ಬೆಂಗಳೂರು: ಬಿಜೆಪಿ ಹಾಗೂ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕಾಂಗ್ರೆಸ್ ಆರೋಪಿಸಿದೆ. ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ, ಹೈನುಗಾರರ ಮೇಲೆ ಕಾಂಗ್ರೆಸ್ ಸರ್ಕಾರ ಬರೆ ಎಳೆದಿದೆ ಎಂದು ಟೀಕಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಮನ್ಮೂಲ್ ಹಾಲು ಒಕ್ಕೂಟವು ಬೇಸಿಗೆಯ ಮೇವು ಕೊರತೆಯ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಹೆಚ್ಚುವರಿ ಪ್ರೋತ್ಸಾಹ ಧನ ನೀಡಿತ್ತು, ಮಳೆಗಾಲ ಶುರುವಾದ ಕಾರಣ ಅದನ್ನು ಹಿಂಪಡೆದಿದೆ, ಈ ಪ್ರೋತ್ಸಾಹ ಧನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಇದು ಒಕ್ಕೂಟದ ನಿರ್ಧಾರ. ಬಿಜೆಪಿ ಇಂತಹ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುವ ಬದಲು 7 ತಿಂಗಳಿಂದ ಸರ್ಕಾರದ ಪ್ರೋತ್ಸಾಹ ಧನ ನೀಡದಿರುವುದೇಕೆ ಹೇಳಲಿ’ ಎಂದು ಪ್ರಶ್ನಿಸಿದೆ.
ಬಿಜೆಪಿ ಹಾಗೂ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ,
ಮನ್ಮೂಲ್ ಹಾಲು ಒಕ್ಕೂಟವು ಬೇಸಿಗೆಯ ಮೇವು ಕೊರತೆಯ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಹೆಚ್ಚುವರಿ ಪ್ರೋತ್ಸಾಹಧನ ನೀಡಿತ್ತು, ಮಳೆಗಾಲ ಶುರುವಾದ ಕಾರಣ ಅದನ್ನು ಹಿಂಪಡೆದಿದೆ,
ಈ ಪ್ರೋತ್ಸಾಹಧನಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ, ಇದು ಒಕ್ಕೂಟದ ನಿರ್ಧಾರ.@BJP4Karnataka ಇಂತಹ… https://t.co/qRCDpZphP5
— Karnataka Congress (@INCKarnataka) June 4, 2023
ಇದನ್ನೂ ಓದಿ: ಸಚಿವ ಸಂಪುಟದ ತೀರ್ಮಾದ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ
ಇನ್ನು ವಿದ್ಯುತ್ ದರ ಏರಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ‘ಬಿಜೆಪಿಯಂತಹ ಬಂಡತನದ ರಾಜಕೀಯ ಪಕ್ಷ ಬೇರೊಂದಿಲ್ಲ! ಚುನಾವಣೆಗೂ ಮುನ್ನ ರಾಜ್ಯದ ವಿದ್ಯುತ್ ದರ ಏರಿಕೆಯ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು ಬಿಜೆಪಿ ಸರ್ಕಾರ. ತಮ್ಮದೇ ಅವಧಿಯಲ್ಲಿ ಮಾಡಿದ ಆದೇಶವನ್ನು ಹಿಡಿದು ಇಂದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟ ಬಿಜೆಪಿ ಜನರನ್ನು ಮೂರ್ಖರೆಂದು ತಿಳಿದಿದೆಯೇ? ನಮ್ಮ ಸರ್ಕಾರ ರಚನೆಯಾಗುವ ಮುಂಚಿನ ಈ ವರದಿಗಳ ಬಗ್ಗೆ ಬಿಜೆಪಿ ತುಟಿ ಬಿಚ್ಚುವುದೇ?’ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಮಾನವೀಯತೆಯಿಲ್ಲ!
ಮನ್ಮುಲ್ ಹಾಲಿನ ದರದಲ್ಲಿ ಲೀಟರ್ಗೆ 1 ರೂ. ಕಡಿತ ವಿಚಾರವಾಗಿ ಟ್ವೀಟ್ ಮಾಡಿದ್ದ ಬಿಜೆಪಿ, ‘ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಮಾನವೀಯತೆ ಉಳಿದ ಹಾಗಿಲ್ಲ! ಒಂದು ಕಡೆ ಕೊಟ್ಟ ಹಾಗೆ ಮಾಡುವುದು, ಮತ್ತೊಂದು ಕಡೆ ಅದನ್ನು ಕಸಿದುಕೊಳ್ಳುವುದು ಕಾಂಗ್ರೆಸ್ನ ಹಳೆ ಚಾಳಿ. ಇದೀಗ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ಕಡಿತಗೊಳಿಸಿ, ಹೈನುಗಾರರ ಮೇಲೆ ಬರೆ ಎಳೆದಿದೆ ಕಾಂಗ್ರೆಸ್ ಸರ್ಕಾರ! ಈ ರೈತ ವಿರೋಧಿ ಆದೇಶವನ್ನು ಹಿಂಪಡೆದು ರೈತರ ಹಕ್ಕನ್ನು ಮರಳಿಸುವಂತೆ ನಾವು ಆಗ್ರಹಿಸುತ್ತೇವೆ’ ಎಂದು ಹೇಳಿದೆ.
ಇದನ್ನೂ ಓದಿ: ಗೃಹಲಕ್ಷ್ಮಿಯೋಜನೆಗೆ ದಾಖಲಾತಿ ಕಡ್ಡಾಯ ಸಿಎಂ ಸಿದ್ದರಾಮಯ್ಯ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.