ಹುಬ್ಬಳ್ಳಿ: ಒಂದು ಕಡೆ ರಾಜ್ಯ ನಾಯಕರ ನಡುವೆ ಬಂಡಾಯ, ಇತ್ತ ಲೋಕಲ್ ನಲ್ಲೂ ಭಿನ್ನಮತ ಸ್ಪೋಟಗೊಂಡಿದೆ. ಕಾಂಗ್ರೆಸ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸ್ಥಳೀಯ ಕೇಲ ಬ್ಲಾಕ್ ಸಮಿತಿಯ ಅಧ್ಯಕ್ಷ ಉಪಾಧ್ಯಕ್ಷರು ಹಾಗೂ ನಾಯಕರ ವಿರುದ್ದ ಪರೋಕ್ಷವಾಗಿ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ಬಯ್ಯ ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ2024 ಹಾಗೂ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದ ಬೆನ್ನಲ್ಲೇ ಸಾಕಷ್ಟು ಆಕ್ರೋಶಕ್ಕೆ ಸಹ ಕಾರಣವಾಗಿದೆ. 


COMMERCIAL BREAK
SCROLL TO CONTINUE READING

ಪದಾದಿಕಾರಿಗಳ ಕಾರ್ಯಕ್ರಮದಲ್ಲಿ ಮಾತನಾಡಿದ  ನಂತರ ಒಂದು ಕಡೆ ಭಿನ್ನಮತ ಸ್ಪೋಟ್ ಆಗಿದ್ದು ಇನ್ನೊಂದು ಕಡೆ ಶಾಸಕರ ನಡೆ ಕುರಿತು ಸಹ ಕಾರ್ಯಕರ್ತರಲ್ಲಿ ಒಳೊಳಗೆ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡೋರನ್ನ ನಾನು ಬಿಡೋದಿಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ ಶಾಸಕ ಅಬ್ಬಯ್ಯಾ. ಪಕ್ಷದಲ್ಲಿ ಇದ್ದು ದ್ರೋಹ‌ ಮಾಡಿದವರನ್ನು ನಾನು ಕ್ಷಮಿಸೋದಿಲ್ಲ. ಅವರನ್ನು ನಾನು ಪಕ್ಷದಲ್ಲಿ‌ ಉಳಿಸಿಕೊಳ್ಳುವುದಿಲ್ಲ ಎಂದಿದ್ದು ಮುಂದಿನ ಬೆಳವಣಿಗೆ ಸಹ ಸಾಕಷ್ಟು ಕುತೂಹಲ ಮೂಡಿಸಿದೆ.


ಇದನ್ನೂ ಓದಿ-ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ.. ರೈತರ ಹಿತ ಕಾಯುವುದು ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ


ಕೆಲ‌ ಕಾರ್ಪೋರೇಟರ್‌ಗಳು ಭಾರತೀಯ ಜನತಾ ಪಕ್ಷದ  ನಾಯಕರ ಸಂಪರ್ಕದಲ್ಲಿರುವ ಹಿನ್ನಲೆಯಲ್ಲಿ ಶಾಸಕ ಅಬ್ಬಯ್ಯ ಗರಂ ಆಗಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಲಕ್ಷ ವಿರೋಧ ಚಟುವಟಿಕೆ ಈಗ ಸಾಕಷ್ಟು  ಚರ್ಚೆಗೆ ಗ್ರಾಸವಾಗಿದೆ.


ನಮ್ಮ ಪಕ್ಷದಲ್ಲಿದ್ದು ದ್ರೋಹ ಮಾಡಿದ್ರೆ, ಇಲ್ಲೆ ಮುಗಿಸ್ತೀವಿ ಎಂದ ಅಬ್ಬಯ್ಯ, ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಕೆಲವರು ಮೋಸ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಕೆಲವರು ತಿಂದಮನೆಗೆ ಎರಡು ಬಗೆದಿದ್ದಾರೆ. ಅಂತವರನ್ನು‌ ಪಕ್ಷದಲ್ಲಿ ಇರೋಕೆ ನಾನು‌‌ ಕೊಡಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ ಅಬ್ಬಯ್ಯ. ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಬ್ಬಯ್ಯ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.


ಇದನ್ನೂ ಓದಿ-ನಾವು ಚಳವಳಿ ಹೋರಾಟ ನಡೆಸುತ್ತಿದ್ದರೂ ಕ್ಯಾರೇ ಎನ್ನುತ್ತಿಲ್ಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.