ಬೆಂಗಳೂರು: ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೆಂಡಾಮಂಡಲರಾಗಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಸುದ್ದಿಗಾರರ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ(Ramesh Jarkiholi), ಮಹಾನಾಯಕ ಯಾರು ಎನ್ನುವುದು ಬಯಲಾಗಿದೆ. ಮಹಾನಾಯಕನ ಹೆಸರನ್ನು ನಾನು ಹೇಳಿಲ್ಲ. ಯುವತಿಯ ಪೋಷಕರು ಹೇಳಿದ್ದಾರೆ. ಆ ಮಹಾನಾಯಕ ರಾಜಕಾರಣಕ್ಕೆ ನಾಲಾಯಕ್ ಎಂದು ಅವನು ಗಂಡಸಲ್ಲ ಎಂದು ಟೀಕಿಸಿದ್ದಾರೆ.


SIT ವಿಚಾರಣೆ ಬಳಿಕ CD ಯುವತಿ ಪೋಷಕರಿಂದ ಶಾಕಿಂಗ್ ನ್ಯೂಸ್..!


ಇದೇ ವೇಳೆ ಅವರು ಮಾತನಾಡಿ, ಡಿಕೆ ಶಿವಕುಮಾರ್‌(DK Shivakumar) ವಿರುದ್ದ ನಾನು ನೇರವಾಗಿ ಹೋರಾಟಕ್ಕೆ ಇಳಿಯುತ್ತೇನೆ, ಕನಕಪುರದಲ್ಲಿ ನನ್ನ ತಮ್ಮನನ್ನು ಕಣಕ್ಕೆ ಇಳಿಸುತ್ತೇನೆ. ಇದಲ್ಲದೇ ನಮ್ಮ ಊರಿಗೆ ಅಂದ್ರೆ ಬೆಳಗಾಗಿ ಬಂದಾಗ ಅವರನ್ನು ಸತ್ಕಾರ ಮಾಡುತ್ತೇನೆ ಅಂಥ ಹೇಳಿದ್ರು. ಇದೇ ವೇಳೆ ಅವರು ಸತ್ಯವನ್ನು ಹೇಳಿದ ಯುವತಿಯ ಪೋಷಕರಿಗೆ ಧನ್ಯವಾದಗಳನ್ನು ಹೇಳುವೆ ಅಂತ ಹೇಳಿದ್ರು. ಇದಲ್ಲದೇ ನಮ್ಮ ಕುಟುಂಬ ಯಾವ ಯುವತಿಗೂ ಮೋಸ ಮಾಡಿಲ್ಲ, ಆ ಹುಡುಗಿಯನ್ನು ನಾವು ನೋಡೇ ಇಲ್ಲ ಅಂತ ಹೇಳಿದ್ರು. ನನ್ನ ಬಳಿ 11 ಎವಿಡೆನ್ಸ್ ಇದ್ದು, ಆ ಮಹಾನಾಯಕ ಯಾರು ಅಂತ ಯುವತಿಯ ಪೋಷಕರೇ ಬಹಿರಂಗ ಪಡಿಸಿದ್ದಾರೆ ಅಂತ ಅವರು ಹೇಳಿದ್ರು.


Congress: ಬೈ ಎಲೆಕ್ಷನ್ ನಲ್ಲಿ CD ಮಸಲತ್ತು: ಲಾಭ ಪಡೆಯಲು 'ಕೈ' ಕಸರತ್ತು!


ಆತ ರಾಜಕೀಯದಿಂದ ನಿವೃತ್ತಿ ಹೊಂದಲಿ. ಡಿಕೆಶಿ ವಿರುದ್ಧ ಸಿಡಿದೆದ್ದ ರಮೇಶ್ ಜಾರಕಿಹೊಳಿ ನಾನು ನಿರಪರಾಧಿ ಎನ್ನುವುದು ಸಾಬೀತಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇನೆ ಎಂದು ಗುಡುಗಿದ್ದಾರೆ.


JOBS: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... 
Android Link -
 https://bit.ly/3hDyh4G 
Apple Link - https://apple.co/3loQYe  
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.