ್ಕ ಸರವನ್ನ ಮಹಿಳೆಗೆ ಹಿಂತಿರುಗಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ಗೆಳೆಯರ ಈ ಕೆಲಸದಿಂದ ನೆತ್ತಿಗೇರಿತು ವರನ ಕೋಪ .! ಮುಂದೆ ..?


ಮಾಲ್ ನಲ್ಲಿ ಶಾಪಿಂಗ್ ಹೋದಾಗ ಗನ್ ಮ್ಯಾನ್ ಅಂಜನ್ ಗೆ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಶಾಪ್ ಮಾಲೀಕರಿಗೆ ತಿಳಿಸಿದ್ರು. ಈ ವೇಳೆ ಮಹಿಳೆಯನ್ನು ಶಾಪ್ ಗೆ ಕರೆಸುವಂತೆ ಹೇಳಿ ಶಾಪ್ ನಲ್ಲೇ ಮಹಿಳೆಗೆ ಸರವನ್ನು ಹಿಂದಿರುಗಿಸಿದ್ದಾರೆ.


ಚಿನ್ನದ ಸರ ಪಡೆದ ಮಹಿಳೆ ಕಾನ್ಸ್ ಟೇಬಲ್ ಪ್ರಾಮಾಣಿಕತೆ ಮೆಚ್ಚಿ ಕಮೀಷನರ್ ಗೆ ಪತ್ರ ಬರೆದಿದ್ದಾರೆ.ಪೊಲೀಸ್ ಇಲಾಖೆಗೆ ಹಾಗೂ ಗನ್ ಮ್ಯಾನ್ ಗೆ ಧನ್ಯವಾದ ತಿಳಿಸಿ ಅಶ್ವಿನಿ ಎನ್ನುವವರು ಪತ್ರ ಬರೆದಿದ್ದಾರೆ.


ಇದನ್ನೂ ಓದಿ: Unique Photos Of Animals: ವಾವ್‌.. ಎಂತಹ ಕ್ಲಿಕ್‌! ಇಲ್ಲಿವೆ ಬಲು ಅಪರೂಪದ ಫೋಟೋಗಳು


ಇನ್ನೂ ಅಂಜನ್ ಕಳೆದ ಏಳು ವರ್ಷಗಳಿಂದ ಸಚಿವ ಸುಧಾಕರ್ ಗೆ ಗನ್ ಮ್ಯಾನ್ ಆಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.