ಬೆಳಗಾವಿ : ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಹಸು ಕಟ್ಟಿಲ್ಲ, ಸುಮ್ಮನೆ ಮಾತು ಆಡುತ್ತಾರೆ ಅಷ್ಟೇ. ಪ್ಲಾಸ್ಟಿಕ್‌ ಆಕಳನ್ನು ಪೂಜೆ ಮಾಡ್ತಾರೆ, ನನ್ನ ಡೈರಿಯಲ್ಲಿ 1600 ಹಸುಗಳಿವೆ ಎಂದು ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಶಾಸಕ ವಿನಯ್‌ ಕುಲಕರ್ಣಿ ಪ್ರತಿಕ್ರಿಯೆ ನೀಡಿದರು.


COMMERCIAL BREAK
SCROLL TO CONTINUE READING

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಯಾರು ಮನೆಯಲ್ಲಿ ಒಂದು ಆಕಳು ಕಟ್ಟಿಲ್ಲ. ಮಾತು ಆಡುತ್ತಾರೆ ಅಷ್ಟೇ. ಪ್ಲ್ಯಾಸ್ಟಿಕ್ ಆಕಳನ್ನು ಪೂಜೆ ಮಾಡುತ್ತಾರೆ. ನನ್ನ ಡೈರಿಯಲ್ಲಿ 1600 ಹಸುಗಳು ಇವೆ. ನಾನು ದೊಡ್ಡ ಹೈನುಗಾರಿಕೆ ಹೊಂದಿದ್ದೇನೆ. ಹೋರಿಯನ್ನು ನಾವು ಏನ್ ಮಾಡಲು ಸಾಧ್ಯವಿಲ್ಲ. ಕೃಷಿಯಲ್ಲಿ ಎತ್ತು ಬಳಕೆ ಸಹ ಕಡಿಮೆಯಾಗಿದೆ. ಮೇವು, ಕಾರ್ಮಿಕರ ವೆಚ್ಚ ಹೆಚ್ಚು ಆಗಿದೆ. ಮಾತಾಡಿ ಜನರಿಗೆ ದಾರಿ ತಪ್ಪಿಸುವುದು ಬೇರೆ. ವಾಸ್ತವವಾಗಿ ಅನುಭವಿಸುವುದು ಬೇರೆ ಎಂದ ಗೋ ಹತ್ಯೆ ಕಾಯ್ದೆ ತಿದ್ದುಪಡಿಯನ್ನು ಸಮರ್ಥಿಸಿಕೊಂಡರು.


ಇದನ್ನೂ ಓದಿ:  Photo Gallery: ಒಡಿಶಾ ರೈಲು ದುರಂತ‌: ಕಾರ್ಮಿಕರಿಗೆ ನೆರವಾದ ರಾಜ್ಯ ಸರ್ಕಾರ


ಅಲ್ಲದೆ, ದೇಶಿ ತಳಿ ಉಳಿಸಲು ಯೋಜನೆ ಸರ್ಕಾರ ಹಾಕಲಿ. ಎಫ್‌ಎಫ್ ತಳಿಯನ್ನು ಇಟ್ಟುಕೊಂಡು ಏನ್ ಮಾಡೋದು. ಯಾರ ಬಳಿಯಾದ್ರು ದುಡ್ಡು ತಂದು ಗೋ ಶಾಲೆ ಮಾಡೊದು ಬೇರೆ. ವಾಸ್ತವವಾಗಿ ಡೈರಿ ಫಾರ್ಮ್ ಮಾಡೋ ಬೇರೆ. ಕೋಟಿ ಕೋಟಿ ಸಾಲ ಮಾಡಿ ಡೈರಿ ನಡೆಸುತ್ತೇವೆ. ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಆಗಲಿದೆ. ಜಾತಿ ಹೆಸರನ್ನು ರಾಜಕೀಯ ಮಾಡೋದು ಬೇರೆ. ಸರ್ಕಾರ ರೈತನ್ನು ಕರೆದು ಮಾತನಾಡಲಿ. ಗೋ, ಜಾತಿ ಮೇಲೆ ರಾಜಕೀಯ ಮಾಡೋದು ಸರಿಯಲ್ಲ ಎಂದರು.


ಧಾರವಾಡ ಪ್ರವೇಶ ಕೋರಿ ಅರ್ಜಿ : ಧಾರವಾಡ ಪ್ರವೇಶಕ್ಕೆ ಕೋರಿ ಮತ್ತೆ ಅರ್ಜಿ ಸಲ್ಲುಸುತ್ತೇನೆ. ಈಗ ಆದ್ರು ನನಗೆ ಪ್ರವೇಶ ಅನುಮತಿ ಕೊಡ್ತಾರೆ ಅನ್ನೋ ಭರವಸೆ ಇದೆ. ನನ್ನ ಮೇಲೆ ಭರವಸೆ ಇಟ್ಟು ಜನ ಗೆಲ್ಲಿಸಿದ್ದಾರೆ. ಐದು ವರ್ಷ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಅತಿವೃಷ್ಠಿಯಿಂದ ಮನೆ ಬಿದ್ದ ಗಂಭೀರ ಸ್ಥಿತಿ ಕ್ಷೇತ್ರದಲ್ಲಿ ಇದೆ. ರಾಜಕೀಯವಾಗಿ ನಮ್ಮನ್ನು ಬೆಂಬಲಿಸಿದವರಿಗೆ ಅನ್ಯಾಯ ಆಗಿದೆ. ಸರ್ವೇ ಮಾಡಿಸಿ ಪರಿಹಾರ ಕೊಡೊ ಕೆಲಸ ಮಾಡ್ತಿವಿ‌. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಟೀಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೈಯಲ್ಲಿ ಆಗದೇ ಇರೋವರು ಮೈಯಲ್ಲಿ ಪರಚಿಕೊಂಡಂತೆ‌ ಆಗಿದೆ. ಚುನಾವಣೆ ಪೂರ್ವದಲ್ಲಿ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ ಎಂದು ಶಾಸಕ ವಿನಯ್‌ ಕುಲಕರ್ಣಿ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ