Mohammed Nalapad : ಡಿ.31ರ ಬಳಿಕ `ಯುವ ಕಾಂಗ್ರೆಸ್ ನೂತನ ಅಧ್ಯಕ್ಷ`ರಾಗಿ ನಲಪಾಡ್ ಆಯ್ಕೆ
ಯುವ ಕಾಂಗ್ರೆಸ್ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಯಾಗಲಿದ್ದಾರೆ ರಕ್ಷರಾಮಯ್ಯ
ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಆಯ್ಕೆ ಆಗಿದ್ದು, ಡಿಸೆಂಬರ್ 31ರ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸಹಮತ ಸೂಚಿಸಿದ್ದಾರೆ.
ಡಿಸೆಂಬರ್ 31ರವರೆಗೂ ಹಾಲಿ ಅಧ್ಯಕ್ಷ ರಕ್ಷ ರಾಮಯ್ಯ ಅಧ್ಯಕ್ಷರಾಗಿ ಮುಂದುವರೆಯಲಿದ್ದು, ನಂತರ ಯುವ ಕಾಂಗ್ರೆಸ್ ರಾಷ್ಟ್ರೀಯ ಸಮಿತಿಯ ಪದಾಧಿಕಾರಿಯಾಗಲಿದ್ದಾರೆ. ಬಳಿಕ ನಲಪಾಡ್(Mohammed Nalapad) ನೂತನ ಅಧ್ಯಕ್ಷರಾಗಲಿದ್ದಾರೆ.
ಇದನ್ನೂ ಓದಿ : Heavy Rain in Karnataka : ಇಂದು ಮತ್ತು ನಾಳೆ ರಾಜ್ಯದಲ್ಲಿ ಭಾರೀ ಮಳೆ!
ನಿನ್ನೆ(ಜೂನ್ 29) ತಡರಾತ್ರಿಯವರೆಗೂ ನಡೆದ ಸಭೆಯಲ್ಲಿ ನಲಪಾಡ್ ಮತ್ತು ರಕ್ಷ ರಾಮಯ್ಯ ಇಬ್ಬರಿಗೆ ಸಂಧಾನ ಮಾಡಿ. ಬಳಿಕ ಡಿಕೆ ಶಿವಕುಮಾರ್(DK Shivakumar) ಮತ್ತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಇದಕ್ಕೆ ಇಬ್ಬರು ನಾಯಕರು ಸಹಮತ ಸೂಚಿಸಿದ್ದಾರೆ.
ಇದನ್ನೂ ಓದಿ : Anganwadi Recruitment 2021: ಪರೀಕ್ಷೆಯಿಲ್ಲದೆಯೇ ಅಂಗನವಾಡಿಯಲ್ಲಿ ಕೆಲಸ, ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ
ರಕ್ಷ ರಾಮಯ್ಯ ಸಿದ್ದರಾಮಯ್ಯ(Siddaramaiah) ಬಣದಲ್ಲಿದ್ದು, ನಲಪಾಡ್ ಗೆ ಡಿಕೆ ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿದ್ದರು. ಫೆಬ್ರವರಿಯಲ್ಲಿ ನಡೆದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ನಲಪಾಡ್, ರಕ್ಷ ರಾಮಯ್ಯಗಿಂತ 14ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದಾರೆ.
ಇದನ್ನೂ ಓದಿ : Karnataka Unlock 3.O : ರಾಜ್ಯದಲ್ಲಿ ಜುಲೈ 5 ರಿಂದ ಅನ್ ಲಾಕ್ 3.O : ಯಾವುದಕ್ಕೆಲ್ಲಾ ಅನುಮತಿ?
ನಲ್ಲಪಾಡ್ ಕ್ರಿಮಿನಲ್ ಹಿನ್ನಲೆ ಇದೆ ಎಂಬ ಕಾರಣಕ್ಕಾಗಿ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಹಾಗಾಗಿ ರಕ್ಷರಾಮಯ್ಯ(Raksha Ramaiah) ಅಧಿಕೃತವಾಗಿ ಅಧ್ಯಕ್ಷರಾಗಿ ಘೋಷಣೆ ಮಾಡಲಾಗಿತ್ತು. ಆದ್ರೆ, ನಲಪಾಡ್ ಇದನ್ನು ಒಪ್ಪಿಕೊಳ್ಳದೆ ಪರ್ಯಾಯವಾಗಿ ಯುವ ಕಾಂಗ್ರೆಸ್ ಸಂಘಟನೆ ಮಾಡುತ್ತಿದ್ದರು. ಕೊರೋನಾ ಸಮಯದಲ್ಲಿ ನಾನೇ ಅಧ್ಯಕ್ಷ ಎಂಬಂತೆ ಎಲ್ಲೆಡೆ ಓಡಾಡಿ ಕೆಲಸ ಮಾಡುತ್ತಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಅವರ ಬೆಂಬಲವಿತ್ತು ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.