ಗದಗ: ರಾಜೀನಾಮೆ ಸಲ್ಲಿಸಿರುವ ಅತೃಪ್ತ ಶಾಸಕರಿಗೆ ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲು ಮುಂದಾಗಿರುವುದು ದೊಡ್ಡ ಅಕ್ರಮ ಎಂದು ಶಾಸಕ ಎಚ್.ಕೆ.ಪಾಟೀಲ್ ಟೀಕಿಸಿದ್ದಾರೆ.


COMMERCIAL BREAK
SCROLL TO CONTINUE READING

ಇಂದು ಸಂಜೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದು, ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡಲಾಗುತ್ತಿದೆ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕಿಂತ ದೊಡ್ಡ ರಾಜಕೀಯ ವ್ಯಭಿಚಾರ ಇನ್ನೊಂದಿಲ್ಲ. ಕಾಂಗ್ರೆಸ್ ಪಕ್ಷದ 9 ಶಾಸಕರನ್ನು ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡುತ್ತಾರೆ ಎಂದರೆ ಇದಕ್ಕೇನ್ ಹೇಳ್ಬೇಕು? ಎಂದು ಪ್ರಶ್ನಿಸಿದ್ದಾರೆ.


ಕಾಂಗ್ರೆಸ್ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳುವುದೇ ದೊಡ್ಡ ಅಕ್ರಮ. ಅವರ ರಾಜೀನಾಮೆಗಳು ಇನ್ನೂ ಇತ್ಯರ್ಥ ಆಗಿಲ್ಲ.  ಅವಿನ್ನೂ ಸ್ಪೀಕರ್ ಪರಿಶೀಲನೆ ಹಂತದಲ್ಲಿದ್ದರೂ ಹೀಗೆ ಮಾಡುವುದು ಅಕ್ರಮವಾಗುತ್ತದೆ. ರಾಜ್ಯಪಾಲಾರೆ ಇಂತಹ ಅಕ್ರಮಗಳಿಗೆ ಅವಕಾಶ ಮಾಡಿಕೊಟ್ಟರೆ ರಾಜಕೀಯ ಪಕ್ಷಗಳು ಮುಂದಿನ ಹೆಜ್ಜೆ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ ಎಂದು ಎಚ್.ಕೆ.ಪಾಟೀಲ್ ಹೇಳಿದ್ದಾರೆ.