ಶಿವಮೊಗ್ಗ: 'ಮಲೆನಾಡಿನ ಹೆಬ್ಬಾಗಿಲು' ಎಂಬ ಕೀರ್ತಿ ಪತಾಕೆ ಹೊಂದಿರುವ ಶಿವಮೊಗ್ಗದಲ್ಲಿ ಮೊಬೈಲ್ ಕಳ್ಳರ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ‌. ಹೀಗೆ ಕಳವು ಮಾಡಿದ ಮೊಬೈಲ್ ಹಂಚಿಕೊಳ್ಳುವಾಗಲೇ ಒಬ್ಬನನ್ನ ಭದ್ರಾವತಿಯ ಹೊಸಮನೆ ಠಾಣೆ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಯ್ಯದ್ ಅಲ್ವಿ ಬಂಧಿತ ಆರೋಪಿ. ಹೊಸಮನೆ ಠಾಣೆ ವ್ಯಾಪ್ತಿಯ ಸಂತೆ ಮೈದಾನದಲ್ಲಿ ಮೂವರು ಆರೋಪಿಗಳು ಕದ್ದು ತಂದಿದ್ದ ಮೊಬೈಲ್ (Mobile) ಹಂಚಿಕೊಳ್ಳುತ್ತಿದ್ದರು. ಈ ಕುರಿತು ಸಿಕ್ಕ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಪೊಲೀಸರು ದಾಳಿ ನಡೆಸಿದಾಗ ಇಬ್ಬರು ಖದೀಮರು ಎಸ್ಕೇಪ್ ಆಗಿದ್ದಾರೆ.


ಇದನ್ನೂ ಓದಿ- 40 ಕೋಟಿ ಮೌಲ್ಯದ ಆಸ್ತಿಗಾಗಿ ಪತ್ನಿಯ ಮರ್ಡರ್..! ಕೊಲೆಗೆ ಸಾಥ್ ನೀಡಿದ್ದಳಾ ಪುತ್ರಿ ?


ಹೊರ ರಾಜ್ಯದಲ್ಲೂ ಲಿಂಕ್..?
ಬಂಧಿತ ಆರೋಪಿಯಿಂದ  ಮಹಾರಾಷ್ಟ್ರದ (Maharashtra) ವಿವಿಧೆಡೆ ಕಳವು ಮಾಡಿ ತಂದಿದ್ದ ಅಂದಾಜು ₹6.68 ಲಕ್ಷ ರೂಪಾಯಿ ಬೆಲೆ ಬಾಳುವ 55 ಮೊಬೈಲ್ ಫೋನ್ ಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಮೂಲಕ ಆರೋಪಿಗಳು ಹೊರ ರಾಜ್ಯದಲ್ಲೂ ಕಳವು ಮಾಡಿರುವ ಬಗ್ಗೆ ಡೌಟ್ ಬಂದಿದೆ. 


ಇದನ್ನೂ ಓದಿ- New Year Party: ಪಾರ್ಟಿ ಪ್ರಿಯರೇ ಗಮನಿಸಿ..! ಈ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್


ಬಂಧಿತ ಆರೋಪಿಗಳಿಗೆ ಬೇರೆ ರಾಜ್ಯದಲ್ಲೂ ಲಿಂಕ್ ಇರುವ ಅನುಮಾನ ಮೂಡಿದೆ. ಈ ಕುರಿತಂತೆ ಪೊಲೀಸರು ತನಿಖೆಯನ್ನ ಮುಂದುವರಿಸಿದ್ದು, ಎಸ್ಕೇಪ್ ಆದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.