Wedding Video : ಮದುವೆ ಮನೆಯಲ್ಲಿ ವಧು ಅಥವಾ ವರನ ಸ್ನೇಹಿತರ ಓಡಾಟ ಎದ್ದು ಕಾಣುತ್ತದೆ. ಗೆಳೆಯನ ಮದುವೆಯಲ್ಲಿ ಸ್ನೇಹಿತರ ಸಂಭ್ರಮಕ್ಕೆ ಪಾರವೇ ಇರುವುದಿಲ್ಲ. ವಿವಾಹ ಪತ್ರಿಕೆ ಹಂಚುವುದರಿಂದ ಹಿಡಿದು ಮದುವೆ ಮನೆಯನ್ನು ಸಿಂಗರಿಸುವವರೆಗೆ ಸ್ನೇಹಿತರ ಪಾತ್ರ ಬಹಳ ಇರುತ್ತದೆ. ವರ ಮದುವೆಯ ಸಂದರ್ಭ ಸಣ್ಣ ಪುಟ್ಟ ಕೆಲಸಗಳಿಗೂ ತನ್ನ ಸ್ನೇಹಿತರನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾನೆ. ಸ್ನೇಹಿತರು ಕೂಡಾ ಕಡಿಮೆ ಇರುವುದಿಲ್ಲ ಗೆಳೆಯನ ಮದುವೆಯಲ್ಲಿ ಯಾವ ಕುಂದು ಕೊರತೆಯೂ ಬಾರದಂತೆ ಎಚ್ಚರ ವಹಿಸಿಕೊಳ್ಳುತ್ತಾರೆ. ಆದರೆ ಒಮ್ಮೊಮೆ ಮಾತ್ರ ಈ ಸ್ನೇಹಿತರೂ ಮಾಡುವ ತಮಾಷೆಗೆ ಭಾರೀ ಬೆಲೆ ತೆರಬೇಕಾಗುತ್ತದೆ.
ಉತ್ತರ ಭಾರತದ ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ದೃಷ್ಟಿ ತೆಗೆಯಲು ನೋಟುಗಳನ್ನು ಬಳಸಲಾಗುತ್ತದೆ. ವಧು ಮತ್ತು ವರನ ತಲೆಯ ಸುತ್ತ ನೋಟನ್ನು ಸುತ್ತಿಸಿ ಅದನ್ನು ದಾನ ಮಾಡಲಾಗುತ್ತದೆ. ಇನ್ನು ಕೆಲವರು ಹೆಣ್ಣು ಗಂಡಿನ ತಲೆಯ ಸುತ್ತ ನೋಟನ್ನು ಸುತ್ತಿಸಿ ಹಾಗೆಯೇ ಅದನ್ನು ಗಾಳಿಯಲ್ಲಿ ಎಸೆದು ಬಿಡುತ್ತಾರೆ. ಇಂಥ ದೃಶ್ಯಗಳು ಉತ್ತರ ಭಾರತದ ಮದುವೆಗಳಲ್ಲಿ ಸಾಮಾನ್ಯವಾಗಿರುತ್ತದೆ.
ಇದನ್ನೂ ಓದಿ : Viral Video: ಕಾಲುಗಳಿಂದಲೇ ಬಾಣ ಬಿಟ್ಟು ಗುರಿ ಹೊಡೆಯುವ ಬಾಲಕಿ!
ಇಲ್ಲಿ ಕೂಡಾ ವರನ ಸ್ನೇಹಿತರು, ತಮ್ಮ ಗೆಳೆಯನ ಮದುವೆಯ ಸಂಭ್ರಮದಲ್ಲಿ ತೇಲಾಡುತ್ತಿರುವುದನ್ನು ನೋಡಬಹುದು. ಕೈಯಲ್ಲಿ ಹಣವನ್ನು ಹಿಡಿದುಕೊಂಡು ವಧು ಮತ್ತು ವರನ ದೃಷ್ಟಿ ತೆಗೆದು ಹಾಗೆಯೇ ಆ ನೋಟುಗಳನ್ನು ಹಾರಿಸುತ್ತಿರುತ್ತಾರೆ. ಹೀಗೆ ಸಂಭ್ರಮಿಸುವ ವೇಳೆ ಸ್ನೇಹಿತನೊಬ್ಬ ವರನ ಮೇಲೆಯೇ ಬಿದ್ದು ಬಿಡುತ್ತಾನೆ. ವರನ ಮೇಲೆ ಹೀಗೆ ಬೀಳುವಾಗ ವಧುವಿಗೂ ತಾಗುತ್ತದೆ. ಇಷ್ಟಕ್ಕೆ ವರನ ಕೋಪ ನೆತ್ತಿಗೇರಿ ಬಿಡುತ್ತದೆ. ಒಂದು ಕ್ಷಣದಲ್ಲಿ ಸ್ನೇಹಿತನಿಗೆ ಹೊಡೆಯುವುದಕ್ಕೆ ಕೂಡಾ ವರ ಮುಂದಾಗುತ್ತಾನೆ. ಮಾತ್ರವಲ್ಲ ಎಲ್ಲರೂ ಕೆಳಗಿಳಿದು ಹೋಗುವಂತೆ ಹೇಳುತ್ತಾನೆ.
ಈ ವಿಡಿಯೋವನ್ನು divusharma_9 ಹೆಸರಿನ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಲಾಗಿದೆ.
ಇದನ್ನೂ ಓದಿ : Trending Video: ಶ್ವಾನಕ್ಕೆ ಮುತ್ತಿಕ್ಕಿದ ಕಾಡಿನ ರಾಜ, ವಿಡಿಯೋದಲ್ಲಿ ನೋಡಿ ಈ ಲವ್ ಸ್ಟೋರಿಯ ವಿಶಿಷ್ಟ ಕ್ಲೈಮ್ಯಾಕ್ಸ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ