ಹೂವಿನ ಹಿಪ್ಪರಗಿ: ಮೋದಿಯವರು ಅಚ್ಚೇದಿನ ಎನ್ನುತ್ತಲೇ ಬಡವರಿಗೆ ಸಂಕಷ್ಟದ ದಿನಗಳನ್ನು ತಂದಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.


COMMERCIAL BREAK
SCROLL TO CONTINUE READING

ಅವರು ಹೂವಿನ ಹಿಪ್ಪರಗಿಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರ ಪರವಾಗಿ ಜರುಗಿದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.


ಇದನ್ನೂ ಓದಿ-Whats App ಶೀಘ್ರದಲ್ಲೇ ಪಾಪ ಮಾಡುವವರಿಗೆ ಶಿಕ್ಷೆ ನೀಡಲಿದೆ!


ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಸಿದೆ. ಮೊಸರು, ಮಕ್ಕಳು ಬಳಸುವ ಪೆನ್ಸಿಲ್-ನೋಟ್ ಬುಕ್ ಸಹಿತ ಹಲವು ವಸ್ತುಗಳ ಮೇಲೆ GST ಹೊರೆ ಬಿದ್ದಿದೆ ಎಂದು ಅವರು ದೂರಿದರು.


ಇದನ್ನೂ ಓದಿ-ಭಾರತದಿಂದ ಗಂಟುಮೂಟೆ ಕಟ್ಟುವ ಬೆದರಿಕೆ ಹಾಕಿದ WhatsApp, ಅಷ್ಟಾಗ್ಯೂ ಕೋರ್ಟ್ ನಲ್ಲಿ ನಡೆದಿದ್ದೇನು?


ರಮೇಶ್ ಜಿಗಣಗಿಯವರು ಇಲ್ಲಿಂದ 3 ಬಾರಿ ಸಂಸದರಾಗಿ ತೆರಳಿದ್ದರೂ ಜಿಲ್ಲೆಗೆ ಏನೂ ಉಪಯೋಗವಾಗಿಲ್ಲ. ಈ ಬಾರಿ ಅವರನ್ನು ಬದಲಿಸಿ, ನಮ್ಮ ಪಕ್ಷದ ಅಭ್ಯರ್ಥಿ ಶ್ರೀ ರಾಜು ಆಲಗೂರ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದೆ. ಈ ವೇಳೆ ಜನ ಹರ್ಷೋದ್ಘಾರ ಮಾಡಿ ನನ್ನ ಮಾತಿಗೆ ಸಹಮತ ವ್ಯಕ್ತಪಡಿಸಿದರು ಎಂದು ಅವರು ಹೇಳಿದರು.


ನಮ್ಮ ಪಕ್ಷದ ಜನಪರ ಕಾಳಜಿ, ತತ್ವ ಆದರ್ಶಗಳಿಗೆ ಮನಸೋತು ಅನೇಕರು ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು.ಇದರಿಂದಾಗಿ ನಮ್ಮ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಿದೆ.ಎಲ್ಲೆಡೆ ಯಶಸ್ವಿಯಾಗಿ ಜಾರಿಗೊಂಡಿರುವ #ನಮ್ಮಸರ್ಕಾರ ದಗ್ಯಾರಂಟಿಗಳು, ಸಾರ್ವಜನಿಕರ ಸ್ಪಂದನೆ, ನಮ್ಮ ಕಾರ್ಯಕರ್ತರ ಉತ್ಸಾಹ, ಇವೆಲ್ಲವನ್ನೂ ಗಮನಿಸುತ್ತಿದ್ದರೆ ಈ ಬಾರಿ ವಿಜಯಪುರದಲ್ಲಿ ಕಾಂಗ್ರೆಸ್ ವಿಜಯಪತಾಕೆ ಹಾರಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.