New Year Party: ಪಾರ್ಟಿ ಪ್ರಿಯರೇ ಗಮನಿಸಿ..! ಈ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್

ಪಾರ್ಟಿ ಪ್ರಿಯರಿಗೆ ನಂದಿ ಹಿಲ್ಸ್ (Nandi Hills) ಅತ್ಯಂತ ಪ್ರಿಯವಾದ ಸ್ಥಳ. ವಾರಾಂತ್ಯದಲ್ಲೇ ಕಿಕ್ಕಿರಿದು ತುಂಬಿ ಹೋಗುವ ನಂದಿ ಬೆಟ್ಟದಲ್ಲಿ ನ್ಯೂ ಇಯರ್ ಪಾರ್ಟಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.

Written by - Zee Kannada News Desk | Edited by - Yashaswini V | Last Updated : Dec 31, 2021, 10:47 AM IST
  • ಹೊಸವರ್ಷಕ್ಕೆ ಭರ್ಜರಿ ಪಾರ್ಟಿ ಮಾಡಲು ತಯಾರಿ ನಡೆಸಿದ್ದವರಿಗೆ ಬಿಗ್ ಶಾಕ್
  • ಪ್ರಸಿದ್ದ ಪ್ರವಾಸಿ ತಾಣಗಳಲ್ಲಿ ಡಿಸೆಂಬರ್ 30ರ ಸಂಜೆ 6ರಿಂದ ಜನವರಿ 2ರ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ
  • ಹಾಗೇ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ
New Year Party: ಪಾರ್ಟಿ ಪ್ರಿಯರೇ ಗಮನಿಸಿ..! ಈ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್  title=
Representational Image

New Year Party: ಹೊಸವರ್ಷಕ್ಕೆ ಭರ್ಜರಿ ಪಾರ್ಟಿ ಮಾಡಲು ತಯಾರಿ ನಡೆಸಿದ್ದವರಿಗೆ ಬಿಗ್ ಶಾಕ್ ಸಿಕ್ಕಿದೆ. ಪ್ರವಾಸಿಗರ ನೆಚ್ಚಿನ ತಾಣ ನಂದಿ ಹಿಲ್ಸ್ (Nandi Hills) ನಿನ್ನೆಯಿಂದಲೇ ಬಂದ್ ಆಗಿದೆ. ನಿನ್ನೆ ಸಂಜೆ 6 ಗಂಟೆ ಬಳಿಕ ನಂದಿ ಗಿರಿಧಾಮ ಸಂಪೂರ್ಣ ಖಾಲಿಯಾಗಿದೆ. ಪ್ರವಾಸಿಗರು ಅಲ್ಲಿಂದ ಗಂಟುಮೂಟೆ ಕಟ್ಟಿದ್ದಾರೆ. ಒಮಿಕ್ರಾನ್ ಭೀತಿ ಹಿನ್ನೆಲೆ ರಾಜ್ಯದ ವಿವಿಧೆಡೆ ಪ್ರವಾಸಿ ತಾಣಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ನಂದಿ ಹಿಲ್ಸ್ ಕೂಡ ಇದೇ ರೀತಿ ಬಂದ್ ಆಗಿದೆ.

ಪಾರ್ಟಿಗೆ ಬಿತ್ತು ಬ್ರೇಕ್..!
ಡಿಸೆಂಬರ್ 30ರ ಸಂಜೆ 6ರಿಂದ ಜನವರಿ 2ರ ಬೆಳಗ್ಗೆ 6ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಹಾಗೇ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪಾರ್ಟಿ ಪ್ರಿಯರಿಗೆ ನಂದಿ ಹಿಲ್ಸ್ (Nandi Hills) ಅತ್ಯಂತ ಪ್ರಿಯವಾದ ಸ್ಥಳ. ವಾರಾಂತ್ಯದಲ್ಲೇ ಕಿಕ್ಕಿರಿದು ತುಂಬಿ ಹೋಗುವ ನಂದಿ ಬೆಟ್ಟದಲ್ಲಿ ನ್ಯೂ ಇಯರ್ ಪಾರ್ಟಿ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.

ಇದನ್ನೂ ಓದಿ- ಡಿ.ಎಸ್ ನಾಗಭೂಷಣ ಅವರ ಗಾಂಧೀ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಜಿಲ್ಲಾಡಳಿತದ ಸ್ಪಷ್ಟನೆ..!
ನಂದಿ ಗಿರಿಧಾಮದಲ್ಲಿ ನಿಷೇಧಾಜ್ಞೆ ಹೇರಿರುವ ಜಿಲ್ಲಾಡಳಿತ ಇದಕ್ಕೆ ಸ್ಪಷ್ಟನೆ ನೀಡಿದೆ. ಹೊಸವರ್ಷಾಚರಣೆಗೆ (New Year Celebration) ಸಾವಿರಾರು ಜನ ನಂದಿ ಹಿಲ್ಸ್ ಗೆ ಬರುವ ಸಾಧ್ಯತೆ ಇದ್ದು. ಒಮಿಕ್ರಾನ್ ಭೀತಿ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ. ಅಲ್ಲದೆ ಪರಿಸರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಡಿ.31 ರ ಮಧ್ಯರಾತ್ರಿ ಹಾಗೂ 2022ರ ಜನವರಿ 1 ರಂದು ನಂದಿ ಗಿರಿಧಾಮದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ- JOBS:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಪೋಷಣ ಅಭಿಯಾನ ಯೋಜನೆಯಡಿ ಅರ್ಜಿ ಆಹ್ವಾನ

ಕೆಆರ್‌ಎಸ್ ಸುತ್ತಮುತ್ತ ನಿಷೇಧಾಜ್ಞೆ:
ಮಂಡ್ಯ: ಕಾವೇರಿ ನದಿ (Cauvery River) ತೀರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದ್ದು, ಕೆಆರ್‌ಎಸ್ ಸುತ್ತಮುತ್ತಲ ಪ್ರವಾಸಿ ತಾಣಗಳಲ್ಲಿ ಇಂದು ಬೆಳಗ್ಗೆಯಿಂದ ನಾಳೆ ರಾತ್ರಿ 10 ಗಂಟೆ ತನಕ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಬಲಮುರಿ, ಎಡಮುರಿ ಸೇರಿದಂತೆ ಕೆಆರ್‌ಎಸ್ ಡ್ಯಾಂ ಸುತ್ತಮುತ್ತಲ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾ ರವೀಂದ್ರ ಆದೇಶ ಹೊರಡಿಸಿದ್ದಾರೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News