ವಿಜಯಪುರ : ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ, ಹೀಗಾಗಿ ಅಧಿಕಾರ ಕಳೆದು ಕೊಂಡಿದ್ದಾರೆ. ಪದೇ ಪದೇ ಅವರ ಬಗ್ಗೆ ನನಗೆ ಕೇಳಬೇಡಿ ಎಂದು ಸಚಿವ ಉಮೇಶ ಕತ್ತಿ, ಹಿಂದು ಸಂಘಟನೆಗಳ ಮೇಲೆ ಬುಲ್ಡೋಜರ್ ಹತ್ತಿಸಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಕತ್ತಿ, ಅವನೊಬ್ಬ ಸೀನಿಯರ್, ಮಾಜಿ ಮುಖ್ಯಮಂತ್ರಿ, ಮುಂದೆಂದೂ ಮುಖ್ಯಮಂತ್ರಿ ಆಗುವ ಲಕ್ಷಣ ಅವರಿಗಿಲ್ಲ‌. ಹೀಗಾಗಿ ಅವರು ಹೇಳಿಕೆ ಕೊಡುತ್ತಾರೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : 'ಕುಮಾರಸ್ವಾಮಿಗೆ ನನ್ನ ಕಂಡರೆ ಭಯ, ಹಾಗಾಗಿ ನನ್ನ ಟಾರ್ಗೆಟ್ ಮಾಡಿದ್ದಾರೆ'


ಜಿಲ್ಲೆಗೆ ಸಚಿವ ಸ್ಥಾನ ಹಾಗೂ ಸಚಿವ ಸಂಪುಟದ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅಥವಾ ರೀ ಸಫಲ್ ಆಗುತ್ತದೆ. ಅದು ಏನೇ ಮಾಡಿದ್ದರು ಹೈ ಕಮಾಂಡ್ ನಿಂದ ಆಗುತ್ತದೆ. ವಿಜಯಪುರ ಜಿಲ್ಲೆಗೂ ಸಚಿವ ಸ್ಥಾನ ಸಿಗುತ್ತದೆ.ಕೆಲವು ದಿನ ಕಾದು ನೋಡಿ. ಅದೆಲ್ಲವೂ ಹೈ ಕಮಾಂಡ್ ತೀರ್ಮಾನ. ಅದು ನನಗೇ ಹೇಳಬೇಕು ಎಂದರೆ ಹೇಳಲಾಗಲ್ಲ. ನಾನು ಈಗ ಮಂತ್ರಿ ಇದ್ದೇನೆ ಮುಂದೆ ಸಚಿವ ಸ್ಥಾನದಿಂದ ತಗೆಯಬಹುದು, ಯತ್ನಾಳ ಅವರನ್ನು ತೆಗೆದುಕೊಳ್ಳಬಹುದು. ಅದು ಹೈ ಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ. 


ಮುಸ್ಲಿಮರು ಅಂಗಡಿಗಳಲ್ಲಿ ಚಿನ್ನ‌ ಖರೀದಿ ಮಾಡಬಾರದು ಎಂದು ಮುತಾಲಿಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಕತ್ತಿ, ಅಕ್ಷಯ ತೃತಿಯಾ ವೇಳೆ ಬಂಗಾರ ಯಾರಿಂದ ಖರೀದಿ ಮಾಡಬೇಕು ಎಂಬಿತ್ಯಾದಿ ವಿಚಾರ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಯಾರು ಒಳ್ಳೆಯ ರೇಟ್ ಕೊಡುತ್ತಾರೆ, ಯಾರು ಒಳ್ಳೆಯದ್ದು ಕೊಡತಾರೆ ಅವರ ಬಳಿ ಜನ ತೆಗೆದುಕೊಳ್ಳುತ್ತಾರೆ. ನಮ್ಮ ಹೇಳಿಕೆಯಿಂದ ಯಾವುದೇ ತೊಂದರೆ ಆಗಲ್ಲ. ಹಿಂದೂ ಮುಸ್ಲಿಂಮರ ಮದ್ಯೆ ಜಗಳ ಹಚ್ಚುವ ಕೆಲಸ ಮಾಡಬಾರದು. ಮುತಾಲಿಕ್ ನಂತವರು ಬಹಳ ಜನರಿದ್ದಾರೆ. ಅಂತವರ ಹೇಳಿಕೆಗಳಿಗೆ ಉತ್ತರವನೆಲ್ಲ ಕೊಡಲು ಆಗುವದಿಲ್ಲ. ಅವರು ನಮ್ಮ‌ ತಾಲೂಕಿನವರು ಶ್ರೀ ರಾಮ ಸೇನೆಯ ಅಧ್ಯಕ್ಷರು, ಅವರ ಹೇಳಿಕೆಗಳಿಗೆ ಜನರು ಕಿವಿಗೊಡಬಾರದು. ಸಮಾಜದಲ್ಲಿ ಶಾಂತಿ ಕದಡುವ ಹೇಳಿಕೆಗಳ ವಿಚಾರವಾಗಿ ಗೃಹ ಇಲಾಖೆ ಕ್ರಮ ಕೈಗೊಳ್ಳುತ್ತದೆ. 62 ವರ್ಷದ ಯುವಕ ಬೊಮ್ಮಾಯಿ ಅವರು ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದಾರೆ. ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಹಲಾಲ್, ಕಟ್ ಈ ವಿಚಾರ ಕುರಿತು ಚರ್ಚೆ ಬಿಟ್ಟು ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚೆ ಮಾಡೋಣ ಎಂದು ಹೇಳಿದರು. 


ಇದನ್ನೂ ಓದಿ : Dingaleshwar Swamiji : ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ ದಿಂಗಾಲೇಶ್ವರ ಶ್ರೀ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.