Dingaleshwar Swamiji : ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ ದಿಂಗಾಲೇಶ್ವರ ಶ್ರೀ!

ಉತ್ತರ ಕರ್ನಾಟಕದ ಮಠಗಳಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ. 

Written by - Zee Kannada News Desk | Last Updated : Apr 24, 2022, 06:31 PM IST
  • ದಿಂಗಾಲೇಶ್ವರ ಶ್ರೀ ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್
  • ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ 2 ಕೋಟಿ ಅನುದಾದಲ್ಲಿ 1.25 ಕೋಟಿ ಹಣ ಗುಳಂ
  • ಉತ್ತರ ಕರ್ನಾಟಕದ ಮಠಗಳಿಗೆ ಸರ್ಕಾರದಿಂದ ಅನ್ಯಾಯ
Dingaleshwar Swamiji : ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ ದಿಂಗಾಲೇಶ್ವರ ಶ್ರೀ! title=

ಗದಗ : ಶಿರಹಟ್ಟಿ ಮಠಕ್ಕೆ ಬಿಡುಗಡೆಯಾದ 2 ಕೋಟಿ ಅನುದಾದಲ್ಲಿ 1.25 ಕೋಟಿ ಹಣ ನುಂಗಿ ಹಾಕಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಬಿಜೆಪಿ ಸರ್ಕಾರದ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದಿಂಗಾಲೇಶ್ವರ ಶ್ರೀ, ಆ ಹತ್ತು ವರ್ಷಗಳು ಕಳೆದರೂ ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಪ್ರತಿಷ್ಠಿತ ಮಠಾದೀಶರೊಬ್ಬರು ಸರ್ಕಾರದಿಂದ ಬಂದಿರೋ ಯಾವುದೇ ಹಣ ಕಟ್ ಆಗದಂತೆ ಡಿಸಿಯವರ ಮೂಲಕ ಬರುತ್ತದೆ ಎಂದು ಹೇಳಿದ್ದೀರಿ. ಆದ್ರೆ ನಾನು ನೇಮಕಗೊಂಡ ಶಿರಹಟ್ಟಿ ಫಕೀರೇಶ್ವರ ಮಠಕ್ಕೆ ಯಡಿಯೂರಪ್ಪ ಕಾಲದಲ್ಲಿ 2 ಕೋಟಿ ಅನುದಾನ ಬಜೆಟ್ ನಲ್ಲಿ ಇಟ್ಟಿದ್ದರು. ಆದ್ರೆ ಅದು ಡಿಸಿಯವರ ಮೂಲಕ ನೇರವಾಗಿ ಬರಲಿಲ್ಲ. ಆದ್ರೆ ಗುತ್ತಿಗೆದಾರರು ಮಠದ ಪೂರ್ಣ ಕೆಲಸ ಮುಗಿಸಿದರೂ ಇದೂವರೆಗೂ ಮುಕ್ಕಾಲು ಭಾಗ ಹಣ ಬಂದಿಲ್ಲ. ಕೇವಲ 75 ಲಕ್ಷ ಬಂದಿದೆ. ಉಳಿದ 1.25 ಕೋಟಿ ಹಣ ಎಲ್ಲಿಗೆ ಹೋಯ್ತು? ಆ ಪ್ರತಿಷ್ಠಿತ ಮಠಾದೀಶರಿಗೆ ಡಿಸಿಯವರಿಂದ ನೇರವಾಗಿ ಹಣ ಹೋಗುವದಾದರೆ ಶಿರಹಟ್ಟಿ ಮಠಕ್ಕೆ ಈ ಅನ್ಯಾಯ ಯಾಕೆ? ಉತ್ತರ ಕರ್ನಾಟಕದ ಮಠಗಳಿಗೆ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಬೇಡ-ಬಿಎಸ್ವೈ

ಇನ್ನು ಮುಂದುವರೆದು ಮಾತನಾಡಿದ ಅವರು, ಉತ್ತರ ಕರ್ನಾಟಕದ ಶಾಸಕರೊಬ್ಬರು ಸದಾಕಾಲ ಸರ್ಕಾರದ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತಾನಾಡ್ತಾನೆ ಇದ್ರು. ಸ್ವಪಕ್ಷದ ಶಾಸಕರೊಬ್ಬರು ತಮ್ಮ ಸರ್ಕಾರದ ವಿರುದ್ಧ. ತಮ್ಮ ನಾಯಕನ ವಿರುದ್ಧ ಮಾತನಾಡುವಾಗ ಯಾವುದೇ ಶಾಸಕರು, ಸಚಿವರು ತುಟಿಕ್ ಪಿಟಿಕ್ ಅನ್ನಲಿಲ್ಲ. ಅಂದು ಒಬ್ಬರೂ ಕೂಡ ಮಾತನಾಡದೇ ಇವತ್ತು ನನ್ನ ವಿರುದ್ಧ ಇಲ್ಲಸಲ್ಲದ ಮಾತಿಗಳನ್ನಾಡ್ತಿದ್ದೀರಿ ಅಂತ ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ. 

ಇವತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಮಾತನಾಡಿದ ಒಂದು ಉಪನ್ಯಾವಸನ್ನ ಒಂದು ಸವಾಲಾಗಿ ಸ್ವೀಕರಿಸಿದ್ದೀರಿ. ನನ್ನ ಅಪಾದನೆಯ ಬೆನ್ನಲ್ಲೇ ಸಿಸಿ ಪಾಟೀಲ್ ನನ್ನ ವಯಕ್ತಿಕ ಕೇಸ್ ಗಳ ಫೈಲ್ ಅನ್ನ ಹಿಡಿದು ಸುದ್ದಿಗೋಷ್ಠಿ ಮಾಡ್ತಾರೆ. ಇಷ್ಟು ಬೇಗ ಆ ಕೇಸ್ ಪೇಪರದ ನಿಮಗೆ ಯಾರು ತಂದುಕೊಟ್ರು ಅನ್ನೋದು ನನಗೆ ಆಶ್ಚರ್ಯ ಆಗಿದೆ. ಕೇಸ್ ದಾಖಲೆಗಳು ಕೋರ್ಟ್, ಪೊಲೀಸ್ ಠಾಣೆಯಲ್ಲಿ ಇರುತ್ತವೆ. ಆ ಕೇಸ್ ನ ಹಿಂದೆ ತಾವಿದ್ದೀರಿ ತಮ್ಮ ಕಡೆ ಆ ಎಲ್ಲಾ ದಾಖಲೆ ಇದ್ದಾವೆ ಎಂಬುದನ್ನು ಈ ನಾಡಿಗೆ ತೋರಿಸಿದ್ದೀರಿ. ಸಿಎಂ ಸಾಪ್ಟಕಾರ್ನರ್ ರೀತಿಯಲ್ಲಿ ವರ್ತಿಸುತ್ತಾರೆ, ಉಳಿದವರೆಲ್ಲರೂ ದಾಳಿ ದಬ್ಬಾಳಿಕೆ ಮಾಡುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ. ಸರ್ಕಾರದಲ್ಲಿನ ಸಚಿವರಿಗೆ ಒಂದಿಷ್ಟು ಸಂಸ್ಕೃತಿ ಕಲಿಸುವ ಪಾಠಶಾಲೆಗೆ ಹಾಕಬೇಕು ಅಂತ ಹೈಕಮಾಂಡ್ ಗೆ ಸೂಚನೆ ನೀಡಿದೆ. ಇವರು ಬಳಸುವ ಶಬ್ದಗಳನ್ನು ಯಾವ ಅನಾಗರಿಕರೂ ಕೂಡ ಬಳಸೋದಿಲ್ಲ ಅಂತ ಬಿಜೆಪಿ ಸಚಿವರು, ಶಾಸಕರ ವಿರುದ್ಧ ಕಿಡಿಕಾರಿದ್ದಾರೆ. 

ಇದನ್ನೂ ಓದಿ : ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಫೋನ್‌ ನಂಬರ್‌ ಕೊಟ್ಟ ಕಿರಾತಕ: ಮುಂದಾಗಿದ್ದೇನು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News